Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ ಎದುರು ಬಂದಾಗ ಕೆ.ಎಲ್‌ ರಾಹುಲ್‌ ಕ್ಯಾಪ್‌ ತೆಗೆದಿದ್ದೇಕೆ?: ಕಾರಣವೇನು?

KL Rahul: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕೇವಲ ಒಂದು ಶ್ರೀಮಂತ ಕ್ರಿಕೆಟ್‌ ಟೂರ್ನಿ ಆಗಿಲ್ಲ. ಹಲವು ಉದಯೋನ್ಮುಖ ಆಟಗಾರರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳುವ ವೇದಿಕೆಯಾಗಿದೆ. ಇಂತಹ ವೇದಿಕೆಯಲ್ಲಿ ಪಂದ್ಯದ ವೇಳೆ ಎದುರಾಳಿ ತಂಡಗಳ ಆಟಗಾರರು ಕೂಡ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ. ಇಂತಹ ಸಾಕಷ್ಟು ಉದಾಹರಣೆಗಳನ್ನು ಈ ಹಿಂದೆ ನಡೆದ ಪಂದ್ಯಗಳಲ್ಲಿ ನೋಡಿದ್ದೇವೆ.

ಈ ಋತುವಿನ ಐಪಿಎಲ್‌ ಟೂರ್ನಿಯಲ್ಲೂ ಆಟಗಾರರು ತಮ್ಮ ಸಾಮರ್ಥ್ಯದ ಜೊತೆಗೆ ಕ್ರೀಡಾ ಮನೋಭಾವವನ್ನು ವ್ಯಕ್ತಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಲಕ್ನೋ ಸೂಪರ್‌ ಜೆಂಟ್ಸ್‌ ನಾಯಕ ಕೆ.ಎಲ್‌ ರಾಹುಲ್‌ ತಮ್ಮ ಐಪಿಎಲ್‌ ಪ್ರಯಾಣವನ್ನು ಆರ್‌ಸಿಬಿ ತಂಡದ ಜೊತೆಗೆ ಆರಂಭಿಸಿದ್ದ ಬಗ್ಗೆ ಸ್ಪಿನ್‌ ಮಾಂತ್ರಿಕ ಆರ್.ಆಶ್ವಿನ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದಾದ ಬಳಿಕ ಕೆ.ಎಲ್‌ ರಾಹುಲ್‌ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಾಕಷ್ಟು ಗುಣಗಾನ ಮಾಡಿದ್ದರು.

KL Rahul Why did KL Rahul remove the cap

ಇದೀಗ ಮತ್ತೊಮ್ಮೆ ಕೆ.ಎಲ್‌ ರಾಹುಲ್ ಇಂತಹದೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಏ.19ರ ಶುಕ್ರವಾರ ಉತ್ತರ ಪ್ರದೇಶದ ಭಾರತ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಕ್ನೋ ಸೂಪರ್‌ ಜೆಂಟ್ಸ್‌ ಭರ್ಜರಿ ಜಯ ಗಳಿಸಿತ್ತು. ಪಂದ್ಯ ಮುಗಿದ ಬಳಿಕ ಎರಡು ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಂಡರು. ಇದೇ ವೇಳೆ ಚೆನ್ನೈ ತಂಡ ವಿಕೆಟ್‌ ಕೀಪರ್‌ ಎಂ.ಎಸ್‌ ಧೋನಿ ಅವರಿಗೆ ಹಸ್ತಲಾಘುವ ಮಾಡುವಾಗ ಕೆ.ಎಲ್‌ ರಾಹುಲ್‌ ತಾವು ಧರಿಸಿದ್ದ ಕ್ಯಾಪ್‌ ತೆಗೆದಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕ್ರಿಕೆಟ್‌ ಪ್ರೇಮಿಗಳು ಕೆ.ಎಲ್‌ ರಾಹುಲ್‌ ಅವರ ಈ ನಡೆಗೆ ಮೆಚ್ಚುಗೆ ಸಲ್ಲಿಸಿದ್ದಾರೆ.

KL Rahul Why did KL Rahul remove the cap

ಕ್ಯಾಪ್‌ ತೆಗೆಯಲು ಕಾರಣವೇನು? : ಟೀಮ್‌ ಇಂಡಿಯಾದ ಮಾಜಿ ನಾಯಕ ಎಂ.ಎಸ್‌ ಧೋನಿ, 2007ರಲ್ಲಿ ಮೊದಲ ಆವೃತ್ತಿಯ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಧೋನಿ ನೇತೃತ್ವದಲ್ಲಿ ಚಾಂಪಿಯನ್‌ ಟ್ರೋಪಿಯನ್ನು ಸಹಾ ಭಾರತ ಮುಡಿಗೇರಿಸಿಕೊಂಡಿತ್ತು. ಈ ಮೂಲಕ ಐಸಿಸಿಯ ಪ್ರಮುಖ ಟ್ರೋಪಿಗಳನ್ನು ಗೆಲ್ಲಿಸಿಕೊಟ್ಟ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದರು. ತದನಂತರ ಧೋನಿಯ ಮೇಲಿನ ಗೌರವ ಅಭಿಮಾನಿಗಳಲ್ಲಿ ಮಾತ್ರವಲ್ಲದೆ, ಆಟಗಾರರಲ್ಲಿಯೂ ಹೆಚ್ಚಾಗಿತ್ತು. ಹೀಗಾಗಿ ಕಳೆದ ಪಂದ್ಯದಲ್ಲಿ ಧೋನಿ ಎದುರು ಬಂದಾಗಕೆ.ಎಲ್‌ ರಾಹುಲ್ ತಲೆ ಮೇಲಿನ ಕ್ಯಾಪ್‌ ತೆಗೆದು ಗೌರವ ಸೂಚಿಸಿದ್ದಾರೆ.

Story first published: Saturday, April 20, 2024, 16:26 [IST]
Other articles published on Apr 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+