For Quick Alerts
ALLOW NOTIFICATIONS  
For Daily Alerts
 

IPL 2025 LSG: 3 ಕ್ಯಾಪ್ಡ್‌, 2 ಅನ್‌ ಕ್ಯಾಪ್ಡ್‌ ಪ್ಲೇಯರ್ಸ್‌ಗೆ ರೆಡ್ ಕಾರ್ಪೆಟ್‌: ಹರಾಜು ಅಂಗಳಕ್ಕೆ ಕನ್ನಡಿಗ?

ಐಪಿಎಲ್‌ ಮಾಲೀಕರು ಈಗ ಫುಲ್‌ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಯಾವ ಪ್ಲೇಯರ್‌ನನ್ನು ಉಳಿಸಿಕೊಳ್ಳಬೇಕು? ಯಾರನ್ನು ಕೈ ಬಿಡಬೇಕು ಎಂಬ ಚರ್ಚೆ ವ್ಯಾಪಕವಾಗಿದೆ. ಈ ಬೆನ್ನಲ್ಲೆ ಲಕ್ನೋ ಸೂಪರ್‌ ಜೈಂಟ್ಸ್ ತಂಡ ಯಾರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಬಾರಿ ಎಲ್‌ಎಸ್‌ಜಿ ಇಬ್ಬರು ಅನ್‌ಕ್ಯಾಪ್ಡ್‌ ಪ್ಲೇಯರ್‌ಗೆ ಮಣೆ ಹಾಕುವ ಸಾಧ್ಯತೆ ಇದೆ.

ಬಿಸಿಸಿಐ ಈಗಾಗಲೇ ರಿಟೇನ್ಷನ್‌ ಪಾಲೀಸ್‌ ನಿಯಮಗಳನ್ನು ರಿಲೀಸ್ ಮಾಡಿದೆ. ಇದರ ಅನುಸಾರ ಒಟ್ಟು ಒಂದು ತಂಡ ಆರು ಜನ ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಅಂದಹಾಗೆ ಇದರಲ್ಲಿ ರೈಟ್‌ ಟು ಮ್ಯಾಚ್‌ ಕಾರ್ಡ್‌ ಆಕ್ಷನ್‌ ಸಹ ಸೇರಿದೆ. ತಾವು ಉಳಿಸಿಕೊಂಡ ಪಟ್ಟಿ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಮಾಲೀಕರು ಅಕ್ಟೋಬರ್‌ 31 ರೊಳಗೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್‌ಎಸ್‌ಜಿ ಸಹ ಚಿತ್ತ ನೆಟ್ಟಿದೆ.

KL Rahul Likely to Miss Retention for IPL 2025 Nicholas Pooran May Lead Lucknow Super Giants

ಕೆಎಲ್‌ಗೆ ಇಲ್ಲ ಸ್ಥಾನ

ಎಲ್‌ಎಸ್‌ಜಿ ನಾಯಕ ಕೆಎಲ್‌ ರಾಹುಲ್‌ ಅವರಿಗೂ ಹಾಗೂ ಮಾಲೀಕ ಸಂಜಯ್ ಗೋಯಂಕಾ ನಡುವೆ ಕಳೆದ ವರ್ಷ ಮಾತಿನ ಚಕಮಕಿ ನಡೆದಿತ್ತು. ಈ ದೃಶ್ಯ ನೋಡಿದ ಮೇಲೆ ಕೆಎಲ್‌ ರಾಹುಲ್‌ರನ್ನು ಎಲ್‌ಎಸ್‌ಜಿ ಉಳಿಸಿಕೊಳ್ಳುವುದು ಡೌಟ್ ಎಂದು ಹೇಳಲಾಗಿತ್ತು. ಆದರೆ ಕೆಲ ತಿಂಗಳ ಹಿಂದೆ ತಂಡದ ಮಾಲೀಕರು ರಾಹುಲ್ ಅವರನ್ನು ಆಟಗಾರನಾಗಿ ಉಳಿಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ರಾಹುಲ್‌ ಅವರನ್ನು ಎಲ್‌ಎಸ್‌ಜಿ ಕೈ ಬಿಡುವ ಸಾಧ್ಯತೆ ಇದೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್‌ ತಂಡ 5 ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ಪಟ್ಟಿಯಲ್ಲಿ ಕನ್ನಡಿಗ ರಾಹುಲ್‌ಗೆ ಸ್ಥಾನವಿಲ್ಲ. ಕೆಎಲ್‌ ಮೂರು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ರು. ಆದರೆ ಇವರ ನಾಯಕತ್ವದಲ್ಲಿ ಲಕ್ನೋ ಒಮ್ಮೆಯೂ ಕಪ್‌ ಗೆಲ್ಲದೇ ಇರುವುದರೊಂದ ಇವರನ್ನು ಕೆಳಗಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಅವರ ಸ್ಟ್ರೈಕ್‌ ರೇಟ್‌ ಸಹ ಪ್ರಶ್ನೆಗಳು ಏಳುವಂತೆ ಮಾಡಿವೆ.

KL Rahul Likely to Miss Retention for IPL 2025 Nicholas Pooran May Lead Lucknow Super Giants

ಯಾರಿಗೆ ಸ್ಥಾನ?

ನಿಕೋಲಸ್ ಪುರನ್, ಮಯಾಂಕ್ ಯಾದವ್, ರವಿ ಬಿಷ್ಣೋಯ್ ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ವರದಿಗಳು ಬಂದಿವೆ. ಇನ್ನು ಅನ್‌ಕ್ಯಾಪ್ಡ್‌ ಆಟಗಾರರ ಪಟ್ಟಿಯಲ್ಲಿ ಮೊಹ್ಸಿನ್‌ ಖಾನ್‌, ಆಯುಷ್ ಬದೋನಿ ಹೆಸರುಗಳು ಕೇಳಿ ಬರುತ್ತಿವೆ. ಈ ಐವರು ಆಟಗಾರರು ಲಖನೌ ತಂಡಕ್ಕೆ ಮರಳುವುದು ಬಹುತೇಕ ಪಕ್ಕಾ. ಇದರ ಜೊತೆಗೆ ತಂಡಕ್ಕೆ ಒಂದು ಆರ್‌ಟಿಎಂ ಅವಕಾಶ ಸಿಗಲಿದೆ.

ಯಾರಿಗೆ ಗರಿಷ್ಠ ಮೊತ್ತ?

ಸದ್ಯದ ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನ್ನು ಗಮನಿಸಿದ ಎಲ್‌ಎಸ್‌ಜಿ ನಿಕೋಲಸ್ ಪೂರನ್‌ ಅವರನ್ನು ಉಳಿಸಿಕೊಳ್ಳಲಿದೆ. ಅಲ್ಲದೆ ಇವರಿಗೆ ನಾಯಕತ್ವದ ಹೊಣೆಯನ್ನು ನೀಡುವ ಸಾಧ್ಯತೆ ಇದೆ. ಇವರು ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಇವರಿಗೆ 18 ಕೋಟಿ ರೂ. ನೀಡುವ ಸಂಭವವಿದೆ. ಇವರು ಸಹ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿ ಮಿಂಚು ಹರಿಸಬಲ್ಲರು. ಐಪಿಎಲ್‌ನಲ್ಲಿ ಆಡಿದ ಪಂದ್ಯಗಳಲ್ಲಿ 9 ಅರ್ಧ ಶತಕಗಳನ್ನುಇವರು ಬಾರಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮಯಾಂಕ್‌ ಯಾದವ್‌ ತಮ್ಮ ವೇಗದ ದಾಳಿಯಿಂದ ಎಲ್ಲರ ಚಿತ್ತ ಕದ್ದಿದ್ದರು. ಇವರು ತಾವು ಆಡಿದ ಮೊದಲ ಆವೃತ್ತಿಯ 4 ಪಂದ್ಯಗಳಲ್ಲಿ ಏಳು ವಿಕೆಟ್‌ ಕಬಳಿಸಿ ಮಿಂಚಿದ್ದರು. ಅಲ್ಲದೆ ಇತ್ತೀಚಿಗೆ ಇವರು ಭಾರತ ತಂಡದ ಪರ ಆಡುವ ಅವಕಾಶವನ್ನು ಪಡೆದಿದ್ದಾರೆ. ಇನ್ನು ತಮ್ಮ ಪಿರ್ಕಿ ಮೂಲಕ ಎದುರಾಳಿಗಳನ್ನು ಕಾಡಬಲ್ಲ ರವಿ ಬಿಷ್ಣೋಯಿ ಅವರನ್ನು ಮ್ಯಾಚ್‌ ವಿನ್ನರ್‌ ಎಂದು ಪರಿಗಣಿಸಿ ಇವರಿಗೂ ತಂಡ ಮಣೆ ಹಾಕಿದೆ.

Story first published: Monday, October 28, 2024, 18:05 [IST]
Other articles published on Oct 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+