Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆ.ಎಲ್ ರಾಹುಲ್‌ ಕಮೆಂಟ್‌ಗೆ ವೈರಲ್ ಆಯ್ತು ಗೆಳತಿ ಅಥಿಯಾಳ ಪೋಸ್ಟ್!

Kl Rahul’s Comment On Athiya Shetty’s Latest Picture Has Left The Fans Confused

ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಕನ್ನಡಿಗ ಕೆಎಲ್ ರಾಹುಲ್ ಬ್ಯಾಟಿಂಗ್‌ನಿಂದ ಸಾಕಷ್ಟು ಸುದ್ಧಿಯಲ್ಲಿರುವ ಆಟಗಾರ. ಅದನ್ನು ಹೊರತು ಪಡಿಸಿ ರಾಹುಲ್ ಸುದ್ಧಿಯಾಗುತ್ತಿರೋದು ತನ್ನ ಗೆಳತಿಯ ಕಾರಣಕ್ಕಾಗಿ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆಗಿನ ಗೆಳತನ ಅಭಿಮಾನಿಗಳಿಗೆ ಸಾಕಷ್ಟು ಗೊಂದಲ ಮೂಡಿಸಿರೋದಂತೂ ಸುಳ್ಳಲ್ಲ.

ಈಗ ರಾಹುಲ್ ಸುದ್ಧಿಕೇಂದ್ರಕ್ಕೆ ಬರಲು ಕಾರಣ ಒಂದು ಕಾಮೆಂಟ್. ಇನ್ಸ್ಟಾಗ್ರಾಮ್‌ನಲ್ಲಿ ಗೆಳತಿ ಅಥಿಯಾ ಹಾಕಿದ ಫೋಟೋವೊಂದಕ್ಕೆ ರಾಹುಲ್ ಕಾಮೆಂಟ್ ಮಾಡಿದ್ದಾರೆ. ರಾಹುಲ್ ಮಾಡಿದ ಕಾಮೆಂಟ್ಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿದೆ.

ಆಥಿಯಾ ಪೋಸ್ಟ್ ಮಾಡಿದ ಫೋಟೋಗೆ ರಾಹುಲ್ ಮಾಡಿದ ಪ್ರತಿಕ್ರಿಯೆ ಏನು ಮುಂದೆ ಓದಿ.

ರಾಹುಲ್ ಪ್ರತಿಕ್ರಿಯೆ

ರಾಹುಲ್ ಪ್ರತಿಕ್ರಿಯೆ

ಅಥಿಯಾ ಶೆಟ್ಟಿ ಬಿಳಿ ಶರ್ಟ್‌ನೊಂದಿಗೆ ಸ್ಟೈಲಿಶ್ ಫೋಸ್ ನೀಡಿದ್ದ ಫೋಟೊವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ವಿಚಾರ ಇದಲ್ಲ, ಈ ಫೋಟೋಗೆ ಕೆಎಲ್ ರಾಹುಲ್ 'ಒಳ್ಳೆಯ ಶರ್ಟ್' ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳಿಗೆ ಇಷ್ಟು ಸಾಕಿತ್ತು.

ಕಾಲೆಳೆದ ಅಭಿಮಾನಿಗಳು

ಕಾಲೆಳೆದ ಅಭಿಮಾನಿಗಳು

ಈ ಕಾಮೆಂಟನ್ನು ಅಭಿಮಾನಿಗಳು ಕೆಎಲ್ ರಾಹುಲ್ ಕಾಲೆಳೆಯಲು ಆರಂಭಿಸಿದ್ದಾರೆ. ನಾನಾ ರೀತಿಯಾಗಿ ಕೆಣಕುವಂತೆ ಪ್ರತಿಕ್ರಿಯನ್ನು ನೀಡಿದ್ದಾರೆ. ಹೀಗಾಗಿ ರಾಹುಲ್ ಕಾಮೆಂಟ್ ಕಾರಣಕ್ಕೆ ಅಥಿಯಾ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.

ಶರ್ಟ್ ನಿಮ್ಮದಿರೇಕು!

ಶರ್ಟ್ ನಿಮ್ಮದಿರೇಕು!

ಕೆಲವರು ಈ ಶರ್ಟ್ ಬಹುಶಃ ನಿಮ್ಮದಾಗಿರಬೇಕು ಎಂದು ರಾಹುಲ್ ಕಾಲೆಳಿದ್ದರೆ, ಶರ್ಟ್ ನಿಮಗೆ ಇಷ್ಟವಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರಂತೂ ನಿಮ್ಮಿಬ್ಬರ ಜೋಡಿ ಫೋಟೊವನ್ನು ಹಂಚಿಕೊಳ್ಳಿ ಎಂದು ಬೇಡಿಕೆಯಿಟ್ಟಿದ್ದಾರೆ.

ಓವರ್‌ ಸೈಜ್ ಶರ್ಟ್ ಕಾರಣ

ಓವರ್‌ ಸೈಜ್ ಶರ್ಟ್ ಕಾರಣ

ಅಷ್ಟಕ್ಕೂ ರಾಹುಲ್ ಕಾಮೆಂಟ್ ಜೊತೆಗೆ ಈ ಫೋಟೋ ವೈರಲ್ ಆಗೋದಿಕ್ಕೆ ಮತ್ತೊಂದು ಕಾರಣವೂ ಇದೆ. ಇಲ್ಲಿ ಆಥಿಯಾ ತನ್ನದಲ್ಲದ ಸೈಜ್‌ನ ಶರ್ಟ್ ಧರಿಸಿದ್ದರು. ಇದೇ ಕಾರಣಕ್ಕೆ ಕೆಎಲ್ ರಾಹುಲ್ ಕಾಮೆಂಟ್ ಜೊತೆಗೆ ಅಭಮಾನಿಗಳು ತಮಾಷೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

Story first published: Sunday, May 3, 2020, 22:14 [IST]
Other articles published on May 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+