ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಟೂರ್ನಿಗೂ ಮುನ್ನ ಟೂರ್ನಿಗೂ ಮುನ್ನ ಆಟಗಾರರು ಭರ್ಜರಿ ತಯಾರಿ ನಡೆಸಿದ್ದಾರೆ. ಹೊಸ ತಂಡಗಳಿಗೆ ಸೇರಿರುವ ಆಟಗಾರರು ತಮ್ಮ ತಮ್ಮ ತಂಡದ ಟ್ರೇನಿಂಗ್ ಕ್ಯಾಂಪ್ ಸೇರಿ ತಾಲೀಮು ನಡೆಸಿದ್ದಾರೆ. ಈ ಬಾರಿ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಕೆಎಲ್ ರಾಹುಲ್ ದೂರ ಉಳಿಯಲಿದ್ದಾರೆ. ಕೌಟುಂಬಿಕ ಕಾರಣಗಳಿಂದ ರಾಹುಲ್ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದಾರೆ.
ಕೆಎಲ್ ರಾಹುಲ್ ಐಪಿಎಲ್ ಆರಂಭಕ್ಕೂ ಮುನ್ನ ಉಜೈನಿಯಲ್ಲಿ ಕಾಣಿಸಿಕೊಂಡರು. ಇವರು ಮಹಾಕಾಲನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ರು. ಈ ವೆಳೆ ಮಹಾಕಾಲ ಶಿವ ಪೂಜೆ ಮಾಡಿ ಆಶೀರ್ವಾದವನ್ನು ಪಡೆದ್ರು. ಕೆಎಲ್ ರಾಹುಲ್ ಮನೆಗೆ ಶೀಘ್ರದಲ್ಲಿ ವಿಶೇಷ ಅತಿಥಿ ಆಗಮನ ಆಗಲಿದೆ. ಈ ವೆಳೆ ತಮ್ಮ ಪತ್ನಿ ಹಾಗೂ ತಮ್ಮ ಮಗುವಿನ ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ರು.

ಮಹಾಕಾಲನ ಸನ್ನಿಧಿಯಲ್ಲಿ ರಾಹುಲ್ ನೀಲಿ ಬಣ್ಣದ ಪೋಷಾಕಿನಲ್ಲಿ ಕಂಡು ಬಂದ್ರು. ಅಲ್ಲದೆ ಹಣೆಗೆ ತಿಲಕವನ್ನು ಹಚ್ಚಿಕೊಂಡಿದ್ರು. ಬಳಿಕದ ದೇವರಿಗೆ ಆರ್ತಿ ಮಾಡಿ, ನಂದಿ ಹಾಲ್ ತಲುಪಿ ಅಲ್ಲಿ ನಂದಿ ಕಿವಿಯಲ್ಲಿ ತಮ್ಮ ಮನಃ ಕಾಮನೆಗಳನ್ನು ಕೇಳಿಕೊಂಡ್ರು.
ಈ ಬಾರಿಯ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲಿದ್ದಾರೆ. ಇವರನ್ನು ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು. ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಹುಲ್ ಅವರ ಕೈ ಬಿಟ್ಟ ಬಳಿಕ ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಇವರಿಗೆ ಡೆಲ್ಲಿ ನಾಯಕತ್ವದ ಪಟ್ಟವನ್ನು ಕಟ್ಟ ಬಹುದು ಎಂಬ ನಿರೀಕ್ಷೆಗಳು ಇದ್ದವು. ಆದರೆ ಮ್ಯಾನೇಜ್ಮೆಂಟ್ ಮಾತ್ರ ತಮ್ಮ ತಂಡದ ಭವಿಷ್ಯದ ದೃಷ್ಟಿಯಿಂದ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವೇಳೆ ಮ್ಯಾನೇಜ್ಮೆಂಟ್ ಅಕ್ಷರ್ ಪಟೇಲ್‌ಗೆ ಪಟ್ಟವನ್ನು ಕಟ್ಟಿದೆ. ರಾಹುಲ್ ಈ ಬಾರಿ ಐಪಿಎಲ್‌ನಲ್ಲಿ ನುರಿತ ಬ್ಯಾಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೆಹಲಿ ತಂಡದ ಉಪನಾಯಕತ್ವವನ್ನು ಫಾಫ್ ಡು ಪ್ಲೆಸಿಸ್ ಅವರಿಗೆ ನೀಡಲಾಗಿದೆ. ಐಪಿಎಲ್‌ನಲ್ಲಿ ರಾಹುಲ್ ವಿಕೆಟ್ ಕೀಪರ್ ಕಂ ಬ್ಯಾಟರ್ ರೂಪದಲ್ಲಿ ಡೆಲ್ಲಿ ಕ್ಯಾಪಟಿಲ್ಸ್ ತಂಡದ ಬಲವನ್ನು ಹೆಚ್ಚಿಸಲಿದ್ದಾರೆ.
ಅಕ್ಷರ್ ಪಟೇಲ್ (ನಾಯಕ), ಕರುಣ್ ನಾಯರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಡೊನೊವನ್ ಫೆರೇರಾ, ಕೆಎಲ್ ರಾಹುಲ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ದರ್ಶನ್ ನಲ್ಕಂಡೆ, ಅಜಯ್ ಜಾದವ್ ಮಂಡಲ್, ವಿಪ್ರಜ್ ನಿಗಮ್, ಮನ್ವಂತ್ ಕುಮಾರ್ ಎಲ್, ತ್ರಿಪುರಾನ ವಿಜಯ್, ಮಾಧವ್ ತಿವಾರಿ, ಕುಲದೀಪ್ ಯಾದವ್, ದುಷ್ಮಂತ ಚಮೀರಾ, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ, ಟಿ ನಟರಾಜನ್, ಮುಖೇಶ್ ಕುಮಾರ್.