Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆ ಅಳಿಸಿದ ಕನ್ನಡಿಗ ರಾಹುಲ್

19ನೇ ಆವೃತ್ತಿಯ ಐಪಿಎಲ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದ ಕರ್ನಾಟಕದ ಸ್ಟಾರ್ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದ ರಾಹುಲ್‌, ಗುಜರಾತ್‌ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಲಯಕ್ಕೆ ಮರಳಿದರು.

33 ವರ್ಷದ ಅನುಭವಿ ಆಟಗಾರ ಕೆಎಲ್ ರಾಹುಲ್‌ ತಮ್ಮ ಮೇಲಿನ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ರಾಹುಲ್‌ ಸೊಗಸಾದ ಬ್ಯಾಟಿಂಗ್ ನಡೆಸಿದರು. ಅಗತ್ಯ ರನ್‌ಗಳನ್ನು ಸಹ ಕಲೆ ಹಾಕುತ್ತಾ ವಿಕೆಟ್‌ ಕಾಯ್ದುಕೊಂಡು ಬ್ಯಾಟ್ ಮಾಡುವ ಜವಾಬ್ದಾರಿ ರಾಹುಲ್ ಅವರ ಮೇಲಿತ್ತು. ಈ ವೇಳೆ ಆರಂಭದಲ್ಲಿ ಕೊಂಚ ನಿಧಾನವಾಗಿ ಬ್ಯಾಟ್ ಮಾಡಿದ ರಾಹುಲ್‌ ಬಳಿಕ ತಮ್ಮ ನೈಜ ಆಟವನ್ನು ಆಡಿದರು.

KL RAHUL

ಕೆಎಲ್ ರಾಹುಲ್ ಅವರು 6ನೇ ಐಪಿಎಲ್‌ ಶತಕದತ್ತ ದಾಪುಗಾಲು ಇಟ್ಟಿದ್ದರು. ಆದರೆ ಮೊಹಮ್ಮದ್ ಸಿರಾಜ್ ಅವರು ತೋಡಿದ ಖೆಡ್ಡಾಗೆ ಬಲಿಯಾದರು. ಇವರು 52 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಾಯದಿಂದ 92 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಇವರು ಆರನೇ ವಿಕೆಟ್‌ ರೂಪದಲ್ಲಿ ಔಟ್ ಆದರು.

ಈ ಪಂದ್ಯಕ್ಕೂ ಮುನ್ನ ಕೆಎಲ್ ರಾಹುಲ್ ಟಿ20 ಕ್ರಿಕೆಟ್‌ನಲ್ಲಿ 695 ಬೌಂಡರಿಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ 11 ರನ್‌ ಬಾರಿಸುತ್ತಿದ್ದಂತೆ ಟಿ20 ಫಾರ್ಮೆಟ್‌ನಲ್ಲಿ 700 ಬೌಂಡರಿ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್‌ಗಳು

ವಿರಾಟ್‌ ಕೊಹ್ಲಿ, 1215 ಬೌಂಡರಿ
ರೋಹಿತ್ ಶರ್ಮಾ, 1121 ಬೌಂಡರಿ
ಶಿಖರ್ ಧವನ್, 1108 ಬೌಂಡರಿ
ಸೂರ್ಯಕುಮಾರ್ ಯಾದವ್, 941 ಬೌಂಡರಿ
ಸುರೇಶ್‌ ರೈನಾ, 779 ಬೌಂಡರಿ
ಅಜಿಂಕ್ಯ ರಹಾನೆ, 769 ಬೌಂಡರಿ
ರಾಬಿನ್ ಉತ್ತಪ್ಪ, 720 ಬೌಂಡರಿ
ಸಂಜು ಸ್ಯಾಮ್ಸನ್‌ 707 ಬೌಂಡರಿ

ವಿರಾಟ್‌ ದಾಖಲೆ ಅಳಿಸಿದ ರಾಹುಲ್‌

ಈ ಪಂದ್ಯದಲ್ಲಿ ರಾಹುಲ್‌ 4 ಸಿಕ್ಸರ್ ಬಾರಿಸಿದರು. ಇವರು ರಾಹುಲ್ ಆರಂಭಿಕ ಆಟಗಾರನಾಗಿ ಒಂದು ಇನ್ನಿಂಗ್ಸ್‌ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸಿಕ್ಸರ್‌ಗಳನ್ನು ಬಾರಿಸಿದ್ದು ಇದು 18 ನೇ ಬಾರಿ. ಏತನ್ಮಧ್ಯೆ, ಕೊಹ್ಲಿ ಐಪಿಎಲ್‌ನಲ್ಲಿ ಆರಂಭಿಕ ಆಟಗಾರನಾಗಿ ಒಂದು ಇನ್ನಿಂಗ್ಸ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು 17 ಬಾರಿ ಬಾರಿಸಿದ್ದಾರೆ.

ವಾರ್ನರ್‌ ದಾಖಲೆ ಉಡೀಸ್‌

ಗುಜರಾತ್ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ರಾಹುಲ್‌ 92 ರನ್‌ ಬಾರಿಸುತ್ತಲೇ ದೊಡ್ಡ ಸಾಧನೆ ಮಾಡಿದರು. ಇವರು ಈ ಮೂಲಕ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಅಳಿಸಿದರು. ರಾಹುಲ್‌ ಐಪಿಎಲ್‌ನಲ್ಲಿ 75ಕ್ಕೂ ಹೆಚ್ಚು ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್‌ ಗೇಲ್‌ (23) ಹಾಗೂ ವಿರಾಟ್‌ ಕೊಹ್ಲಿ (22) ಐಪಿಎಲ್‌ನಲ್ಲಿ 75ಕ್ಕೂ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಪಂದ್ಯದ ಫಲಿತಾಂಶ

19ನೇ ಆವೃತ್ತಿಯ ಐಪಿಎಲ್‌ನ 14ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 210 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 209 ರನ್‌ ಕಲೆ ಹಾಕಿ ಸೋಲು ಕಂಡಿತು. ಟೈಟಾನ್ಸ್‌ ಒಂದು ರನ್‌ಗಳಿಂದ ಪಂದ್ಯ ಗೆದ್ದಿತು.

Story first published: Thursday, April 9, 2026, 9:33 [IST]
Other articles published on Apr 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+