ಅಭ್ಯಾಸ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಕೆಎಲ್ ರಾಹುಲ್ ಅರ್ಧಶತಕ
ಮುಂಬೈ, ಅ.30: ಇಲ್ಲಿನ ಬ್ರೆಬೋರ್ನ್ ಮೈದಾನದಲ್ಲಿ ಆರಂಭವಾಗಿರುವ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಧ್ಯಕ್ಷರ ಇಲೆವೆನ್ ತಂಡ 78.5 ಓವರ್ ಗಳಲ್ಲಿ 296 ಸ್ಕೋರಿಗೆ ಆಲೌಟ್ ಆಗಿದೆ. ಕರ್ನಾಟಕದ ಕೆಎಲ್ ರಾಹುಲ್ ಅವರು 72 ರನ್ ಗಳಿಸಿ ಇನ್ನಿಂಗ್ಸ್ ನ ಅತ್ಯಧಿಕ ಸ್ಕೋರರ್ ಎನಿಸಿದರು.
ಟೀಮ್ ಇಂಡಿಯಾ ವಿರುದ್ಧ ಟ್ವೆಂಟಿ-20 ಮತ್ತು ಏಕದಿನ ಸರಣಿಯಲ್ಲಿ ಯಶಸ್ಸು ಕಂಡಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಈಗ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗೆ ತಯಾರಿ ನಡೆಸಿದೆ. ಶುಕ್ರವಾರ ಆರಂಭವಾದ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದೆ. ಪ್ರವಾಸಿಗರ ಪರ ಡೇಲ್ ಸ್ಟೈನ್ ಹಾಗೂ ಹಾರ್ಮರ್ ತಲಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. [ಟೆಸ್ಟ್ ತಂಡ ಪ್ರಕಟ: ಜಡೇಜ ಇನ್, ಹರ್ಭಜನ್ ಸಿಂಗ್ ಔಟ್]
ಮಿಂಚಿದ ರಾಹುಲ್ : ಚೇತೇಶ್ವರ ಪೂಜಾರಾ ಅವರ ನಾಯಕತ್ವದ ತಂಡಕ್ಕೆ ಆರಂಭಿಕ ಅಟಗಾರ ಕೆಎಲ್ ರಾಹುಲ್ ಅವರು ಉತ್ತಮ ಆರಂಭ ಒದಗಿಸಿ ಆಸರೆಯಾದರು. ಉನ್ಮುಕ್ತ್ ಚಂದ್ 4, ಚೇತೇಶ್ವರ್ ಪೂಜಾರಾ 5 ರನ್ ಹಾಗೂ ಶ್ರೇಯಸ್ ಅಯ್ಯರ್ 9 ರನ್ ಗಳಿಸಿ ಔಟಾಗಿ ಆತಂಕ ಮೂಡಿಸಿದ್ದರು. [ಭಾರತ -ದಕ್ಷಿಣ ಆಫ್ರಿಕಾ ಸರಣಿ ಸಂಪೂರ್ಣ ಮಾರ್ಗದರ್ಶಿ]

ಅದರೆ, ಕರ್ನಾಟಕದ ಕೆಎಲ್ ರಾಹುಲ್ 72 ರನ್ (132 ಎಸೆತ, 13X4) ಹಾಗೂ ಕರುಣ್ ನಾಯರ್ 44ರನ್ (9x4) ಜೊತೆಯಾಟ ಹಾಗೂ ನಂತರ ವಿಕೆಟ್ ಕೀಪರ್ ನಮನ್ ಓಜಾ 52 ರನ್ (7x4, 1x6) ಹಾಗೂ ಹಾರ್ದಿಕ್ ಪಾಂಡ್ಯ 47ರನ್ (6x4, 3x6) ಇನ್ನಿಂಗ್ಸ್ ಸಂಭಾಳಿಸಿದರೂ ಹೆಚ್ಚಿನ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. 78.5 ಓವರ್ ಗಳಲ್ಲಿ 296ಸ್ಕೋರಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ದಿನದ ಅಂತ್ಯಕ್ಕೆ ದಿನದ ಅಂತ್ಯಕ್ಕೆ 8.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 46 ರನ್ ಸ್ಕೋರ್ ಮಾಡಿದೆ.
ಮಂಡಳಿ ಅಧ್ಯಕ್ಷರ ತಂಡ: ಚೇತೇಶ್ವರ ಪೂಜಾರ(ನಾಯಕ), ಕೆಎಲ್ ರಾಹುಲ್, ಉನ್ಮುಕ್ತ್ ಚಂದ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ನಮನ್ ಓಜಾ, ಹಾರ್ದಿಕ್ ಪಾಂಡೆ, ಜಯಂತ್ ಯಾದವ್, ಕುಲದೀಪ್ ಯಾದವ್, ಶಾರ್ದುಲ್ ಠಾಕೂರ್, ನಾಥು ಸಿಂಗ್, ಕರಣ್ ಶರ್ಮ, ಶೆಲ್ಡಾನ್ ಜಾಕ್ಸನ್. [ದಕ್ಷಿಣ ಆಫ್ರಿಕಾದ 'ಮೂರು' ತಂಡ ಪ್ರಕಟ]
ದಕ್ಷಿಣ ಆಫ್ರಿಕಾ: ಹಾಶಿಂ ಅಮ್ಲ(ನಾಯಕ), ಎಬಿಡಿ ವಿಲಿಯರ್ಸ್ (ಉಪನಾಯಕ), ಟೆಂಬಾ ಬವುಮಾ, ಜೆ.ಪಿ. ಡುಮಿನಿ, ಎಫ್‌ಡು ಪ್ಲೆಸಿಸ್, ಡಿಯನ್ ಎಲ್ಗರ್, ಸಿಮೊನ್ ಹಾರ್ಮರ್, ಇಮ್ರಾನ್ ತಾಹಿರ್, ಮಾರ್ನೆ ಮೊರ್ಕೆಲ್, ವಿ.ಫಿಲ್ಯಾಂಡರ್, ಕಾಗಿಸೊ ರಬಾಡ, ಡೇನೆ ಪೀಟ್, ಡೇಲ್ ಸ್ಟೇಯ್ನಾ, ಸ್ಟೈನ್ ವ್ಯಾನ್ ಝಿಲ್, ಡಿ.ವಿಲಾ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications