KL Rahul: ಐಪಿಎಲ್‌ನಲ್ಲಿ ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಹೊಸ ದಾಖಲೆ
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 44ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿತು. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ಎದುರಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೆಂಟ್ಸ್ ನಾಯಕ ಕೆಎಲ್ ರಾಹುಲ್ ಸ್ಮರಣೀಯ ಆಟವಾಡಿದರು.
ಐಪಿಎಲ್ ಟೂರ್ನಿಯಲ್ಲಿ ತಮ್ಮ ಅದ್ಬುತ ಇನ್ನಿಂಗ್ಸ್‌ಗಳನ್ನು ಮುಂದುವರೆಸಿರುವ ಕೆಎಲ್ ರಾಹುಲ್ ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ಸುರ್ವಣಾಕ್ಷರಗಳಿಂದ ಬರೆದಿದ್ದಾರೆ. ಆರಂಭಿಕ ಆಟಗಾರನಾಗಿ ಐಪಿಎಲ್‌ನಲ್ಲಿ ವೇಗವಾಗಿ 4000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.

ರಾಜಸ್ಥಾನ್ ವಿರುದ್ಧ ಪಂದ್ಯದಲ್ಲಿ 4000 ರನ್ ಗಡಿ ದಾಟಲು ಕೆಎಲ್ ರಾಹುಲ್ ಅವರಿಗೆ ಕೇವಲ 35 ರನ್‌ಗಳ ಅವಶ್ಯಕತೆ ಇತ್ತು. ಮೊದಲು ಟಾಸ್ ಗೆದ್ದ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಎಲ್‌ಎಸ್‌ಜಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅದರಂತೆ ಆರಂಭಿಕನಾಗಿ ಇನ್ನಿಂಗ್ಸ್ ಶುರು ಮಾಡಿದ ಕೆಎಲ್ ರಾಹುಲ್, ಅವೇಶ್ ಖಾನ್ ಅವರು ಮಾಡುತ್ತಿದ್ದ 8ನೇ ಓವರ್‌ನಲ್ಲಿ ತಮ್ಮ ಹೊಸ ದಾಖಲೆಯನ್ನು ಬರೆದರು.
2018ರಿಂದ ಶ್ರೀಮಂತ ಲೀಗ್‌ನಲ್ಲಿ ಆರಂಭಿನಾಗಿ ಕಣಕ್ಕಿಳಿಯುತ್ತಿರುವ ಕೆಎಲ್ ರಾಹುಲ್ ಈವರೆಗೆ ಆಡಿರುವ 94 ಇನ್ನಿಂಗ್ಸ್‌ಗಳಲ್ಲಿ 4000 ರನ್ ಶಿಖರ್‌ವನ್ನು ತಲುಪಿದ್ದಾರೆ. ರಾಹುಲ್ ಹೊರತುಪಡಿಸಿದರೆ ಐಪಿಎಲ್‌ನಲ್ಲಿ ಯಾವುದೇ ಬ್ಯಾಟರ್ ಈ ಸಾಧನೆ ಮಾಡಿರಲಿಲ್ಲ. ಇದಕ್ಕೂ ಮುನ್ನ ಈ ದಾಖಲೆ ಕೆರಿಬಿಯನ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 112 ಇನ್ನಿಂಗ್ಸ್‌ಗಳಲ್ಲಿ ತಮ್ಮ 4 ಸಾವಿರ ರನ್ ಪೂರೈಸಿದ್ದರು. ಉಳಿದಂತೆ ಡೇವಿಡ್ ವಾರ್ನರ್ (112), ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (128), ಎಬಿ ಡಿವಿಲಿಯರ್ಸ್ (131) ಈ ದಾಖಲೆ ಬರೆದಿದ್ದರು.
4 ಸಾವಿರ ರನ್ ಪೂರೈಸಿದ ನಾಲ್ಕನೇ ಆಟಗಾರ :
ಐಪಿಎಲ್‌ನಲ್ಲಿ 4000 ರನ್ ಬಾರಿಸಿದ 5ನೇ ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಸರ್ವಕಾಲಿಕ ದಾಖಲೆ ಹೊಂದಿದ್ದಾರೆ. ಶಿಖರ್ ಧವನ್ (6362), ಡೇವಿಡ್ ವಾರ್ನರ್ (5909), ಕ್ರಿಸ್ ಗೇಲ್ (4480), ವಿರಾಟ್ ಕೊಹ್ಲಿ (4041) ಮತ್ತು ರಾಹುಲ್ (4041) ಇದೀಗ ಐಪಿಎಲ್‌ನಲ್ಲಿ ಆರಂಭಿಕನಾಗಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಅಗ್ರ ಐವರಲ್ಲಿ ಒಬ್ಬರಾಗಿದ್ದಾರೆ.

ಈ ದಾಖಲೆಯ ಹೊರತಾಗಿಯೂ ಕೆಎಲ್ ರಾಹುಲ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡಕ್ಕಾಗಿ 1,000 ರನ್ ಗಳಿಸಿದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಟಿ20 ಕ್ರಿಕೆಟ್ ಮಾದರಿಗೆ ಕೆಎಲ್ ರಾಹುಲ್ ಬ್ಯಾಟಿಂಗ್ ಶೈಲಿ ಹೇಳಿ ಮಾಡಿಸಿದಂತಿದೆ. ಹೀಗಾಗಿ ತಮ್ಮ ಕೌಶಲ್ಯದಿಂದ ಐಪಿಎಲ್ ಹಾಗು ಟೀಮ್ ಇಂಡಿಯಾ ಪರ ಹಲವು ಯಶಸ್ಸು ಸಾಧಿಸಲು ಸಾಧ್ಯವಾಗಿದೆ.
ಪ್ರಸ್ತುತ ಐಪಿಎಲ್‌ನಲ್ಲೂ ಉತ್ತಮ ಫಾರ್ಮ್ ನಲ್ಲಿರುವ ರಾಹುಲ್ ಅತಿ ಹೆಚ್ಚು ರನ್ ಗಳಿಸುವ ಆಟಗಾರರ ರೇಸ್‌ನಲ್ಲಿದ್ದಾರೆ. ಐಪಿಎಲ್ ಮುಗಿದ ತಕ್ಷಣ ನಡೆಯಲಿರುವ 2024ರ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications