For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ಧೋನಿ ,ಶರ್ಮಾರಿಂದ ನಾಯಕತ್ವದ ಗುಣಗಳನ್ನು ಕಲಿತೆ ಎಂದ ಕೆಎಲ್ ರಾಹುಲ್

Kl Rahul, Ipl 2020, virat kohli, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಐಪಿಎಲ್ 2020

ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಈ ಬಾರಿ ಐಪಿಎಲ್‌ನಲ್ಲಿ ಪ್ರಮುಖ ಜವಾಬ್ಧಾರಿಯನ್ನು ಹೊತ್ತಿದ್ದಾರೆ. ಕಿಂಗ್ಸ್ XI ಪಂಜಾಬ್ ತಂಡದ ನಾಯಕತ್ವದ ಹೊಣೆ ಈ ಬಾರಿ ಕೆಎಲ್ ಹೆಗಲೇರಿದೆ. ಹೀಗಾಗಿ ರಾಹುಲ್ ಈ ಜವಾಬ್ಧಾರಿಯನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ತನಗೆ ಸಿಕ್ಕ ಹೊಸ ಜವಾಬ್ಧಾರಿಯ ಬಗ್ಗೆ ಈ ಹಿಂದೆಯೂ ರಾಹುಲ್ ಸಂತಸವನ್ನು ವ್ಯಕ್ತಪಡಿಸಿದ್ದರು. ಈಗ ತಾನು ನಾಯಕತ್ವದ ಗುಣ ಲಕ್ಷಣಗಳನ್ನು ಕಲಿತುಕೊಂಡ ಆಟಗಾರರ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದ್ದಾರೆ. ಹಾಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಆವರಿಂದ ನಾಯಕತ್ವದ ಅಂಶಗಳನ್ನು ಕಲಿತುಕೊಂಡಿದ್ದೇನೆ ಎಂದಿದ್ದಾರೆ.

ಕೆಎಲ್ ರಾಹುಲ್ ಕಳೆದ ಎರಡು ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಜೊತೆಗೆ ವಿಕೆಟ್ ಕೀಪಿಂಗ್‌ನಲ್ಲಿಯೂ ಕೆಎಲ್ ಮಿಂಚಿದ್ದರು. ಈ ಎಲ್ಲಾ ಕಾರಣಗಳಿಂದಾಘಿ ಈ ಬಾರಿಯ ಐಪಿಎಲ್ ನಾತಕತ್ವ ಕೆಎಲ್ ರಾಹುಲ್ ಹೆಗಲೇರಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಕೆಎಲ್ ರಾಹುಲ್‌ಗೆ ಇದೆ.

ಕೊಹ್ಲಿ ಹಾಗೂ ಧೋನಿ ನಾಯಕತ್ವದದ ನೆರಳನ್ನು ನಿಮ್ಮಲ್ಲಿ ಕಾಣಬಹುದೇ ಎಂದು ಕೇಳಿದ ಪ್ರಶ್ನೆಗೆ ರಾಹುಲ್ 'ಖಂಡಿತವಾಗಿಯೂ, ಕಳೆದ 10 ವರ್ಷಗಳಲ್ಲಿ ಇವರಿಬ್ಬರೂ ಬಹಳಷ್ಟು ಸೂರ್ತಿದಾಯಕ ಕ್ರಿಕೆಟಿಗರಾಗಿದ್ದಾರೆ. ಅವರ ನಾಯಕತ್ವದಲ್ಲಿ ಅಡುವ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ದೊಡ್ಡ ಸಂಗತಿ ಎಂದು ಕೆಎಲ್ ರಾಹುಲ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ಧೋನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಸಂಪೂರ್ಣ ವಭಿನ್ನ ವ್ಯಕ್ತಿತ್ವ ಹೊಂದಿದವರು ಹಾಗೂ ತಂಡವನ್ನು ಭಿನ್ನವಾಗಿ ರೀತಿಯಲ್ಲಿ ಮುನ್ನಡೆಸಿದ್ದಾರೆ. ಆದರೆ ತಂಡಕ್ಕಾಗಿ ಅವರ ಬದ್ಧತೆ ಒಂದೇ ಆಗಿತ್ತು. ಅವರು ಯಾವಾಗಲೂ ಜಯಗಳಿಸಲು ಹಾಗೂ ಜೊತೆಯಾಗಿ ತಂಡವನ್ನು ಮುನ್ನಡೆಸಲು ಬಯಸುತ್ತಾರೆ ಎಂದು ಕೆಎಲ್ ರಾಹುಲ್ ಹೇಳಿಕೆಯನ್ನು ನೀಡಿದ್ದಾರೆ.

Story first published: Thursday, September 3, 2020, 15:37 [IST]
Other articles published on Sep 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+