ಟೀಮ್ ಇಂಡಿಯಾ ಪರ ಅದೆಷ್ಟೋ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಟಗಾರ ಕೆಎಲ್ ರಾಹುಲ್. ಸೀಮಿತ ಓವರ್‌ಗಳೇ ಆಗಿರಲಿ ಟೆಸ್ಟ್ ಪಂದ್ಯಗಳೇ ಆಗಿರಲಿ, ರಾಹುಲ್ ಬ್ಯಾಟ್ ಮಾಡುತ್ತಾ ಇದ್ದರೆ ನೋಡುವುದೇ ಚೆಂದ. ಕೆಲವು ದಿನ ಗಾಯದಿಂದ ಬಳಲಿ, ಮತ್ತೆ ಬ್ಲ್ಯೂ ಜೆರ್ಸಿ ತೊಟ್ಟಿದ್ದಾರೆ. ಈಗ ಇವರ ಚಿತ್ತ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯುವುದಾಗಿದೆ. ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಭರವಸೆಯ ಬ್ಯಾಟರ್ ಕರ್ನಾಟಕದ ಕೆ.ಎಲ್ ರಾಹುಲ್ ಬಹುದಿನಗಳ ಬಳಿಕ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಎರಡು ಪಂದ್ಯಗಳನ್ನು ಆಡಿದ್ದಾರೆ. ಇವರ ಈ ಪ್ರದರ್ಶನವನ್ನು ನೋಡಿದರೆ ಮುಂದಿನ ಪಂದ್ಯಗಳಲ್ಲಿ ಅವರಿಗೆ ತಂಡದಲ್ಲಿ ಸ್ಥಾನ ನೀಡುವುದು ಡೌಟ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಸಾಮಾಜಿಕ ತಾಣದಲ್ಲಿ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಕೆಎಲ್ ರಾಹುಲ್ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಈ ಪೋಸ್ಟ್‌ನಲ್ಲಿ ನಿವೃತ್ತಿಯ ಬಗ್ಗೆ ಬರೆದುಕೊಂಡಿದ್ದು, ರಾಹುಲ್ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಭಾರತ ತಂಡವನ್ನು ಪ್ರತಿನಿಧಿಸಿದ ಹೆಮ್ಮೆ ನನ್ನದು. ಅನೆಕ ಪ್ರತಿಭಾನ್ವಿತ ಆಟಗಾರರೊಂದಿಗೆ ಆಡಿದ ಸವಿ ನೆನಪು ಇದೆ ಎಂದು ಬರೆದುಕೊಂಡಿದ್ದಾರೆ.
ಕೆ.ಎಲ್ ರಾಹುಲ್ ಅವರು ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ನಿಜ. ಆದರೆ ಆ ಫೊಸ್ಟ್‌ನಲ್ಲಿ ಅವರು ನಾನು ಏನೋ ಹೇಳುವುದಿದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ್ನು ಕಿಡಿಗೆಡಿಗಳು ತಮಗೆ ಇಷ್ಟ ಬಂದಂತೆ ತಿರುಚಿದ್ದಾರೆ. ಅಲ್ಲದೆ ನಿವೃತ್ತಿಯ ವದಂತಿ ಹರಡಲಾರಂಭಿಸಿದ್ದಾರೆ.
ಕರ್ನಾಟಕದ ಪರ ದೇಶೀಯ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿದ್ದ ಕೆಎಲ್ ರಾಹುಲ್, 2014ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡುತ್ತಾರೆ. ಅಲ್ಲಿಂದ ಭಾರತ ತಂಡದ ಖಾಯಂ ಸದಸ್ಯರಾದರು. ಇವರು ತಮ್ಮ ಬಿರುಸಿನ ಬ್ಯಾಟಿಂಗ್ ನೆರವಿನಿಂದ ತಂಡಕ್ಕೆ ಆಧಾರವಾಗಿದ್ದರು. ಅಗತ್ಯ ಬಿದ್ದಾಗ ವಿಕೆಟ್ ಕೀಪರ್ ಆಗಿ ಸಹ ಕೆಲಸ ಮಾಡಿ ಮಿಂಚಿದ ಆಟಗಾರ. ಕೆಎಲ್ 50 ಟೆಸ್ಟ್ ಪಂದ್ಯಗಳಲ್ಲಿ 2863 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರು 77 ಪಂದ್ಯಗಳಲ್ಲಿ 2851 ರನ್ ಮತ್ತು 72 ಟಿ20 ಪಂದ್ಯಗಳಲ್ಲಿ 2265 ರನ್ ಗಳಿಸಿದ್ದಾರೆ.