For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ಫಿಟ್‌ನೆಸ್‌ಗೆ 'ಗುಸುಗುಸು ಪ್ರೇಯಸಿ' ಫಿದಾ

KL Rahul Shares Workout Pics On Instagram and Athiya Shetty Reacts

ಪ್ರಸ್ತುತ ಐಪಿಎಲ್ ಟೂರ್ನಿ ಮುಂದೂಡಲ್ಪಡುವ ಕೆಲ ದಿನಗಳ ಮುನ್ನವೇ ಕನ್ನಡಿಗ ಕೆಎಲ್ ರಾಹುಲ್‌ಗೆ ಅಪೆಂಡಿಸಿಟಿಸ್ ಇದ್ದಿದ್ದು ಕಂಡುಬಂದಿತ್ತು. ಹೀಗಾಗಿ ಕೆಎಲ್ ರಾಹುಲ್‌ರನ್ನು ಟೂರ್ನಿಯ ವೇಳೆಯೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಹೀಗೆ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇದೀಗ ಮುಂಬೈ ತಲುಪಿರುವ ರಾಹುಲ್ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಸಿದ್ಧರಾಗುತ್ತಿದ್ದಾರೆ.

ಈ ನಡುವೆ ಕೆಎಲ್ ರಾಹುಲ್ ಸಣ್ಣ ತಾಲೀಮೊಂದನ್ನು ನಡೆಸಿದ್ದು ಅವುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಮತ್ತೆ ಕ್ರಿಕೆಟ್ ಆಡಲು ಸಿದ್ಧನಿದ್ದೇನೆ ಎಂಬುದನ್ನು ಕೆಎಲ್ ರಾಹುಲ್ ಪರೋಕ್ಷವಾಗಿ ತಮ್ಮ ಅನುಯಾಯಿಗಳಿಗೆ ತಿಳಿಸಿದರು.

kl rahul athiya shetty

ಕೆಎಲ್ ರಾಹುಲ್ ತಾವು ತಯಾರಿ ನಡೆಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಮತ್ತು ಇತರ ಸೆಲೆಬ್ರೆಟಿಗಳು ಸಾಲು ಸಾಲು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಪೋಸ್ಟಿಗೆ ಕೆಎಲ್ ರಾಹುಲ್ ಅವರ ಪ್ರೇಯಸಿ ಎಂದೇ ಹಲವಾರು ಬಾರಿ ಸುದ್ದಿಯಾಗಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಕೂಡ ಕಾಮೆಂಟ್ ಮಾಡಿದ್ದಾರೆ. ಯಾವುದೇ ಅಕ್ಷರವನ್ನು ಬಳಸದೆ ಒಂದು ಇಮೋಜಿಯನ್ನು ಹಾಕಿ ಕಾಮೆಂಟ್ ಮಾಡಿರುವ ಅಥಿಯಾ ಶೆಟ್ಟಿಗೆ ಕೆಎಲ್ ರಾಹುಲ್ ಕೂಡ ಇಮೋಜಿಯ ಮುಖಾಂತರವೇ ಪ್ರತಿಕ್ರಿಯಿಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿ ಸೃಷ್ಟಿಯಾಗಿದೆ. ಈ ಹಿಂದೆ ಎದ್ದಿದ್ದ ಸುದ್ದಿಗಳಂತೆ ಈ ಬಾರಿಯೂ ಕೂಡ ಕೆ ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ನಡುವೆ ಪ್ರೀತಿ-ಪ್ರೇಮ ಇದೆ ಎನ್ನಲಾಗುತ್ತಿದೆ.

Story first published: Friday, May 28, 2021, 14:11 [IST]
Other articles published on May 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+