IPL 2025 RCB: ಸ್ಟಾರ್ ಕರ್ನಾಟಕದ ಆಟಗಾರನನ್ನು ಕೊಳ್ಳಲು 30 ಕೋಟಿ ಎತ್ತಿಟ್ಟ ಆರ್‌ಸಿಬಿ
ಟೀಮ್ ಇಂಡಿಯಾದ ಆಟಗಾರರು ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಹಿರಿಯರ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಎರಡೂ ತಂಡಗಳು ಒಂದೇ ಸುದ್ದಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅದುವೇ ಐಪಿಎಲ್ ಹರಾಜು. ಐಪಿಎಲ್ ಮಾಲೀಕರು ಈಗಾಗಲೇ ರಿಟೇನ್ಷನ್ ಲೀಸ್ಟ್ ನೀಡಿ ಆಗಿದೆ. ರಿಟೇನ್ ಆದ ಆಟಗಾರರು ನಿರಾಳರಾದರೆ, ಕೈ ಬಿಟ್ಟು ಹರಾಜು ಅಂಗಳ ಪ್ರವೇಶಿಸಿದ ಆಟಗಾರರು ಕಥೆ ಬೆರೆಯದ್ದೇ ಆಗಿದೆ. ತಮ್ಮನ್ನು ಯಾವ ತಂಡ ಖರೀದಿ ಮಾಡುತ್ತದೆ? ಮೂಲ ಬೆಲೆಗಿಂತ ಎಷ್ಟು ಹಣ ಹೆಚ್ಚಾಗಿ ಸಿಗಬಹುದು ಎಂಬ ಚಿಂತೆ ಎಲ್ಲರಲ್ಲೂ ಮನೆ ಮಾಡಿರುತ್ತದೆ.
ಐಪಿಎಲ್‌ನ ಸ್ಟಾರ್ ತಂಡಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಈ ಬಾರಿ ಆರ್‌ಸಿಬಿ ಕೇವಲ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ, ಯಶ್ ದಯಾಳ್, ರಜತ್ ಪಟೀದಾರ್ ಅವರನ್ನು ಉಳಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ. ಉಳಿದಂತೆ ಈ ಬಾರಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಆರ್‌ಸಿಬಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಆರ್‌ಸಿಬಿ ತನ್ನ ಮಾಜಿ ಆಟಗಾರನನ್ನು ಕೊಳ್ಳಲು ತನ್ನ ಪರ್ಸ್‌ನಲ್ಲಿನ ಹಣವನ್ನು ತೆಗೆದಿಟ್ಟಿದೆ.

ಕನ್ನಡಿಗನಿಗೆ ಭಾರೀ ಭಾಜಿ
ಅಂದಹಾಗೆ ಆರ್‌ಸಿಬಿ ಈ ಬಾರಿ ಟಾರ್ಗೆಟ್ ಮಾಡಲಿರುವ ಆಟಗಾರರರ ಬಕೆಟ್ ಲೀಸ್ಟ್‌ನಲ್ಲಿ ಮೊದಲು ಕಾಣಿಸಿಕೊಳ್ಳುವ ಆಟಗಾರನೇ ಕನ್ನಡಿಗ ಕೆಎಲ್ ರಾಹುಲ್. ಇವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಬಿಡುಗಡೆ ಮಾಡಿತ್ತು. ಹೀಗಾಗಿ ಇವರು ಈಗ ಹರಾಜು ಅಂಗಳ ಪ್ರವೇಶಿಸಿದ್ದಾರೆ. ಇವರನ್ನು ಕೊಳ್ಳಲು ಹಲವು ತಂಡಗಳು ಬಾಜಿ ಕಟ್ಟಲಿವೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಸಹ ಒಂದು ಕೈ ನೋಡಲಿದೆ.
ರಾಹುಲ್ ಅವರು 2013 ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಬೆಂಗಳೂರು ತಂಡದೊಂದಿಗೆ ಆರಂಭಿಸಿದ್ದರು. ಹೀಗಾಗಿ ಆರ್‌ಸಿಬಿ ಇವರನ್ನು ಕೊಳ್ಳಲು ದೊಡ್ಡ ಮೊತ್ತವನ್ನು ತೆಗೆದಿಟ್ಟಿದೆ ಎಂದು ತಿಳಿದು ಬಂದಿದೆ. ರಾಹುಲ್ ಬೆಂಗಳೂರು ಪರ ನಾಲ್ಕು ಋತುಗಳಲ್ಲಿ ಆಡಿದ 19 ಪಂದ್ಯಗಳಲ್ಲಿ 417 ರನ್ ಗಳಿಸಿದರು.

ಆರ್‌ಸಿಬಿ ಬಳಿ ಇರುವ ಹಣ ಎಷ್ಟು?
ಆರ್‌ಸಿಬಿಯ ಪರ್ಸ್‌ನಲ್ಲಿ 83 ಕೋಟಿ ರೂ. ಉಳಿದಿದ್ದು, ಈ ಪರಿಸ್ಥಿತಿಯಲ್ಲಿ ರಾಹುಲ್‌ಗೆ ಹರಾಜಿನಲ್ಲಿ 30 ಕೋಟಿ ರೂ.ವರೆಗೆ ಬಿಡ್ ಮಾಡಲು ಬೆಂಗಳೂರು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, RCB ಫ್ರಾಂಚೈಸ್ ಯಾವುದೇ ಬೆಲೆಯಲ್ಲಿ ರಾಹುಲ್ ಅವರನ್ನು ಬೆಂಗಳೂರು ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ ಎಂದು ತಿಳಿದು ಬಂದಿದೆ.
ಆರ್‌ಸಿಬಿ ಪರ ಕೆಎಲ್ ರಾಹುಲ್ 2016ರಲ್ಲಿ ಕೊನೆಯ ಬಾರಿಗೆ ಆಡಿದ್ದರು. ಆ ವರ್ಷ ಆರ್‌ಸಿಬಿ ಐಪಿಎಲ್ ಟ್ರೋಫಿ ಸುತ್ತು ಪ್ರವೇಶಿಸಿತ್ತು. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಬೆಂಗಳೂರು ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಬಳಿಕ ರಾಹುಲ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications