KL Rahul: ತಂದೆಯಾದ ಬಳಿಕ ಡೆಲ್ಲಿ ಕ್ಯಾಂಪ್ ಸೇರಿದ ಕೆಎಲ್ ರಾಹುಲ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭರವಸೆಯ ಆಟಗಾರರ ಕೆಎಲ್ ರಾಹುಲ್ ಅವರ ಮನೆಗೆ ಮಹಾಲಕ್ಷ್ಮಿ ಆಗಮನವಾಗಿದೆ. ಹೀಗಾಗಿ ರಾಹುಲ್ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಮೊದಲ ಪಂದ್ಯದಲ್ಲಿ ರಾಹುಲ್ ಕಣಕ್ಕೆ ಇಳಿದಿರಲಿಲ್ಲ. ಡೆಲ್ಲಿ ತನ್ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿತ್ತು. ಈ ಪಂದ್ಯವನ್ನು ಕ್ಯಾಪಿಟಲ್ಸ್ 1 ವಿಕೆಟ್ ಅಮೋಘ ಜಯ ಸಾಧಿಸಿತ್ತು.
ಅತ್ತ ಡೆಲ್ಲಿ, ಲಕ್ನೋ ವಿರುದ್ಧ ಅಂಗಳಕ್ಕೆ ಇಳಿಯುತ್ತಾ ಇದ್ದಂತೆ, ಇತ್ತ ರಾಹುಲ್ ಮನೆಯನ್ನು ಮಗಳು ತುಂಬಿದ್ದಾಳೆ. ಈ ಬಗ್ಗೆ ರಾಹುಲ್ ದಂಪತಿ ತಮ್ಮ ಸಂತೋಷದ ಸಮಾಚಾರವನ್ನು ಸಾಮಾಜಿಕ ತಾಣದ ಮೂಲಕ ಬಹಿರಂಗ ಪಡಿಸಿದ್ದರು. ಈಗ ರಾಹುಲ್ ಅವರು ಡೆಲ್ಲಿ ಕ್ಯಾಂಪ್ ಸೇರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಲೀಗ್ ಹಂತದ ಎರಡನೇ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

ತಂಡ ಸೇರಿದ ರಾಹುಲ್
ಭಾನುವಾರ ಡಬಲ್ ಡೆಕ್ಕರ್ ಪಂದ್ಯಗಳು ನಡೆಯಲಿವೆ. ಈ ವೇಳೆ ರಾಹುಲ್ ರಾಹುಲ್ ಅಂಗಳಕ್ಕೆ ಪ್ರವೇಶಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ತಂಡಗಳ ನಡುವಣ ಪಂದ್ಯ ಭಾನುವಾರ ಮಧ್ಯಾಹ್ನ ನಡೆಯಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ತಮ್ಮ ಚೊಚ್ಚಲ ಪಂದ್ಯವನ್ನು ಆಡಲು ರಾಹುಲ್ ಸಿದ್ಧರಾಗಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸಲು ರಾಹುಲ್ ಶನಿವಾರ ತಂಡವನ್ನು ಸೇರಿಕೊಂಡಿದ್ದಾರೆ. ಕೆಎಲ್ ರಾಹುಲ್ ಅವರು ತಂಡ ಸೇರಿಕೊಂಡಿದ್ದನ್ನು ಫ್ರಾಂಚೈಸಿ ವಿಡಿಯೋ ಮೂಲಕ ತಿಳಿಸಿದೆ.
ಕೆಎಲ್ ರಾಹುಲ್ ಅವರು 2013ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇವರು ಈಗಾಗಲೇ ಪಂಜಾಬ್ ಹಾಗೂ ಎಲ್‌ಎಸ್‌ಜಿ ತಂಡಗಳ ಪರ ನಾಯಕರಾಗಿ ಕಣಕ್ಕೆ ಇಳಿದಿದ್ದರು. ಆದರೆ ಈ ಬಾರಿ ರಾಹುಲ್ ಬರೀ ಪ್ಲೇಯರ್ ಆಗಿ ಕಣಕ್ಕೆ ಇಳಿದಿದ್ದಾರೆ. ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿತ್ತು. ಕಳೆದ ಆವೃತ್ತಿಯಲ್ಲಿ ಎಲ್‌ಎಸ್‌ಜಿ ಪರ ಕಣಕ್ಕೆ ಇಳಿದಿದ್ದ ರಾಹುಲ್‌ಗೆ ಕ್ಯಾಪಿಟಲ್ಸ್ 14 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಈ ಬಾರಿ ಡೆಲ್ಲಿ ತಂಡವನ್ನು ಅಕ್ಷರ್ ಪಟೇಲ್ ಮುನ್ನಡೆಸುತ್ತಿದ್ದಾರೆ.
ಡೆಲ್ಲಿ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಯುವ ಆಟಗಾರ ಆಶುತೋಷ್ ಶರ್ಮಾ ಹಾಗೂ ವಿಪ್ರಜ್ ನಿಗಮ್ ಅವರ ಕಾಣಿಕೆ ನೀಡಿದ್ದರು. ಹೀಗಾಗಿ ಈ ಆಟಗಾರರ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.
ಎಸ್‌ಆರ್‌ಎಚ್ ವಿರುದ್ಧ ಡೆಲ್ಲಿ ಸಂಭಾವ್ಯ ತಂಡ: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications