Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಟೀಮ್‌ ಮ್ಯಾನೇಜ್ಮೆಂಟ್‌ ಚಿಂತೆ ಹೆಚ್ಚಿಸಿದ ಕೆಎಲ್ ರಾಹುಲ್ ಬ್ಯಾಟಿಂಗ್‌?

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್‌, ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲೂ ಭರವಸೆಯ ಬ್ಯಾಟಿಂಗ್ ನಡೆಸಿದರು. ಈ ಮೂಲಕ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇರುವುದಾಗಿ ಸಾಬೀತು ಪಡಿಸಿದರು. ಬೌನ್ಸಿ ಟ್ರ್ಯಾಕ್‌ಗಳಲ್ಲಿ ಹೇಗೆ ಆಡಬೇಕು ಎಂಬುದನ್ನು ಯುವ ಆಟಗಾರರಿಗೆ ತೋರಿಸಿಕೊಟ್ಟರು. 4 ಹಾಗೂ 5ನೇ ಸ್ಟಂಪ್‌ ಮೇಲೆ ಚೆಂಡು ಬಂದರೆ ಏನು ಮಾಡಬೇಕು ಎಂಬುದನ್ನು ರಾಹುಲ್‌ ತಮ್ಮ ಬ್ಯಾಟಿಂಗ್ ಮೂಲಕ ತೋರಿಸಿದರು. ಅಲ್ಲದೆ ಕೆಟ್ಟ ಎಸೆತ ಸಿಕ್ಕಾಗ ಹೇಗೆ ತಮ್ಮ ಕಲೆಯನ್ನು ಪ್ರದರ್ಶಿಸ ಬೇಕು ಎಂಬುದನ್ನು ತೋರಿಸಿದರು.

ಒಂದು ಹಂತದಲ್ಲಿ ಕೆಎಲ್‌ ರಾಹುಲ್‌ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಅನುಮಾನವಿತ್ತು. ಆದರೆ ಈಗ ಮೊದಲ ಟೆಸ್ಟ್‌ನಲ್ಲಿ ಕೆಎಲ್‌ ಆಡಿದ ಧಾಟಿಯನ್ನು ಕಂಡರೆ, ಇವರನ್ನು ಹೇಗೆ ತಂಡದಿಂದ ಕೈ ಬಿಡಬೇಕು ಎಂಬ ಚಿಂತೆ ಟೀಮ್ ಮ್ಯಾನೇಜ್ಮೆಂಟ್‌ಗೆ ಶುರುವಾಗಿದೆ. ಕೆಎಲ್‌ ರಾಹುಲ್‌ ಎರಡನೇ ಇನಿಂಗ್ಸ್‌ನಲ್ಲಿ ಆಡಿದ ಧಾಟಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಶನಿವಾರದ ಆಟದಲ್ಲಿ ಮಾತ್ರ ಚೇತೇಶ್ವರ್ ಪೂಜಾರ ಅನುಪಸ್ಥಿತಿ ತಂಡಕ್ಕೆ ಕಾಡಲೇ ಇಲ್ಲ ಎನ್ನುವಂತೆ ಬ್ಯಾಟಿಂಗ್ ಮಾಡಿದ್ದಾರೆ.

KL Rahul Shines Team Management Faces Tough Call for Second Test

ಕೆಎಲ್ ರಾಹುಲ್ ಕ್ಲಾಸ್ ಇನಿಂಗ್ಸ್‌

ದಶಕಗಳ ಹಿಂದೆ ಇದ್ದ ಕೆಎಲ್‌ ರಾಹುಲ್‌ ಅವರ ಆಟವನ್ನು ಮತ್ತೆ ಕಾಣಲು ಸಿಕ್ಕಿದೆ. ಈ ಪಂದ್ಯದಲ್ಲಿ ನಿಜಕ್ಕೂ ರಾಹುಲ್ ಕ್ಲಾಸಿಕ್ ಆಟದ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ಹಬ್ಬದೂಟವನ್ನು ನೀಡಿದ್ದಾರೆ. ಅದರಲ್ಲೂ ಇವರಿಗೆ ಆಡುವ ಹನ್ನೊಂದರ ಬಳಗದಲ್ಲೇ ಸ್ಥಾನ ಸಿಗುವುದು ಡೌಟ್ ಎಂದು ಹೇಳುತ್ತಿರುವಾಗ, ಗಾಯದಿಂದಾದಿ ಹಲವು ಆಟಗಾರರು ಪಂದ್ಯದಿಂದ ದೂರ ಸರಿದರು. ಇದರ ಸಂಪೂರ್ಣ ಲಾಭ ಪಡೆದ ರಾಹುಲ್‌ ಮನಮೋಹಕ ಆಟದ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ರಾಹುಲ್‌, ಯಶಸ್ವಿ ಜೈಸ್ವಾಲ್‌ ಅವರ ಜೊತೆಗೂಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು.

ಅಜೇಯ ಜೊತೆಯಾಟ

ಮೊದಲ ಇನಿಂಗ್ಸ್‌ನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದ ರಾಹುಲ್‌, ಎರಡನೇ ಇನಿಂಗ್ಸ್‌ನಲ್ಲಿ ಎಲ್ಲಿಯೂ ತಪ್ಪು ಹೆಜ್ಜೆ ಇಡಲೇ ಇಲ್ಲ. ಕ್ಲಾಸಿಕ್‌ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್‌ ಅಬ್ಬರಿಸಿದರು. ಅಲ್ಲದೆ ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್‌ ಜೊತೆಗೂಡಿ ಮೊದಲ ವಿಕೆಟ್‌ಗೆ 172 ರನ್‌ಗಳ ಅಜೇಯ ಜೊತೆಯಾಟದ ಕಾಣಿಕೆ ನೀಡಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

KL Rahul Shines Team Management Faces Tough Call for Second Test

ಎರಡನೇ ಇನಿಂಗ್ಸ್‌ನಲ್ಲಿ ಒಬ್ಬ ಟೆಸ್ಟ್‌ ಬ್ಯಾಟರ್‌ ರೀತಿ ಬ್ಯಾಟ್ ಮಾಡಿದ ಕೆಎಲ್ ರಾಹುಲ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು 153 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ ಅಜೇಯ 62 ರನ್‌ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾನುವಾರದ ದಿನದಾಟದ ಮೊದಲಾವಧಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಆಸೀಸ್‌ಗೆ ಸವಾಲಿನ ಗುರಿಯನ್ನು ನೀಡುವ ಇರಾದೆಯನ್ನು ರಾಹುಲ್ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಯಶಸ್ವಿ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Story first published: Saturday, November 23, 2024, 18:17 [IST]
Other articles published on Nov 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+