Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ಗೆ ಹೋಗೋ ಮುನ್ನ ಅಥಿಯಾ ತನ್ನ ಪಾರ್ಟ್ನರ್ ಅಂತ ಹೆಸರಿಸಿದ್ದರು ಕೆಎಲ್ ರಾಹುಲ್!

KL Rahul Named Athiya Shetty As His Partner Before Leaving for England Tour

ಬೆಂಗಳೂರು: ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿಯ ಮಧ್ಯೆ ಸಂಬಂಧ ಇದೆ ಎಂಬ ಗುಸುಗುಸು ಹಿಂದಿನಿಂದಲೂ ಕೇಳಿಬರುತ್ತಲೇ ಇದೆ. ಈ ಗಾಳೀಸುದ್ದಿಗೆ ಒಂದಿಷ್ಟು ಬಾರಿ ಪುರಾವೆಗಳೂ ಸಿಕ್ಕಿವೆ. ಈಗ ಇಬ್ಬರ ನಡುವಿನ ಸಂಬಂಧಕ್ಕೆ ಇನ್ನೊಂದು ಉದಾಹರಣೆ ದೊರೆತಿದೆ.

ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತೀಯ ತಂಡ ಇಂಗ್ಲೆಂಡ್‌ಗೆ ಹೋಗಿತ್ತು. ಈ ತಂಡದಲ್ಲಿ ಕೆಎಲ್ ರಾಹುಲ್ ಕೂಡ ಇದ್ದರು. ಆಗಸ್ಟ್ 4ರಿಂದ ಸೆಪ್ಟೆಂಬರ್‌ 14ರ ವರೆಗೆ ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ ನಡೆಯಲಿದೆ.

ಇಂಗ್ಲೆಂಡ್ ಪ್ರವಾಸ ಸರಣಿ ಸುದೀರ್ಘವಾಗಿದ್ದರಿಂದ ಅಲ್ಲಿಗೆ ಭಾರತೀಯ ತಂಡ ತೆರಳುವಾಗ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಆಟಗಾರರ ಜೊತೆಗಿರುವ ಜೊತೆಗಾತಿಯರನ್ನೂ ಕಳುಹಿಸಿಕೊಡಲು ವ್ಯವಸ್ಥೆ ಮಾಡಿತ್ತು. ಈ ವೇಳೆ ರಾಹುಲ್ ತನ್ನ ಜೊತೆಗಾತಿಯಾಗಿ ಆತಿಯಾಳನ್ನು ಹೆಸರಿಸಿದ್ದರಂತೆ.

"ಕಳೆದ ತಿಂಗಳು ಜೋಡಿಗಳೂ ಇದ್ದ ಭಾರತೀಯ ತಂಡ ಇಂಗ್ಲೆಂಡ್‌ಗೆ ತೆರಳಿದೆ. ಹೀಗೆ ತೆರಳುವ ಮುನ್ನ ಲಾಜಿಸ್ಟಿಕ್ಸ್ ವಿಭಾಗ ಆಟಗಾರರಲ್ಲಿ ಅವರ ಜೊತೆಗೆ ಬರುವ ಜನರ ಪಟ್ಟಿ ಕೇಳಿತ್ತು. ಅಂದರೆ ಪ್ರವಾಸಕ್ಕಾಗಿ ಆಟಗಾರರ ಜೊತೆಗೆ ಬರುವ ಪತ್ನಿ ಅಥವಾ ಗೆಳತಿಯ ಹೆಸರು ಸೂಚಿಸಲು ಹೇಳಿತ್ತು. ಕೆಎಲ್ ರಾಹುಲ್ ಅತಿಯಾ ಶೆಟ್ಟಿಯನ್ನು ತನ್ನ ಪಾರ್ಟ್ನರ್ ಆಗಿ ಹೆಸರಿಸಿದ್ದರು. ಹೀಗಾಗಿ ಅವರೂ ಕೆಎಲ್ ರಾಹುಲ್ ಜೊತೆಗೆ ಪ್ರಯಾಣಿಸಿದ್ದಾರೆ. ತಂಡದ ಜೊತೆಗೆ ಸೌಥಾಂಪ್ಟನ್‌ನಲ್ಲಿ ಈಗ ತಂಗಿದ್ದಾರೆ," ಎಂದು ಮೂಲವೊಂದು ಹಿಂದುಸ್ತಾನ್ ಟೈಮ್ಸ್‌ಗೆ ಹೇಳಿದೆ.

Story first published: Wednesday, July 14, 2021, 17:42 [IST]
Other articles published on Jul 14, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+