Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಬ್ರಿಸ್ಬೇನ್‌ನಲ್ಲಿ ತಂಡದ ನೆರವಿಗೆ ಬರಲು ಕಾರಣವಾದ ಅಂಶವನ್ನು ಬಿಚ್ಚಿಟ್ಟ ಕೆಎಲ್ ರಾಹುಲ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕದ ಕೆಎಲ್ ರಾಹುಲ್‌ ಉತ್ತಮ ಪ್ರದರ್ಶನ ನೀಡಿದರು. ಈ ವೇಳೆ ಅವರು ಬ್ಯಾಟ್‌ನಿಂದ ರನ್‌ಗಳು ಹರಿದು ಬಂದವು. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ, ಇನ್ನೊಂದು ತುದಿಯನ್ನು ಕಾಪಾಡಿಕೊಂಡು ಬ್ಯಾಟ್ ಮಾಡಿದ ರಾಹುಲ್‌ ತಂಡಕ್ಕೆ ಆಸರೆಯಾದರು. ಇವರು ಆಸ್ಟ್ರೇಲಿಯಾದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತೀಯ ಆಟಗಾರ. ನಾಲ್ಕನೇ ದಿನ ಮನಮೋಹಕ ಪ್ರದರ್ಶನ ನೀಡಿದ ರಾಹುಲ್‌ ತಮ್ಮ ಆಟದ ತಂತ್ರವನ್ನು ತಿಳಿಸಿದ್ದಾರೆ.

ಬ್ರಿಸ್ಬೇನ್‌ನಲ್ಲಿ ಟೀಮ್ ಇಂಡಿಯಾದ ಮಾನವನ್ನು ಕಾಪಡಿದ ಬ್ಯಾಟರ್‌ಗಳನ್ನು ನೋಡಿದಾಗ ಅದರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಕೆಎಲ್‌ ರಾಹುಲ್‌. ಗಬ್ಬಾದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಕೆಎಲ್‌ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಮೊದಲ ಇನಿಂಗ್ಸ್‌ನಲ್ಲಿ ರಾಹುಲ್‌ 139 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 84 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಬ್ರಿಸ್ಬೇನ್‌ನಲ್ಲಿ ರಾಹುಲ್‌ ಆಡಿದ ರೀತಿಯ ಬಗ್ಗೆ ಮಂಗಳವಾರ ಮಾತನಾಡಿದ್ದಾರೆ.

KL Rahul Shares His Strategy Behind Heroic Performance in Brisbane Test

ರಾಹುಲ್‌ ಹೇಳಿದ್ದೇನು?

ಮೈದನಾಕ್ಕೆ ಬ್ಯಾಟಿಂಗ್‌ಗೆ ಇಳಿಯುವಾಗ ಎಲ್ಲರೂ ಒಂದೊಂದು ತಂತ್ರವನ್ನು ಅನುಸರಿಸುತ್ತಾರೆ. ಎಲ್ಲರ ಯೋಜನೆಗಳು ಡಿಫ್ರೆಂಟ್ ಆಗಿರುತ್ತವೆ ಎಂಬುದು ನನಗೆ ತಿಳಿದಿದೆ. ಆಸ್ಟ್ರೇಲಿಯಾದಂತಹ ಪಿಚ್‌ನನಲ್ಲಿ 10 ರಿಂದ 15 ಓವರ್‌ ಉತ್ತಮವಾಗಿ ಆಡಿದರೆ, ಆತ್ಮವಿಶ್ವಾಸ ಬೆಳೆಯುತ್ತದೆ. ಅಲ್ಲದೆ ಈ ಪಿಚ್‌ಗಳಲ್ಲಿ ಆಡುವಾಗ ಅದೃಷ್ಟ ಸಹ ನಿಮ್ಮ ಜೊತೆ ಇರಬೇಕು. ಹೀಗೆ ಆದಾಗ ಮಾತ್ರ ನೀವು ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಬ್ಯಾಟ್ ಮಾಡಬಹುದು ಎಂದು ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ತಿಳಿಸಿದ್ದಾರೆ.

ರನ್‌ಗಳಿಸಲು ಸಾಧ್ಯವಾಗಿದ್ದು ಹೇಗೆ?

ಈ ಪಿಚ್‌ಗಳಲ್ಲಿ ಪ್ರತಿಯೊಬ್ಬ ಬ್ಯಾಟರ್‌ ಸುಮಾರು 20 ರಿಂದ 30 ಎಸೆತಗಳನ್ನು ತಾಳ್ಮೆಯಿಂದ ಎದುರಿಸಬೇಕು. ಈ ಹಿನ್ನೆಲೆಯಲ್ಲೇ ಪ್ರತಿಯೊಬ್ಬರು ತಮ್ಮ ಕೈಲಾಸ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ಬಾರಿ ಬ್ಯಾಟಿಂಗ್ ಮಾಡುವಾಗ ಪ್ರತಿಯೊಬ್ಬರೂ ತಮ್ಮದೇ ಆದ ಯೋಜನೆಯಲ್ಲಿ ಬ್ಯಾಟ್ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಈ ಪಿಚ್‌ಗಳಲ್ಲಿ ಚೆಂಡುಗಳನ್ನು ಬಿಟ್ಟು, ಸಾಧ್ಯವಾದಷ್ಟು ನೆಲಕ್ಕೂರಿ ಆಡಲು ಪ್ರಯತ್ನಿಸಬೇಕು. ಚೆಂಡು ಹಳೆಯದಾದಾಗ ಅದರ ಲಾಭವನ್ನು ಪಡೆಯಲು ಪ್ರಯತ್ನಿಸಬಹುದು. ಈ ಯೋಜನೆಯನ್ನು ಹಿಂಬಾಲಿಸಿದ ನಾನು ಯಶಸ್ಸು ಕಂಡಿದ್ದೇನೆ ಎಂದು ತಿಳಿಸಿದ್ದಾರೆ.

KL Rahul Shares His Strategy Behind Heroic Performance in Brisbane Test

ವಿದೇಶಿ ಪ್ರವಾಸದಲ್ಲಿ ಬ್ಯಾಟರ್‌ಗಳು ವಿಶ್ವ ದರ್ಜೆಯ ಬೌಲರ್‌ಗಳನ್ನು ಎದುರಿಸುತ್ತಾರೆ. ಈ ಪಿಚ್‌ಗಳಲ್ಲಿ ಬ್ಯಾಟ್ ಮಾಡುವಾಗ ಮೊದಲ 20-30 ಓವರ್‌ಗಳನ್ನು ಗೌರವಿಸಬೇಕು. ಚೆಂಡು ತಿರುಗುತ್ತಿದ್ದರೆ ನೀವು ಅದನ್ನು ಗೌರವಿಸಬೇಕು. ಮತ್ತು ಕೆಟ್ಟ ಎಸೆತಗಳು ಸಿಕ್ಕಾಗ ದಂಡಿಸಬೇಕು ಎಂದಿದ್ದಾರೆ.

ಮೂರನೇ ಪಂದ್ಯವನ್ನು ಜೀವಂತವಾಗಿರಿಸುವ ಕಾರ್ಯವನ್ನು ಕೆಳ ಕ್ರಮಾಂಕದ ಬ್ಯಾಟರ್‌ಗಳು ಮಾಡಿದ್ದಾರೆ. ಜಸ್ಪ್ರಿತ್ ಬುಮ್ರಾ, ಆಕಾಶ್‌ ದೀಪ್‌ ಮನಮೋಹಕ ಬ್ಯಾಟಿಂಗ್ ನಡೆಸಿದ ಫಲವಾಗಿ ಫಾಲೋ ಆನ್‌ ನಿಂದ ನಾವು ಪಾರಾದೇವು ಎಂದು ರಾಹುಲ್ ತಿಳಿಸಿದ್ದಾರೆ.

Story first published: Tuesday, December 17, 2024, 19:15 [IST]
Other articles published on Dec 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+