ಐಸಿಸಿ ಶ್ರೇಯಾಂಕ: 11ನೇ ಸ್ಥಾನಕ್ಕೇರಿದ ಕನ್ನಡಿಗ ಕೆಎಲ್ ರಾಹುಲ್
ದುಬೈ, ಮಾರ್ಚ್ 31 : ಟೀಂ ಇಂಡಿಯಾದ ಆರಮಭಿಕ ಯುವ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್ ಅವರು ಅಂತಾರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟೆಸ್ಟ್ ಬ್ಯಾಟ್ಸ್ ಮನ್ ಗಳ ಶ್ರೇಯಾಂಕ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಕರ್ನಾಟಕದ 24 ವರ್ಷದ ಕಣ್ಣೂರು ಲೋಕೇಶ್ ರಾಹುಲ್ ಅವರು 46 ಸ್ಥಾನಗಳ ಭಾರಿ ಅಂತರದ ಬಡ್ತಿ ಪಡೆದಿದ್ದಾರೆ. ಆಸ್ಟ್ರೇಲಿಯಾ ಎದುರಿನ ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೂ ಮುನ್ನ ಅವರು 57ನೇ ಸ್ಥಾನದಲ್ಲಿದ್ದರು.[ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಮೊದಲ ಆಯ್ಕೆ: ಕೊಹ್ಲಿ]

ಕಳೆದ ಭಾನುವಾರ ಮುಕ್ತಾಯವಾದ ಸರಣಿಯಲ್ಲಿ ರಾಹುಲ್ ಆಸೀಸ್ ವಿರುದ್ಧ 7 ಇನ್ನಿಂಗ್ಸ್ ಗಳಲ್ಲಿ ಆರು ಅರ್ಧಶತಕಗಳನ್ನು (64, 90, 51, 67, 60, 51) ದಾಖಲಿಸಿ ಒಟ್ಟು 396 ರನ್ ಗಳನ್ನು ಗಳಿಸಿದರಿಂದ 11ನೇ ಸ್ಥಾನಕ್ಕೆ ಲಗ್ಗೆ ಹಾಕಿದರು.
ಉಳಿದಂತೆ ಚೇತೇಶ್ವರ್ ಪೂಜಾರಾ 4 ಹಾಗೂ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಅಜಿಂಕ್ಯಾ ರಹಾನೆ 14, ಮುರಳಿ ವಿಜಯ್ 34ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಭಾರತದ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಆಸ್ಟ್ರೇಲಿಯಾದ ನಾಯಕ ಸ್ಮೀವ್ ಸ್ಮೀತ್ ಬ್ಯಾಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಅಗ್ರ ಎರಡು ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ವೇಗದ ಬೌಲರ್ ಉಮೇಶ್ ಯಾದವ್ 21ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.
ಆಲ್ ರೌಂಡರ್ ವಿಬಾಗದಲ್ಲಿ ಅಶ್ವಿನ್ ಅವರನ್ನು ಹಿಂದಿಕ್ಕಿರುವ ಜಡೇಜಾ 2ನೇ ಸ್ಥಾನಕ್ಕೇರಿದ್ದಾರೆ. ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications