ರಾಹುಲ್ ಅರ್ಧಶತಕ, ಇಂಗ್ಲೆಂಡ್ ಲಯನ್ಸ್ ಎದುರು ಭಾರತ 'ಎ' ಉತ್ತಮ ರನ್

ಮೈಸೂರು, ಫೆಬ್ರವರಿ 13: ಅಭಿಮನ್ಯು ಈಶ್ವರನ್ ಶತಕ ಮತ್ತು ನಾಯಕ ಕೆಎಲ್ ರಾಹುಲ್ ಅರ್ಧಶತಕದ ಕೊಡುಗೆಯೊಂದಿಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್ ಮತ್ತು ಭಾರತ 'ಎ' ನಡುವಣ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡ ಉತ್ತಮ ಆರಂಭ ಕಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ 'ಎ' ತಂಡ, ಆರಂಭಿಕ ಆಟಗಾರ ಕೆಎಲ್ ರಾಹುಲ್ 81, ಅಭಿಮನ್ಯು 117, ಪ್ರಿಯಾಂಕ್ ಪಾಂಚಲ್ 50 ರನ್ ನೆರವಿನೊಂದಿಗೆ ಬುಧವಾರ (ಫೆಬ್ರವರಿ 13) ಆರಂಭಿಕ ಇನ್ನಿಂಗ್ಸ್‌ನಲ್ಲಿ ಮೊದಲ ದಿನದ ಅಂತ್ಯಕ್ಕೆ 84.5 ಓವರ್‌ಗೆ 3 ವಿಕೆಟ್ ಕಳೆದು 282 ರನ್ ಗಳಿಸಿದೆ.
ಇತ್ತಂಡಗಳ ನಡುವಿನ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ ಭಾರತ 4-1 ಗೆಲುವು ಸಾಧಿಸಿತ್ತು. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರಂಭಿಕ ಪಂದ್ಯ ಡ್ರಾಗೊಂಡಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭಾರತ ಉತ್ತಮ ರನ್ ಕಲೆ ಹಾಕಿದರೆ ಈ ಪಂದ್ಯದ ಫಲಿತಾಂಶ ನಮ್ಮ ತಂಡದ ಪರವಾಗಲಿದೆ.
Story first published: Wednesday, February 13, 2019, 17:55 [IST]
Other articles published on Feb 13, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications