Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡಿಗ ಕೆಎಲ್‌ ರಾಹುಲ್‌ ಆರ್ಭಟಕ್ಕೆ ಗೇಲ್‌, ಮ್ಯಾಕ್ಸ್‌ವೆಲ್‌ ಸಿಕ್ಸರ್‌ ದಾಖಲೆ ಪೀಸ್‌ ಪೀಸ್‌

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಲೀಗ್‌ ಹಂತದ ಪಂದ್ಯಗಳು ಮುಗಿದಿವೆ. ಈಗ ಎಲ್ಲರ ಚಿತ್ತ ಪ್ಲೇ ಆಫ್‌ನತ್ತ ನೆಟ್ಟಿದೆ. ಲೀಗ್‌ ಹಂತದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ಹೊರ ನಡೆದಿದೆ. ಆದರೆ ಈ ತಂಡದ ಸ್ಟಾರ್ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಇತಿಹಾಸದಲ್ಲಿ ಬೇರೊಬ್ಬ ಬ್ಯಾಟರ್‌ ನಿರ್ಮಿಸಲು ಸಾಧ್ಯವಾಗದ ದಾಖಲೆ ನಿರ್ಮಿಸಿದ್ದಾರೆ. ಕೆಎಲ್‌ ರಾಹುಲ್‌ ನಿರ್ಮಿಸಿದ ದಾಖಲೆ ಯಾವುದು? ಇಲ್ಲಿದೆ ವರದಿ.

ಭಾನುವಾರ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್‌ ತಂಡಗಳು ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 203 ರನ್‌ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಕೆಕೆಆರ್‌ 18.4 ಓವರ್‌ಗಳಲ್ಲಿ 163 ರನ್‌ ಸೇರಿಸಿ ಆಲೌಟ್ ಆಯಿತು. ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್‌ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.

KL Rahul

ಡೆಲ್ಲಿ ಕ್ಯಾಪಿಟಲ್ಸ್‌ ಪರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರಾಹುಲ್‌ 30 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 60 ರನ್‌ ಸಿಡಿಸಿದರು. ರಾಹುಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಋತುವಿನಲ್ಲಿ ಅವರು 31 ಸಿಕ್ಸರ್‌ಗಳನ್ನು ತಲುಪಿದರು. ಈ ಮೂಲಕ ರಾಹುಲ್ ದೈತ್ಯ ಬ್ಯಾಟರ್ ಕ್ರಿಸ್ ಗೇಲ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸಾಧನೆಯನ್ನು ಮೀರಿ ನಿಂತರು.

ರಾಹುಲ್ ಐಪಿಎಲ್ ಇತಿಹಾಸದಲ್ಲಿ ಮೂರು ವಿಭಿನ್ನ ತಂಡಗಳಿಗಾಗಿ ಒಂದೇ ಋತುವಿನಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾದರು. ಕೆಎಲ್ ರಾಹುಲ್ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ಗಾಗಿ 30+ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈಗ, ಡೆಲ್ಲಿ ಕ್ಯಾಪಿಟಲ್ಸ್‌ ಪರ ಈ ಸಾಧನೆ ಮಾಡುವ ಮೂಲಕ ರಾಹುಲ್ ಇತಿಹಾಸ ನಿರ್ಮಿಸಿದ್ದಾರೆ.

ಗೇಲ್, ಮ್ಯಾಕ್ಸ್‌ವೆಲ್ ದಾಖಲೆ ಅಳಿಸಿದ ರಾಹುಲ್

ಕ್ರಿಸ್ ಗೇಲ್ 2009 ಮತ್ತು 2021 ರ ನಡುವೆ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಪರ 30 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ಮತ್ತು ಪಂಜಾಬ್ ಪರವೂ ಈ ಸಾಧನೆ ಮಾಡಿದ್ದಾರೆ. ರಾಹುಲ್ ಮೂರು ವಿಭಿನ್ನ ತಂಡಗಳ ಪರ ಬ್ಯಾಟ್ ಮಾಡಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ.

ಐಪಿಎಲ್‌ನಲ್ಲಿ ಒಂದಕ್ಕಿಂತ ಹೆಚ್ಚು ತಂಡಗಳಿಗೆ 30 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರು

ಕೆಎಲ್ ರಾಹುಲ್ - 3 ತಂಡಗಳು (ಪಂಜಾಬ್, ಎಲ್‌ಎಸ್‌ಜಿ, ಡಿಸಿ)
ಕ್ರಿಸ್ ಗೇಲ್ - 2 ತಂಡಗಳು (ಆರ್‌ಸಿಬಿ ಮತ್ತು ಪಂಜಾಬ್)
ಗ್ಲೆನ್ ಮ್ಯಾಕ್ಸ್‌ವೆಲ್ - 2 ತಂಡಗಳು (ಆರ್‌ಸಿಬಿ ಮತ್ತು ಪಂಜಾಬ್)

Story first published: Monday, May 25, 2026, 9:51 [IST]
Other articles published on May 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+