ಫೆಬ್ರವರಿ 1 ರಂದು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗದ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಬಜೆಟ್, ಸಿರಿವಂತದ ಮುಖದಲ್ಲಿ ಚಿಂತೆಯ ರೇಖೇಗಳನ್ನು ಮೂಡಿಸಿದೆ. ಇನ್ನು ಇದೇ ಸ್ಥಿತಿ ಈಗ ಟೀಮ್ ಇಂಡಿಯಾದ ಕ್ರಿಕೆಟ್ ಆಟಗಾರರ ಮುಖದಲ್ಲೂ ಕಂಡು ಬರುತ್ತದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಭಾರೀ ಮೊತ್ತವನ್ನು ಜೇಬಿಗೆ ಇಳಿಸಿಕೊಂಡ ಆಟಗಾರರು, ಸರ್ಕಾರದ ಬೊಕ್ಕಸಕ್ಕೆ ಹಣವನ್ನು ತೆರೆಗೆಯ ರೂಪದಲ್ಲಿ ನಿಗದಿ ಪಡಿಸಿದ ಶೇಕಡಾ ಮೊತ್ತವನ್ನು ಸಂದಾಯ ಮಾಡುವುದು ಕಡ್ಡಾಯವಾಗಿದೆ.
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರು ಭಾರೀ ಮೊತ್ತವನ್ನು ತಮ್ಮ ತಮ್ಮ ಬೇಜಿಬಿಗೆ ಇಳಿಸಿಕೊಂಡಿದ್ದಾರೆ. ಆಗ ಅವರ ಮುಖದಲ್ಲಿದ್ದ ಸಂತಸ ಈಗ ಕೊಂಚ ಕಡಿಮೆ ಆಗಿದೆ. 12 ಲಕ್ಷದ ವರೆಗೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ವಿನಾಯಿತಿ ನೀಡಿದ್ದಾರೆ. ಆದರೆ ಹೊಸ ತೆರಿಗೆ ನೀತಿ ಆಟಗಾರರಿಗೆ ಶಾಕ್ ನೀಡಿದೆ.

ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸುವ ಆಟಗಾರನ ಕನಿಷ್ಠ ಮೂಲ ಬೆಲೆ 30 ಲಕ್ಷ ಆಗಿತ್ತು. ಐಪಿಎಲ್‌ನಲ್ಲಿ 30 ಲಕ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ಸಂಭಾವನೆ ಪಡೆಯುವ ಆಟಗಾರ, ತನ್ನ ಗಳಿಕೆಯ ಮೇಲೆ ಶೇಕಡಾ 30 ರಷ್ಟು ತೆರಿಗೆ ಕಟ್ಟ ಬೇಕಾಗುತ್ತದೆ. ಇನ್ನು 24 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಆಟಗಾರ ಕನಿಷ್ಠ 30 ರಷ್ಟು ತೆರಿಗೆ ಕಟ್ಟಲೇ ಬೇಕು.
ರಿಷಭ್ ಪಂತ್ ಪ್ರಸಕ್ತ ಐಪಿಎಲ್ ಮೆಗಾ ಹರಾಜಿನಲ್ಲಿ ದುಬಾರಿ ಆಟಗಾರರಲ್ಲಿ ಒಬ್ಬರು. ಇವರಿಗೆ ಲಕ್ನೋ ಸೂಪರ್ ಜೇಂಟ್ಸ್ ತಂಡ 27 ಕೋಟಿ ನೀಡಿ ಖರೀದಿ ಮಾಡಿದೆ. ನಿರ್ಮಲಾ ಸೀತಾರಾಮನ್ ಕನಿಷ್ಠ 30 ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಈ ಲೆಕ್ಕಾಚಾರದಲ್ಲಿ ರಿಷಭ್ 8.10 ಕೋಟಿ ತೆರಿಗೆ ಕಟ್ಟಬೇಕಾಗುತ್ತದೆ.

ಹರಾಜಿನ ದುಬಾರಿ ಆಟಗಾರರಲ್ಲಿಒಬ್ಬರಾಗಿರುವ ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಯನ್ನು ಪಡೆದಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಈಗ ಇವರು ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಇವರಿಗೆ ಸಿಕ್ಕ ಹಣದ 30 ರಷ್ಟು ಅಂದರೆ 8.025 ಕೋಟಿ ರೂ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ.
ಕರ್ನಾಟಕದ ಕೆಎಲ್ ರಾಹುಲ್ ಅವರಿಗೆ ದೆಹಲಿ ಕ್ಯಾಪಿಟಲ್ಸ್ 14 ಕೋಟಿ ನೀಡಿ ಖರೀದಿ ಮಾಡಿದೆ. ಈ ಲೆಕ್ಕಾಚಾರದಲ್ಲಿ ಇವರು 4.2 ಕೋಟಿ ತೆರಿಗೆ ಕಟ್ಟ ಬೇಕಾಗುತ್ತದೆ. ಇನ್ನು ಯುಜುವೇಂದ್ರ ಚಹಾಲ್ ಹಾಗೂ ಅರ್ಷದೀಪ್ ಸಿಂಗ್ ಅವರ ಜೇಬಿಗೂ ಕತ್ತಿರ ಬೀಳಲಿದೆ. ಈ ಇಬ್ಬರೂ ಸ್ಟಾರ್ ಆಟಗಾರರು 5.4 ಕೋಟಿ ರೂ. ತೆರಿಗೆ ಕಟ್ಟಬೇಕಾಗುತ್ತದೆ.