
ಬೆಂಗಳೂರು, ಜುಲೈ 06: ಕರ್ನಾಟಕದ ಯುವ ಪ್ರತಿಭೆ ಕೆ. ಎಲ್. ರಾಹುಲ್ ಅವರು ಕ್ರಿಕೆಟ್ ಮೈದಾನದಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೇ ರೀತಿ ಮೈದಾನದ ಹೊರಗೂ ಅವರ ಅಭಿಮಾನಿಗಳ ಸಂಖ್ಯೆ ಪ್ರತಿ ದಿನ ಬೆಳೆಯುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ರಾಹುಲ್ ಅವರಿಗೆ ಟೀಂ ಇಂಡಿಯಾದಿಂದ ಹೊಸ ಇನ್ನಿಂಗ್ಸ್ ಆರಂಭಿಸಲು ಸೂಚಿಸಲಾಗಿದೆ.
#TeamIndia boys sweating it out in the nets ahead of the 2nd T20I against England. #ENGvIND
A post shared by Team India (@indiancricketteam) on
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದ ರಾಹುಲ್, 'ಜುಲೈ 1ರಿಂದ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಇನ್ಸ್ಟಾಗ್ರಾಂ ಖಾತೆಯನ್ನು ನಾನು ನಿಭಾಯಿಸುತ್ತಿದ್ದೇನೆ.
ಕೆಎಲ್ ರಾಹುಲ್ ಅವರ ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ 20 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ತಂಡದ ಸದಸ್ಯರು ನಡೆಸಿರುವ ಅಭ್ಯಾಸ, ಆಟಗಾರರ ಸಾಧನೆ, ಹುಟ್ಟುಹಬ್ಬ ಆಚರಣೆ ಮುಂತಾದ ವಿಷಯಗಳನ್ನು ಹಂಚಿಕೊಳ್ಳಲಾಗಿದೆ. ಸರಾಸರಿ 2 ಲಕ್ಷದಂತೆ ಲೈಕ್ಸ್ ಸಿಕ್ಕಿವೆ.