ಹೋಟೆಲ್ ನಲ್ಲಿ ಜೊತೆಯಾಗಿ ತಗಲಾಕ್ಕೊಂಡಿದ್ದಾರೆ ರಾಹುಲ್-ಅಗರ್ವಾಲ್


ಮುಂಬೈ, ಮೇ 30: ಸ್ಫುರದ್ರೂಪಿ ಕ್ರಿಕೆಟ್ ಆಟಗಾರ ಕೆಎಲ್ ರಾಹುಲ್ ಐಪಿಎಲ್ ನಲ್ಲಿ ಮಿಂಚಿದ್ದನ್ನು ನೀವು ಗಮನಿಸಿರಬಹುದು. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಯುವ ಆಟಗಾರ ಸ್ಫೋಟಕ ಬ್ಯಾಟಿಂಗ್ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ಇದೇ ರಾಹುಲ್ ಅವರು ಬಾಲಿವುಡ್ ನಟಿ ನಿಧಿ ಅಗರ್ವಾಲ್ ಅವರೊಂದಿಗೆ ಹೋಟೆಲ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.
ಇಬ್ಬರೂ ಮುಂಬೈಯ ಬಾಂದ್ರಾದಲ್ಲಿನ ಹೋಟೆಲೊಂದರಿಂದ ಹೊರಬರುತ್ತಿದ್ದಾಗ ಸಾರ್ವಜನಿಕರು ಗಮನಿಸಿದ್ದರು. ಫೋಟೋಗ್ರಾಫರ್ ಒಬ್ಬರು ಇಬ್ಬರ ಫೋಟೋವನ್ನೂ ಪಟ ಪಟನೆ ಕ್ಲಿಕ್ಕಿಸಿದ್ದರು. ಆ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿವೆ. ಇಬ್ಬರ ಬಗ್ಗೆ ಗುಸುಗುಸುಗಳೂ ಓಡಾಡುತ್ತಿವೆ.
ಜಾಕೀಶ್ರಾಫ್ ಪುತ್ರ ಟೈಗರ್ ಶ್ರಾಫ್ ಜೊತೆ 'ಮುನ್ನಾ ಮೈಕಲ್' ಚಿತ್ರದ ಮೂಲಕ ನಿಧಿ ಅಗರ್ವಾಲ್ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಚಿತ್ರ ಭರ್ಜರಿ ಯಶಸ್ವಿ ಕಾಣದಿದ್ದರೂ ನಿಧಿ ನಟನೆ ಗಮನ ಸೆಳೆದಿತ್ತು. ಇದೀಗ ನಿಧಿ, ಯುವ ಆಟಗಾರ ರಾಹುಲ್ ಜೊತೆ ಕಾಣಿಸಿಕೊಂಡಿರುವುದರಿಂದ ಕ್ರೀಡಾಭಿಮಾನಿಗಳು ಮತ್ತು ಸಿನಿಪ್ರಿಯರು ಇಬ್ಬರೂ ಕೊಹ್ಲಿ-ಅನುಷ್ಕಾರಂತಹ ಮತ್ತೊಂದು ದಂಪತಿಯನ್ನು ಕಾಣಲಿದ್ದೇವೆಯೇ ಎಂದು ಮಾತನಾಡಿಕೊಳ್ಳುವಂತಾಗಿದೆ.
ಗಮ್ಮತ್ತಿನ ಸಂಗತಿಯೆಂದರೆ ರಾಹುಲ್-ಅಗರ್ವಾಲ್ ಇಬ್ಬರೂ ಉಪಹಾರಕ್ಕೋಸ್ಕರ ಹೋಟೆಲಿಗೆ ಹೋಗಿದ್ದರು ಎನ್ನಲಾಗಿದೆ. ಆದರೆ ಸೆಲೆಬ್ರಿಟಿಗಳಿಬ್ಬರು ಜೊತೆಯಾಗಿ ಕಾಣಸಿಕ್ಕಿದ್ದನ್ನು ಅಭಿಮಾನಿಗಳು ಕಂಡು ಸುಮ್ಮನಿರುತ್ತಾರೆಯೇ? ಒಂದಕ್ಕೊಂದನ್ನು ಸೇರಿಸಿ ಗುಸುಗುಸು ಉಸುರಿದ್ದಾರೆ. ಹಾಗಾಗಿ ಇಬ್ಬರ ಫೋಟೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ ಗುಸುಗುಸುವಾಲರು ರಾಹುಲ್ ಮತ್ತು ಎಲಿಕ್ಸಿರ್ ನಹರ್ ಬಗ್ಗೆ ಸುದ್ದಿ ಹಬ್ಬಿಸಿದ್ದರು. ಈಗ ರಾಹುಲ್-ನಿಧಿ ಅಗರ್ವಾಲ್ ರೂಮರ್ಸ್ ಗೆ ತುತ್ತಾಗಿದ್ದಾರೆ. ಹೋಟೆಲ್ ಗೆ ಆಹಾರ ಸೇವಿಸಲು ಹೋಗಿದ್ದಾರೆ ಅಂದೋರು ಕಂಡವರ ಬಾಯಿಗೆ ಆಹಾರವಾಗಿಬಿಟ್ಟಿದ್ದಾರೆ. ಆದರೆ ರಾಹುಲ್ ಆಗಲಿ ಅಗರ್ವಾಲ್ ಆಗಲಿ ಈ ವಿಚಾರದ ಬಗ್ಗೆ ಏನೂ ಪ್ರತಿಕ್ರಿಯಿಸದಿರುವುದು ಮತ್ತೊಂದು ಇಂಟರೆಸ್ಟಿಂಗ್ ಪಾಯಿಂಟ್!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications