ಟ್ರಾಲ್ಸ್ : ಅನುಷ್ಕಾ, ಶಾರುಖ್ 'ಜಿರೋ' ಪರ ಕೆಎಲ್ ರಾಹುಲ್ ಪ್ರಚಾರ!


ಪರ್ತ್, ಡಿಸೆಂಬರ್ 17: ಅತಿಥೇಯ ಆಸ್ಟ್ರೇಲಿಯಾ ನೀಡಿದ್ದ 287ರನ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದ್ದು ಕೆಎಲ್ ರಾಹುಲ್. ರಾಹುಲ್ ಮತ್ತೊಮ್ಮೆ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಇಂದು ರಾಹುಲ್ ಅವರ ಬ್ಯಾಟಿಂಗ್ ವೈಫಲ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಬಹು ಚರ್ಚಿತ ವಿಷಯವಾಗಿದೆ.
2ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆರಂಭದಲ್ಲೇ ಮಿಚೆಲ್ ಸ್ಟಾರ್ಕ್ ಅವರ ಮೊದಲ ಓವರ್ ನಲ್ಲಿ ಕೆಎಲ್ ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದರು.
ಕೆಎಲ್ ರಾಹುಲ್ ಅವರಿಗೆ ಎಷ್ಟೇ ಪ್ರತಿಭೆ ಇದ್ದರೂ ಅವರು ಈಗ ಟೆಸ್ಟ್ ಕ್ರಿಕೆಟ್ ನಲ್ಲಿ ಔಟಾಗುತ್ತಿರುವ ರೀತಿ, ಅವರಿಗೆ ಸಿಕ್ಕಿರುವ ವಿಫುಲ ಅವಕಾಶಗಳ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗಿಂತ ಹೆಚ್ಚಾಗಿ, ಕೆಎಲ್ ರಾಹುಲ್ ಟ್ರಾಲ್, ಕಾಲೆಳೆಯುವ ಪ್ರಯತ್ನ ನಡೆಯುತ್ತಿದೆ. ಕೂಡಲೆ ತಂಡದಿಂದ ಹೊರಕ್ಕೆ ಕಳಿಸಿ ಎಂದು ಫ್ಯಾನ್ಸ್ ಫರ್ಮಾನು ಹೊರಡಿಸುತ್ತಿದ್ದಾರೆ. ಜೀರೋ ಬಾರಿಸುವ ಮೂಲಕ ಅನುಷ್ಕಾ ಶರ್ಮ ಅವರ ಸಿನಿಮಾಕ್ಕೆ ರಾಹುಲ್ ಪ್ರಚಾರ ನೀಡುತ್ತಿದ್ದಾರೆ ಎಂದು ಗೇಲಿ ಶುರುವಾಗಿದೆ. ಬಹುತೇಕ ಟ್ರಾಲ್, ಟ್ವೀಟ್ ಗಳು ರಾಹುಲ್ ಅವರ ವಿರುದ್ಧವೇ ಬಂದಿವೆ.

ರಾಹುಲ್ ರಿಂದ ಅನುಷ್ಕಾ ಸಿನಿಮಾ ಜೀರೋ ಪರ ಪ್ರಚಾರ
ಸೊನ್ನೆ ಗಳಿಸಿದ ಕೆಎಲ್ ರಾಹುಲ್ ಅವರು ಕನ್ನಡಿಗರಾಗಿ ಶಾರುಖ್ ಖಾನ್ , ಅನುಷ್ಕಾ ಶರ್ಮ ಅವರ ಜೀರೋ ಸಿನಿಮಾ ಬದಲು ಯಶ್ ಅವರ ಕೆಜಿಎಫ್ ಗೆ ಬೆಂಬಲಿಸಬೇಕು.

ಬೇರೆ ಬ್ಯಾಟ್ಸ್ ಮನ್ ಗಳಿಗೂ ರಾಹುಲ್ ಗೂ ವ್ಯತ್ಯಾಸವೇನು?
ಬೇರೆ ಬ್ಯಾಟ್ಸ್ ಮನ್ ಗಳಿಗೂ ರಾಹುಲ್ ಗೂ ವ್ಯತ್ಯಾಸವೇನು? ಬೇರೆ ಬ್ಯಾಟ್ಸ್ ಮನ್ ಗಳಿಗೆ ಆಫ್ ಸ್ಟಂಟ್ ಹೊರಗಿನ ಚೆಂಡು ವೀಕ್ ಜೋನ್ ಆಗಿದ್ದರೆ, ರಾಹುಲ್ ಗೆ ಪಿಚ್ ಪೂರ್ತಿ ವೀಕ್ನೆಸ್.

ಜೀರೋ ಚಿತ್ರದ ಹೊಸ ಪೋಸ್ಟರ್
ಜೀರೋ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಆದರೆ, ಶಾರುಖ್ ಬದಲು ಅಲ್ಲಿ ರಾಹುಲ್ ಕಾಣಿಸಿಕೊಂಡಿದ್ದಾರೆ. ಹೇಗಿದೆ ನೋಡಿ...

ಬೆಳಕಿಗಿಂತ ವೇಗವಾಗಿ ಸಂಚರಿಸಲು ಸಾಧ್ಯವಿಲ್ಲ
ಬೆಳಕಿಗಿಂತ ವೇಗವಾಗಿ ಸಂಚರಿಸಲು ಸಾಧ್ಯವಿಲ್ಲ ಎಂದ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಮಾತನ್ನು ರಾಹುಲ್ ಸುಳ್ಳಾಗಿಸಿದ್ದಾರೆ.

ಮುರಳಿ ವಿಜಯ್ ಗೆ ಟೀ ಅಂಗಡಿ
ಸರ್, ಮೊನ್ನೆ ಮುರಳಿ ವಿಜಯ್ ಗೆ ಟೀ ಅಂಗಡಿ ಇಡೋಕೆ ಹೇಳಿದ್ರಿ, ನಾನೇನು ಮಾಡ್ಲಿ?
-ನೀನು ಅಲ್ಲೆ ಬೀಡಿ ಅಂಗಡಿ ಇಟ್ಟುಬಿಡು
ಅನುಷ್ಕಾ ಜೀರೋ ಚಿತ್ರಕ್ಕೆ ಪ್ರಚಾರ ನೀಡುತ್ತಿರುವ ರಾಹುಲ್
ಅನುಷ್ಕಾ ಶರ್ಮ ಅವರ ಜೀರೋ ಚಿತ್ರಕ್ಕೆ ರಾಹುಲ್ ಅವರು ಪ್ರಚಾರ ನೀಡುತ್ತಿದ್ದಾರೆ. ಹಾಗಾಗಿ, ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications