ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮೊದಲ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಸ್ಟಾರ್ ಪ್ಲೇಯರ್‌ಗೆ ಈಗ ತಂಡದಲ್ಲಿ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಹಾಲಿ ತಂಡದಲ್ಲಿ ರಾಹುಲ್ ಹಿರಿಯ ಬ್ಯಾಟರ್. ಹೀಗಾಗಿ ಇವರ ಮೇಲೆ ಒತ್ತಡವೂ ಹೆಚ್ಚಿದೆ. ರಾಹುಲ್ ಅವರ ತಂಡದ ಮೇಲಿನ ಪ್ರೀತಿಯ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹೆಮಂಗ್ ಬದಾನಿ ಮಾತನಾಡಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನವೇ ರಾಹುಲ್ ಮನೆಗೆ ಮಹಾಲಕ್ಷ್ಮಿ ಆಗಮನವಾಯಿತು. ಇದಾದ ಬಳಿಕ ರಾಹಲ್ ಮತ್ತೆ ತಾವು ಪ್ರತಿನಿಧಿಸುವ ತಂಡವನ್ನು ಸೇರಿಕೊಂಡರು. ಇವರು ತಂದೆಯಾದ ಖುಷಿಯ ಕ್ಷಣವನ್ನೂ ಸಹ ಹೆಚ್ಚಾಗಿ ಸಂಭ್ರಮಿಸದೆ, ಅಮೂಲ್ಯ ಕ್ಷಣಗಳನ್ನು ಮಿಸ್ ಮಾಡಿಕೊಂಡರು. ಆದರೂ ಅವರು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಮೋಘ ಇನಿಂಗ್ಸ್ ಆಡಿ ಸೈ ಎನಿಸಿಕೊಂಡರು. ಅಲ್ಲದೆ ಭಾರತ "ಎ" ತಂಡದೊಂದಿಗೆ ಅಭ್ಯಾಸ ಪಂದ್ಯಗಳನ್ನು ಸಹ ಆಡಿದರು.

ರಾಹುಲ್ ಮನಸ್ಸು ಮಾಡಿದ್ದರೆ, ಈ ಅಭ್ಯಾಸ ಪಂದ್ಯಗಳಿಂದ ದೂರ ಉಳಿಯಬಹುದಿತ್ತು. ಆದರೆ ಅವರು ರಾಷ್ಟ್ರ ಮೊದಲು ಎಂಬ ಧೇಯವನ್ನು ಹೊಂದಿದ್ದಾರೆ. ಇದರ ಪರಿಣಾಮವೇ ಇವರು ಭಾರತ "ಎ" ಪರ ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿ ಶತಕ ಬಾರಿಸಿ ಲಯಕ್ಕೆ ಮರಳಿದರು. ಅಲ್ಲದೆ ಇಂಗ್ಲೆಂಡ್ ಕಂಡೀಷನ್‌ಗೆ ವೇಗವಾಗಿ ಹೊಂದಿಕೊಂಡು ತಂಡಕ್ಕೆ ನೆರವಾದರು. ಇದಾದ ಬಳಿಕ ಲೀಡ್ಸ್ ಅಂಗಳದಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರಾಹುಲ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರು.
ರಾಹುಲ್ ಅವರ ಕಮಿಟ್ಮೆಂಟ್ ಬಗ್ಗೆ ಈಗ ಹೇಮಂಗ್ ಬದಾನಿ ಮಾತನಾಡಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್‌ನ ಆದ್ಯತೆಗಳ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಮೌನ ಮುರಿದಿದ್ದಾರೆ. ಇಂಗ್ಲೆಂಡ್‌ಗೆ ಪ್ರವಾಸ ಬೆಳೆಸುವ ಮುನ್ನ ರಾಹುಲ್ "ದೇಶ ಮೊದಲು, ನನ್ನ ಮೇಲೆ ತಂಡದ ಹೊರೆ ಇದೆ" ಎಂದು ತಿಳಿಸಿದ್ದರು ಎಂದು ಕೋಚ್ ನೆನಪಿಸಿಕೊಳ್ಳುತ್ತಾರೆ. ನಾನು ಇಂಗ್ಲೆಂಡ್‌ಗೆ ಮೊದಲು ಹೋಗುವೆ. ಕೆಲವು ಅಭ್ಯಾಸ ಪಂದ್ಯಗಳನ್ನು ಸಹ ಆಡುವೆ ಎಂದು ತಿಳಿಸಿದ್ರು ಎಂದು ಹೇಮಂಗ್ ಹೇಳಿದ್ದಾರೆ. ಇನ್ನು ಅವರ ಮಗು ಇನ್ನು ಚಿಕ್ಕದು ಇರುವುದರಿಂದ ರಾಹುಲ್ ಜೊತೆಗೆ ಅವರ ಪತ್ನಿ ಹಾಗೂ ಮಗು ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಕೇಳಿದಾಗ "ಮಗಳಿಗಿಂತ ದೇಶ ಮುಖ್ಯ" ಎಂದು ರಾಹುಲ್ ತಿಳಿಸಿದ್ದರು ಎಂದು ಹೇಮಂಗ್ ನೆನಪಿಸಿಕೊಂಡಿದ್ದಾರೆ.

ರಾಹುಲ್ ಅವರಿಗೆ ಇರುವ ಅನುಭವವನ್ನು ನೋಡಿದರೆ, ಅವರು ಸುಲಭವಾಗಿ ನಾನು ಸೈಡ್ ಗೇಮ್ ಆಡುವುದಿಲ್ಲ ಎಂದು ಹೇಳಬಹುದಿತ್ತು. ಅಲ್ಲದೆ ನಾನು ನೇರವಾಗಿ ಟೆಸ್ಟ್ ಆಡುತ್ತೇನೆ ಎಂದು ಸಹ ತಿಳಿಸಬಹುದಿತ್ತು. ಆದರೆ ರಾಹುಲ್ ಹಾಗೆ ಮಾಡಲಿಲ್ಲ ಎಂದು ಹೇಮಂಗ್ ಬದಾನಿ ನೆನಪಿನಾಳದಲ್ಲಿ ಅಡಗಿದ್ದ ಸತ್ಯಗಳನ್ನು ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿಕೊಂಡಿದ್ದಾರೆ.