KL Rahul: ಕ್ರಿಸ್ ಗೇಲ್ ದಾಖಲೆ ಸಮಕ್ಕೆ ನಿಂತ ರಾಹುಲ್ -ಕನ್ನಡಿಗ ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ
ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಶನಿವಾರ ಮಧ್ಯಾಹ್ನದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಈ ವೇಳೆ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಅನುಭವ ಬಳಸಿಕೊಂಡು ಆಡಿದ ರಾಹುಲ್ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಶತಕ ಬಾರಿಸಿದರು.
ಐಪಿಎಲ್‌ನಲ್ಲಿ 153ನೇ ಪಂದ್ಯ ಆಡಿದ ಕೆಎಲ್ ರಾಹುಲ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು ಕೆಎಲ್ ಆರ್ಭಟ ನಡೆಸಿದರು. ಇವರು ಐಪಿಎಲ್‌ನಲ್ಲಿ ಆರನೇ ಶತಕ ಬಾರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯಲ್ಲಿ ಜಂಟಿಯಾಗಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅವರೊಂದಿಗೆ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಐಪಿಎಲ್‌ನಲ್ಲಿ 8 ಶತಕ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಜೋಸ್ ಬಟ್ಲರ್ ಇದ್ದು, ಇವರು 7 ಶತಕ ಬಾರಿಸಿದ್ದಾರೆ.
ಜೀವದಾನದ ಲಾಭ ಪಡೆದ ರಾಹುಲ್
ಕೆಎಲ್ ರಾಹುಲ್ ಅವರಿಗೆ ಪಂಜಾಬ್ ಕಿಂಗ್ಸ್ ಒಂದು ಜೀವದಾನ ನೀಡಿತು. ಅರ್ಷದೀಪ್ ಸಿಂಗ್ ಎಸೆತದಲ್ಲಿ ರಾಹುಲ್ ಡೀಪ್ ಸ್ಕ್ವೇರ್ ಲೆಗ್ ಬೌಂಡರಿ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು. ಆದರೆ ಇದೇ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಶಶಾಂಕ್ ಸಿಂಗ್ ಸುಲಭವಾದ ಕ್ಯಾಚ್ ಕೈ ಚೆಲ್ಲಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ಮೊದಲ ಜೀವದಾನ ನೀಡಿತು. ಇನ್ನು ವಿಜಯ್‌ಕುಮಾರ್ ವೈಶಾಖ್ ಸಹ ತಮ್ಮದೇ ಬೌಲಿಂಗ್‌ನಲ್ಲಿ ಕಾಟ್ ಆಂಡ್ ಬೋಲ್ಡ್ ಅವಕಾಶವನ್ನು ಕೈ ಚೆಲ್ಲಿದರು. ಈ ಎರಡೂ ಅವಕಾಶವನ್ನು ಬಳಸಿಕೊಂಡ ರಾಹುಲ್ ಅಬ್ಬರಿಸಿದರು.
ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ವೇಗವಾಗಿ ಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು 47 ಎಸೆತಗಳಲ್ಲಿ ಶತಕ ಬಾರಿಸಿದರು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ವೈಯಕ್ತಿಕ ಗರಿಷ್ಠ ರನ್ ಸಾಧನೆ ಮಾಡಿದ ದಾಖಲೆಯನ್ನು ಬರೆದರು. ಇದಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ 128 ರನ್ ಬಾರಿಸಿದ ಹಿರಿಮೆ ಹೊಂದಿದ್ದರು. ಈಗ ಈ ದಾಖಲೆ ರಾಹುಲ್ ಹೆಸರಿಗೆ ನಮೂದಿಸಲಾಗಿದೆ.
ರಾಹುಲ್ ಬರೆದ ದಾಖಲೆಗಳ ಪಟ್ಟಿ
- 1- ಡೆಲ್ಲಿ ಪರ ವೇಗವಾಗಿ ಶತಕ ಸಿಡಿಸಿದ ಬ್ಯಾಟರ್. ಇವರು ಪಂಜಾಬ್ ವಿರುದ್ಧ 47 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
- 2- ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ ಸಮಕ್ಕೆ ನಿಂತ ರಾಹುಲ್
- 3- ಡೆಲ್ಲಿ ಪರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಈ ಮೊದಲು ಈ ದಾಖಲೆ ರಿಷಭ್ ಪಂತ್ (128) ಹೆಸರಿನಲ್ಲಿತ್ತು.
- 4- ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಮೊದಲ ಭಾರತೀಯ ಆಟಗಾರ. ರಾಹುಲ್ ಪಂಜಾಬ್ ವಿರುದ್ಧ ಅಜೇಯ 152 ರನ್ ಸಿಡಿಸಿದ್ದಾರೆ.
- 5- ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟರ್ ಬಾರಿಸಿದ ದೊಡ್ಡ ಮೊತ್ತದ ದಾಖಲೆ ಸಹ ರಾಹುಲ್ ಪಾಲಾಗಿದೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಸಹ ಇವರದ್ದಾಯಿತು.
- 6- ಈ ಅಮೋಘ ಇನಿಂಗ್ಸ್‌ನ ಬಲದಿಂದ ರಾಹುಲ್ (357 ರನ್) ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
- 7- ನಿತೀಶ್ ರಾಣಾ ಅವರೊಂದಿಗೆ ಕೆಎಲ್ ರಾಹುಲ್ ಎರಡನೇ ವಿಕೆಟ್‌ಗೆ 220 ರನ್ ಜೊತೆಯಾಟ ನೀಡಿದರು. ಈ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ರನ್ ಜೊತೆಯಾಟದ ಕಾಣಿಕೆ ನೀಡಿದ ಪಟ್ಟಿಯಲ್ಲಿ ಈ ಜೋಡಿ ಎರಡನೇ ಸ್ಥಾನ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications