ಕೆಎಲ್ ರಾಹುಲ್ ಗೆ ವಿಸ್ಡೆನ್ ವರ್ಷದ ಕ್ರಿಕೆಟರ್ ಗೌರವ

Posted By:
KL Rahul named Wisden India Almanacks Cricketer of the Year

ಬೆಂಗಳೂರು, ಮಾರ್ಚ್ 16: ಟೀಂ ಇಂಡಿಯಾ ಯುವ ಆಟಗಾರ ಕೆ.ಎಲ್. ರಾಹುಲ್ ಅವರಿಗೆ ವಿಸ್ಡನ್ ಇಂಡಿಯಾ 'ವರ್ಷದ ಕ್ರಿಕೆಟಿಗ' ಗೌರವ ಲಭಿಸಿದೆ.

ಈ ವರ್ಷದ ವಿಸ್ಡನ್ ಇಂಡಿಯಾ ಅಲ್ಮನ್ಯಾಕ್ ವಾರ್ಷಿಕ ಪುಸ್ತಕದ ಮುಖಪುಟದಲ್ಲಿ ಭಾರತ ಮಹಿಳೆಯ ಕ್ರಿಕೆಟ್‌ ತಂಡದ ಆಟಗಾರ್ತಿಯರ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಮಹಿಳೆಯರ ಸಾಧನೆಗೆ ಈ ಗೌರವ ಸಲ್ಲಿಸಲಾಗಿದೆ. ಮಹಿಳಾ ತಂಡದ ದೀಪ್ತಿ ಶರ್ಮಾ ಅವರಿಗೆ ವರ್ಷದ ಆಟಗಾರ್ತಿ ಗೌರವ ನೀಡಲಾಗಿದೆ.

ಹಿರಿಯ ಆಟಗಾರ್ತಿ ಶಾಂತಾ ರಂಗಸ್ವಾಮಿ ಮತ್ತು ಹಿರಿಯ ಸ್ಪಿನ್ನರ್ ಎರ್ರಪಳ್ಳಿ ಪ್ರಸನ್ನ ಅವರಿಗೆ ಹಾಲ್‌ ಆಫ್‌ ಫೇಮ್ ಗೌರವ ನೀಡಲಾಗಿದೆ. ವಿಶ್ವಕಪ್ ಟೂರ್ನಮೆಂಟ್ ನ ಸ್ಟಾರ್ ಆಟಗಾರ್ತಿ ದೀಪ್ತಿ ಶರ್ಮ ಅವರಿಗೆ ವರ್ಷದ ಆಟಗಾರರ್ತಿ ಗೌರವ ಸಿಕ್ಕಿದೆ.

ಜತೆಗೆ ಪ್ರಿಯಾಂಕ್ ಪಾಂಚಲ್, ಹಸನ್ ಅಲಿ ಹಾಗೂ ತಮೀಮ್ ಇಕ್ಬಾಲ್ ಅವರು ಕೂಡಾ ವರ್ಷದ ಕ್ರಿಕೆಟರ್ ಗೌರವ ಸಿಕ್ಕಿದೆ. ಸುಮಾರು 900 ಪುಟಗಳ ಪ್ರಬಂಧ, ಕಾಮೆಂಟರಿ, ಅಂಕಿ ಅಂಶಗಳು, ಚಿತ್ರಗಳನ್ನು ಒಳಗೊಂಡ ವಿಸ್ಡೆನ್ ಇಂಡಿಯಾ ಅಕರ್ಷಕವಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, March 16, 2018, 16:27 [IST]
Other articles published on Mar 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ