For Quick Alerts
ALLOW NOTIFICATIONS  
For Daily Alerts
 

ಪ್ರಸಿದ್ಧ ಕೃಷ್ಣಗೆ 'ಕೈಗೆ ಹಾಕೊಲೋ' ಎಂದ ಕೆಎಲ್ ರಾಹುಲ್; ದಕ್ಷಿಣ ಆಫ್ರಿಕಾದಲ್ಲಿ ಕನ್ನಡದ ಕಂಪು

ಮಂಗಳವಾರ, ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಪ್ರವಾಸಿ ಭಾರತ ತಂಡಗಳ ನಡುವೆ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅವರ ಅಮೋಘ ಶತಕದ ನೆರವಿನಿಂದ 67.4 ಓವರ್‌ಗಳಲ್ಲಿ 245 ರನ್‌ಗಳಿಗೆ ಅಲೌಟ್ ಆಯಿತು.

KL Rahul Scolding in Kannada with Co-Player During India vs South Africa Test Match Video Goes Viral

ಇನ್ನು ಎರಡನೇ ದಿನ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡವು ಡೀನ್ ಎಲ್ಗರ್ ಶತಕದ ಸಹಾಯದಿಂದ 66 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 256 ರನ್‌ ಗಳಿಸಿದ್ದು, 11 ರನ್‌ಗಳ ಅತ್ಯಲ್ಪ ಮುನ್ನಡೆ ಸಾಧಿಸಿದೆ.

ಇದಕ್ಕೂ ಮುನ್ನ ಕೆಎಲ್ ರಾಹುಲ್ ಅವರ ದಾಖಲೆಯ ಶತಕವು ಭಾರತ ತಂಡದ ಮಾನ ಕಾಪಾಡಿತಲ್ಲದೆ, ಸವಾಲಿನ ಸ್ಕೋರ್ ಕಲೆಹಾಕಲು ನೆರವಾಯಿತು. ಕೆಎಲ್ ರಾಹುಲ್ ತಮ್ಮ ಮನಮೋಹಕ ಇನ್ನಿಂಗ್ಸ್‌ನಲ್ಲಿ 137 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 101 ರನ್‌ ಗಳಿಸಿ ಕೊನೆಯವರಾಗಿ ಔಟಾದರು.

ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನ ಕೆಎಲ್ ರಾಹುಲ್ ಅವರ ಕ್ಲಾಸ್‌ ಆಟವನ್ನು ಪ್ರದರ್ಶಿಸಿ, ತಮ್ಮ 8ನೇ ಟೆಸ್ಟ್ ಶತಕವನ್ನು ಪೂರೈಸಿದರು. ಇದು ತವರಿನ ಹೊರಗೆ 5ನೇ ಟೆಸ್ಟ್ ಶತಕವಾಗಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿದೇಶದಲ್ಲಿ ಅವರ ಪ್ರಾಬಲ್ಯವನ್ನು ತೋರಿಸಿತು.

ಇದಲ್ಲದೆ, ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಹರಿಣ ಪಡೆ ವಿರುದ್ಧ ಒಂದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸುವ ಮೂಲಕ ಕೆಎಲ್ ರಾಹುಲ್ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದರು.

ಫೀಲ್ಡಿಂಗ್ ವೇಳೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್

ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಅವರು ಸಹ ಆಟಗಾರನಿಗೆ ಬೈದ ವಿಡಿಯೋ ವೈರಲ್ ಆಗಿದೆ. ನೀವಂದುಕೊಂಡಂತೆ ಕೆಎಲ್ ರಾಹುಲ್ ಬೈದಿದ್ದು ಕೆಟ್ಟ ಶಬ್ದವೇನಲ್ಲ.

ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕನ್ನಡಿಗ ಆಟಗಾರರು ಆಡುತ್ತಿದ್ದರೆ, ಕನ್ನಡದಲ್ಲೇ ಮಾತಾಡುವುದು, ಬೈಯುವುದು ಹೊಸತೇನಲ್ಲ.

ಅದೇ ರೀತಿ, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇಬ್ಬರೂ ಕರ್ನಾಟಕ ತಂಡದಲ್ಲಿ ಆಡುತ್ತಾರೆ.

ಭಾರತದ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್ ಡೀಪ್ ಮಿಡ್ ವಿಕೆಟ್‌ನತ್ತ ಚೆಂಡು ಬಾರಿಸಿದರು. ಆಗ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪ್ರಸಿದ್ಧ್ ಕೃಷ್ಣ ವಿಕೆಟ್ ಕೀಪರ್ ಕೆಎಲ್ ರಾಹುಲ್‌ರತ್ತ ಚೆಂಡು ಎಸೆದರು. ಆಗ ಕೆಎಲ್ ರಾಹುಲ್ ಕನ್ನಡದಲ್ಲೇ "ಕೈಗೆ ಹಾಕೋಲೋ' ಎಂದು ಪ್ರಸಿದ್ಧ್ ಕೃಷ್ಣಗೆ ಹೇಳಿದ್ದು, ಸ್ಟಂಪ್ ಮೈಕ್‌ನಲ್ಲಿ ಕೇಳಿಸಿತು.

ಗಮನಾರ್ಹವಾಗಿ, ಕರ್ನಾಟಕದ ಆಟಗಾರರು ಎಲ್ಲೇ ಆಡುತ್ತಿದ್ದರೂ, ಕನ್ನಡದಲ್ಲಿ ಮಾತನಾಡಿಕೊಳ್ಳುವುದನ್ನು ಈ ಹಿಂದೆ ಹಲವು ಬಾರಿ ನೋಡಿದ್ದೇವೆ.

Story first published: Thursday, December 28, 2023, 12:01 [IST]
Other articles published on Dec 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+