ಕೆಎಲ್ ರಾಹುಲ್ LSG ನಾಯಕತ್ವ ಬಿಡುವುದು ಪಕ್ಕಾ: ಕ್ಯಾಪ್ಟನ್ ರೇಸ್‌ನಲ್ಲಿದ್ದಾರೆ ಇಬ್ಬರು ಸ್ಟಾರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೆ ಇನ್ನು ತಿಂಗಳುಗಳೇ ಬಾಕಿ ಇವೆ. ಆದರೆ ಈ ಬಾರಿ ಐಪಿಎಲ್ ಹವಾ ಈಗಿನಿಂದಲೇ ಆರಂಭವಾಗಿದೆ. ಈ ಬಾರಿ ಮೆಗಾ ಆಕ್ಷನ್ ನಡೆಯಲಿದ್ದು, ಅಭಿಮಾನಿಗಳು ಹಾಗೂ ಮಾಲೀಕರ ಚಿತ್ತವನ್ನು ಕದ್ದಿದೆ. ಈ ವೇಳೆ ಅಭಿಮಾನಿಗಳು ಯಾವ ಆಟಗಾರನಿಗೆ ಹೆಚ್ಚಿನ ಮೊತ್ತ ಸಿಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.
ಹಲವು ತಂಡಗಳು ಈ ಐಪಿಎಲ್ ಆಕ್ಷನ್‌ಗೆ ಈಗಿನಿಂದಲೇ ಭರದಿಂದ ತಯಾರಿ ನಡೆಸಿವೆ. ದೇಶದಲ್ಲಿ ಕ್ರಿಕೆಟ್ ಲೀಗ್‌ಗಳು ಹಲವು ರಾಜ್ಯಗಳಲ್ಲಿ ನಡೆಯುತ್ತಿದ್ದು, ಇದರ ಮೇಲೆ ಕಣ್ಣು ನೆಟ್ಟಿವೆ. ಎಲ್ಲ ತಂಡಗಳು ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೊರತಾಗಿಲ್ಲ. ಇನ್ನು ಎಲ್‌ಎಸ್‌ಜಿ ಕ್ಯಾಂಪ್‌ನಿಂದ ಮತ್ತೊಂದು ಸುದ್ದಿ ಹೊರ ಬಂದಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ರಾಹುಲ್ ಎಲ್‌ಎಸ್‌ಜಿ ನಾಯಕ ಬಿಡುವುದು ಪಕ್ಕಾ?
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಈ ಬಾರಿ ಲಕ್ನೋ ತಂಡದ ನಾಯಕರಾಗಿ ಕಾಣಿಸಿಕೊಳ್ಳುವುದು ಡೌಟ್. ಇವರು ನಾಯಕರಾಗಿದ್ದಾಗ, ಮಾಲೀಕ ಸಜೀವ್ ಗೋಯಂಕಾ ಅವರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಈ ವಿಡಿಯೋ ಬಹಿರಂಗವಾದಾಗಲೇ ರಾಹುಲ್ ಇನ್ನು, ಆ ತಂಡದಲ್ಲಿ ಇರುವುದು ಡೌಟ್ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚಿಗೆ ನಡೆದ ಫ್ರಾಂಚೈಸಿ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರವನ್ನು ಕೈ ಗೊಳ್ಳಲಾಗಿದೆ.
ಎಲ್‌ಎಸ್‌ಜಿ ನಾಯಕನನ್ನು ಹುಡುಕುತ್ತಿದೆ. ಈಗಾಗಲೇ ಮ್ಯಾನೇಜ್ಮೆಂಟ್ ಮುಂದೆ ಇಬ್ಬರು ಆಟಗಾರರ ಹೆಸರುಗಳು ಓಡುತ್ತಿವೆ. ಹೀಗಿರುವಾಗಿ ರಾಹುಲ್ ಇನ್ನು ನಾಯಕರಾಗಿ ಈ ತಂಡದ ಪರ ಆಡುವುದಿಲ್ಲ ಎಂದಾದರೆ, ಇವರನ್ನು ತಂಡದಲ್ಲಿ ಇಟ್ಟುಕೊಳ್ಳುವ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಸೋಮವಾರ ಮಹತ್ವದ ಸಭೆ
ಎಲ್‌ಎಸ್‌ಜಿ ತಂಡ ಸೋಮವಾರ ಮಹತ್ವದ ಸಭೆಯನ್ನು ನಡೆಸಿದ ಎಂದು ತಂಡದ ಮೂಲಗಳು ತಿಳಿಸಿವೆ. ಈ ವೇಳೆ ತಂಡದ ನಾಯಕತ್ವದ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದೆ. ಗೋಯಂಕಾ ರಾಹುಲ್ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದು, ಅವರನ್ನು ತಂಡದಲ್ಲಿ ಆಟಗಾರನಾಗಿ ಉಳಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ಈ ವೇಳೆ ತಂಡದ ನಾಯಕತ್ವವನ್ನು ಬೇರೆ ಆಟಗಾರರಿಗೆ ನೀಡಬೇಕೆಂದು ಚರ್ಚಿಸಲಾಗಿದೆ.
ನಾಯಕತ್ವದ ರೇಸ್‌ನಲ್ಲಿ ಯಾರು?
ನಾಯಕನ ರೇಸ್‌ನಲ್ಲಿ ಇಬ್ಬರು ಆಟಗಾರರು ಇದ್ದಾರೆ ಎಂದು ತಿಳಿದು ಬಂದಿದೆ. ಅನುಭವಿ ಆಟಗಾರರಾದ ಕೃನಾಲ್ ಪಾಂಡ್ಯ ಹಾಗೂ ನಿಕೋಲಸ್ ಪೋರನ್ ಅವರನ್ನು ಉಳಿಸಿಕೊಂಡು ಪಟ್ಟ ಕಟ್ಟುವ ಯೋಚನೆಯನ್ನು ಮ್ಯಾನೇಜ್ಮೆಂಟ್ ಮಾಡುತ್ತಿದೆ.
ತಂಡದ ನಾಯಕ ಆಗದೇ ಇದ್ದ ಪಕ್ಷದಲ್ಲಿ ರಾಹುಲ್ ತಂಡದಲ್ಲಿ ಉಳಿಯುತ್ತರಾ ಎಂಬ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿವೆ. ಈ ವೇಳೆ ಅವರನ್ನು ಕೈ ಬಿಟ್ಟಿದ್ದೇ ಆದಲ್ಲಿ ಅವರಿಗೆ ಹರಾಜಿನಲ್ಲಿ ಭಾರೀ ಮೊತ್ತವನ್ನು ನೀಡಲು ಫ್ರಾಂಚೈಸಿಗಳು ಪ್ಲ್ಯಾನ್ ಮಾಡಿಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications