Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ರ‍್ಯಾಂಕಿಂಗ್: ಟಾಪ್ 10 ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಇಬ್ಬರು ಭಾರತೀಯರು, ಟಾಪ್ 2ನಲ್ಲಿ ಪಾಕ್ ಕ್ರಿಕೆಟಿಗರು

KL Rahul remains at 4 and Virat Kohli remains at 10 in ICC T20 latest ranking

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಇತ್ತೀಚಿಗಿನ ಟಿ ಟ್ವೆಂಟಿ ಕ್ರಿಕೆಟ್ ಬೌಲರ್, ಆಲ್ ರೌಂಡರ್ ಮತ್ತು ಬ್ಯಾಟ್ಸ್‌ಮನ್‌ ಶ್ರೇಯಾಂಕ ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಹೀಗೆ ಬಿಡುಗಡೆಯಾಗಿರುವ ಬ್ಯಾಟ್ಸ್‌ಮನ್‌ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಆಟಗಾರರಾದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಯಾವುದೇ ಏರಿಳಿತಗಳನ್ನು ಕಾಣದೆ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಹೌದು, ಪ್ರಸ್ತುತ ಐಸಿಸಿ ಪ್ರಕಟಿಸಿರುವ ಅಂತರರಾಷ್ಟ್ರೀಯ ಟಿ ಟ್ವೆಂಟಿ ಬ್ಯಾಟ್ಸ್‌ಮನ್‌ ಶ್ರೇಯಾಂಕ ಪಟ್ಟಿಯಲ್ಲಿ ಕೆಎಲ್ ರಾಹುಲ್ ನಾಲ್ಕನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ 729 ರೇಟಿಂಗ್ ಪಡೆದುಕೊಂಡಿದ್ದರೆ, ವಿರಾಟ್ ಕೊಹ್ಲಿ 657 ರೇಟಿಂಗ್ ಪಡೆದುಕೊಂಡಿದ್ದಾರೆ. ಹೀಗೆ ಭಾರತೀಯರಾದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಕಳೆದ ಬಾರಿಯ ಪಟ್ಟಿಯಂತೆಯೇ ಈ ಪಟ್ಟಿಯಲ್ಲಿಯೂ ಕೂಡ ಕ್ರಮವಾಗಿ ನಾಲ್ಕನೇ ಮತ್ತು ಹತ್ತನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ, ಈ ಪಟ್ಟಿಯಲ್ಲಿನ ಟಾಪ್ 2 ಸ್ಥಾನದಲ್ಲಿ ಪಾಕಿಸ್ತಾನದ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಇದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಇತ್ತೀಚೆಗಷ್ಟೇ ಪ್ರಕಟಿಸಿರುವ ಟಿ ಟ್ವೆಂಟಿ ಬ್ಯಾಟ್ಸ್‌ಮನ್‌ ಟಾಪ್ 10 ಪಟ್ಟಿ ಹೀಗಿದೆ:

1. ಬಾಬರ್ ಅಜಮ್ - ಪಾಕಿಸ್ತಾನ - 805 ರೇಟಿಂಗ್

2. ಮೊಹಮ್ಮದ್ ರಿಜ್ವಾನ್ - ಪಾಕಿಸ್ತಾನ - 798 ರೇಟಿಂಗ್

3. ಏಡನ್ ಮಾರ್ಕ್ರಮ್ - ದಕ್ಷಿಣ ಆಫ್ರಿಕಾ - 796 ರೇಟಿಂಗ್

4. ಕೆಎಲ್ ರಾಹುಲ್ - ಭಾರತ - 729 ರೇಟಿಂಗ್

5. ಡೇವಿಡ್ ಮಲನ್ - ಇಂಗ್ಲೆಂಡ್ - 728 ರೇಟಿಂಗ್

6. ಡೊವೋನ್ ಕಾನ್ವೆ - ನ್ಯೂಜಿಲೆಂಡ್ - 703 ರೇಟಿಂಗ್

7. ಆ್ಯರನ್ ಫಿಂಚ್ - ಆಸ್ಟ್ರೇಲಿಯಾ - 701 ರೇಟಿಂಗ್

8. ವಾನ್ ಡರ್ ಡಸನ್ - ದಕ್ಷಿಣ ಆಫ್ರಿಕಾ - 669 ರೇಟಿಂಗ್

9. ಮಾರ್ಟಿನ್ ಗಪ್ಟಿಲ್ - ನ್ಯೂಜಿಲೆಂಡ್ - 658 ರೇಟಿಂಗ್

10. ವಿರಾಟ್ ಕೊಹ್ಲಿ - ಭಾರತ - 657 ರೇಟಿಂಗ್

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಬ್ಯಾಟ್ಸ್‌ಮನ್‌ಗಳ ಜೊತೆಗೆ ಟಿ ಟ್ವೆಂಟಿ ಬೌಲರ್‌ಗಳ ಟಾಪ್ 10 ಶ್ರೇಯಾಂಕ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು, ಟೀಮ್ ಇಂಡಿಯಾದ ಯಾವುದೇ ಆಟಗಾರ ಕೂಡ ಈ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. 784 ರೇಟಿಂಗ್ ಪಡೆದುಕೊಂಡಿರುವ ದಕ್ಷಿಣ ಆಫ್ರಿಕಾದ ತಬ್ರೈಜ್ ಸಂಶಿ ಟಿ ಟ್ವೆಂಟಿ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 783 ರೇಟಿಂಗ್ ಪಡೆದುಕೊಂಡಿರುವ ಜೋಶ್ ಹೇಜಲ್ ವುಡ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ವನಿಂದು ಹಸರಂಗ ಮೂರನೇ ಸ್ಥಾನಕ್ಕೆ ಕುಸಿದಿದ್ದು 760 ಅಂಕಗಳನ್ನು ಹೊಂದಿದ್ದಾರೆ, 746 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ ತಂಡದ ಆದಿಲ್ ರಶೀದ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ ಮತ್ತು ಆಸ್ಟ್ರೇಲಿಯಾದ ಆಡಂ ಜಂಪಾ 728 ಅಂಕಗಳ ಜತೆಗೆ ಐದನೇ ಸ್ಥಾನದಲ್ಲಿದ್ದಾರೆ.

Story first published: Thursday, February 17, 2022, 14:06 [IST]
Other articles published on Feb 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+