For Quick Alerts
ALLOW NOTIFICATIONS  
For Daily Alerts
 

ICC T20I Rankings : ವಿರಾಟ್ ಕೊಹ್ಲಿಗಿಂತ ಕೆಎಲ್ ರಾಹುಲ್ ಮುಂದು

KL Rahul static at 3rd, Virat Kohli improves to 7th spot in ICC T20I batting rankings

ದುಬೈ: ಬುಧವಾರ (ಡಿಸೆಂಬರ್ 23) ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿರುವ ಪುರುಷರ ಟಿ20ಐ ರ್‍ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 7ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಮತ್ತೊಬ್ಬ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ 3ನೇ ಸ್ಥಾನದಲ್ಲಿದ್ದಾರೆ. ಭಾರತ-ಆಸ್ಟ್ರೇಲಿಯಾ ಟಿ20ಐ ಮತ್ತು ನ್ಯೂಜಿಲೆಂಡ್-ಪಾಕಿಸ್ತಾನ ಟಿ20ಐ ಸರಣಿ ಮುಕ್ತಾಯದ ಬಳಿಕ ರ್‍ಯಾಂಕಿಂಗ್‌ನಲ್ಲಿ ಏರಿಳಿತವಾಗಿದೆ.

ಟಿ20ಐ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಬಿಟ್ಟರೆ ಉಳಿದ ವಿಭಾಗಗಳಾದ ಬೌಲಿಂಗ್‌ ಮತ್ತು ಆಲ್ ರೌಂಡರ್ ರ್‍ಯಾಂಕಿಂಗ್‌ಗಳಲ್ಲಿ ಭಾರತೀಯರ ಸ್ಥಾನ ಉತ್ತಮವಾಗಿಲ್ಲ. ಯಾರೂ ಕೂಡ 10ರೊಳಗೆ ಸ್ಥಾನ ಪಡೆದುಕೊಂಡಿಲ್ಲ.

ನೂತನ ಟಿ20ಐ ರ್‍ಯಾಂಕಿಂಗ್‌ನಲ್ಲಿ ಬೇರೆ ಬೇರೆ ಆಟಗಾರರು, ತಂಡಗಳ ಸ್ಥಾನಗಳು ಮಾಹಿತಿ ಇಲ್ಲಿದೆ.

ಬ್ಯಾಟಿಂಗ್‌ ರ್‍ಯಾಂಕಿಂಗ್‌

ಬ್ಯಾಟಿಂಗ್‌ ರ್‍ಯಾಂಕಿಂಗ್‌

ಟಿ20ಐ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ 1. ಡೇವಿಡ್ ಮಲಾನ್‌, ಇಂಗ್ಲೆಂಡ್ (915 ಪಾಯಿಂಟ್ಸ್‌), 2. ಬಾಬರ್ ಅಝಾಮ್, ಪಾಕಿಸ್ತಾನ (820), 3. ಕೆಎಲ್ ರಾಹುಲ್, ಭಾರತ (816), 4. ಆ್ಯರನ್ ಫಿಂಚ್, ಆಸ್ಟ್ರೇಲಿಯಾ, 5. ರಾಸ್ಸಿ ವ್ಯಾನ್ ಡೆರ್ ಡುಸೆನ್, ದಕ್ಷಿಣ ಆಫ್ರಿಕಾ ಇದ್ದಾರೆ. ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದು 696 ಪಾಯಿಂಟ್ಸ್‌ ಗಳಿಸಿದ್ದಾರೆ.

ಬೌಲಿಂಗ್ ರ್‍ಯಾಂಕಿಂಗ್‌

ಬೌಲಿಂಗ್ ರ್‍ಯಾಂಕಿಂಗ್‌

ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ 1. ರಶೀದ್ ಖಾನ್, ಅಫ್ಘಾನಿಸ್ತಾನ (736 ಪಾಯಿಂಟ್ಸ್), 2. ಮುಜೀಬ್ ಉರ್ ರಹ್ಮಾನ್, ಅಫ್ಘಾನಿಸ್ತಾನ (730), 3. ಆದಿಲ್ ರಶೀದ್, ಇಂಗ್ಲೆಂಡ್ (700), 4. ಆ್ಯಡಂ ಝಂಪಾ, ಆಸ್ಟ್ರೇಲಿಯಾ, 5. ತಬ್ರೈಸ್ ಸಂಶಿ, ದಕ್ಷಿಣ ಆಫ್ರಿಕಾ ಇದ್ದಾರೆ.

ಆಲ್ ರೌಂಡರ್ಸ್

ಆಲ್ ರೌಂಡರ್ಸ್

ಆಲ್ ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ 1. ಮೊಹಮ್ಮದ್ ನಬಿ, ಅಫ್ಘಾನಿಸ್ತಾನ (294 ಪಾಯಿಂಟ್ಸ್‌), 2. ಶಕೀಬ್ ಅಲ್ ಹಸನ್, ಬಾಂಗ್ಲಾದೇಶ (268), 3. ಗ್ಲೆನ್ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯಾ (225), 4. ರಿಚರ್ಡ್ ಬೆರಿಂಗ್ಟನ್, ಸ್ಕಾಟ್ಲೆಂಡ್, 5. ಸೀನ್ ವಿಲಿಯಮ್ಸ್, ಜಿಂಬಾಬ್ವೆ.

ತಂಡಗಳ ರ್‍ಯಾಂಕಿಂಗ್

ತಂಡಗಳ ರ್‍ಯಾಂಕಿಂಗ್

ತಂಡಗಳ ಟಿ20ಐ ರ್‍ಯಾಂಕಿಂಗ್‌ನಲ್ಲಿ 1. ಇಂಗ್ಲೆಂಡ್ (275 ರೇಟಿಂಗ್ ಪಾಯಿಂಟ್ಸ್‌), 2. ಆಸ್ಟ್ರೇಲಿಯಾ (272), 3. ಭಾರತ (268), 4. ಪಾಕಿಸ್ತಾನ, 5. ದಕ್ಷಿಣ ಆಫ್ರಿಕಾ, 6. ನ್ಯೂಜಿಲೆಂಡ್, 7. ಶ್ರೀಲಂಕಾ, 8. ಬಾಂಗ್ಲಾದೇಶ, 9. ಅಫ್ಘಾನಿಸ್ತಾನ, 10. ವೆಸ್ಟ್ ಇಂಡೀಸ್ ಇವೆ.

Story first published: Thursday, December 24, 2020, 9:53 [IST]
Other articles published on Dec 24, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+