ಗಾಯಕ್ಕೊಳಗಾಗಿ ದ.ಆಫ್ರಿಕಾ ಸರಣಿಯಿಂದ ಹೊರಬಿದ್ದ ರಾಹುಲ್ ಕುರಿತು ಸಿಹಿಸುದ್ದಿ ಕೊಟ್ಟ ಬಿಸಿಸಿಐ ಅಧಿಕಾರಿ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ಟೀಮ್ ಇಂಡಿಯಾ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ ಕಡೆ ಮುಖ ಮಾಡಿದ್ದು, ಸದ್ಯ ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದೆ. ಟಿ ಟ್ವೆಂಟಿ ನಾಯಕ ರೋಹಿತ್ ಶರ್ಮಾ ವಿಶ್ರಾಂತಿಗೆಂದು ಹೊರಗುಳಿದಿದ್ದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕೆಎಲ್ ರಾಹುಲ್ ಅವರ ಹೆಗಲಿಗೆ ಹಾಕಲಾಗಿತ್ತು.
ಆದರೆ ಪ್ರಥಮ ಪಂದ್ಯ ಆರಂಭವಾಗುವುದಕ್ಕೂ ಮುನ್ನವೇ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ತೊಡೆಸಂದಿಯ ಗಾಯಕ್ಕೆ ಒಳಗಾದ ಕೆ ಎಲ್ ರಾಹುಲ್ ಸರಣಿಯಿಂದಲೇ ಹೊರ ಬಿದ್ದರು. ಪಂದ್ಯ ಆರಂಭವಾಗಬೇಕಿದ್ದ ಮುನ್ನಾದಿನ ಈ ವಿಷಯವನ್ನು ಸ್ವತಃ ಘೋಷಣೆ ಮಾಡಿದ ಬಿಸಿಸಿಐ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರಿಷಭ್ ಪಂತ್ ಅವರಿಗೆ ನೀಡಿತು ಹಾಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಸ್ಥಾನ ದೊರಕಿತು.
ಇತ್ತ ಈ ವರ್ಷ ಮೂರನೇ ಬಾರಿಗೆ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಗಾಯದ ಸಮಸ್ಯೆಯಿಂದಾಗಿ ಕೈ ತಪ್ಪಿಸಿಕೊಂಡಿರುವ ಕೆಎಲ್ ರಾಹುಲ್ ಅವರ ಮುಂದಿನ ಕತೆಯೇನು ಎಂಬ ಕುತೂಹಲ ಇದೀಗ ಎಲ್ಲರಲ್ಲಿಯೂ ಮೂಡಿದೆ. ಜುಲೈ ತಿಂಗಳಲ್ಲಿ ಭಾರತ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗಳಲ್ಲಿ ಕಣಕ್ಕಿಳಿಯಲಿದ್ದು, ಈ ಸರಣಿಗಳಿಗೆ ಕೆಎಲ್ ರಾಹುಲ್ ಲಭ್ಯರಾಗುತ್ತಾರಾ ಅಥವಾ ಗಾಯದ ಸಮಸ್ಯೆಯಿಂದಾಗಿ ಈ ಸರಣಿಗಳಿಗೂ ಗೈರಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇನ್ನು ಈ ಕುರಿತಾಗಿ ಇದೀಗ ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಹೇಳಿಕೆಯನ್ನು ನೀಡಿದ್ದು, ಅವರ ಪ್ರತಿಕ್ರಿಯೆ ಈ ಕೆಳಕಂಡಂತಿದೆ.

ಗಾಯಕ್ಕೊಳಗಾಗಿರುವ ರಾಹುಲ್ ಈ ದಿನದಂದು ಇಂಗ್ಲೆಂಡ್‌ಗೆ
ಇನ್ನು ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಬಿದ್ದಿರುವ ರಾಹುಲ್ ಸದ್ಯ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತಾಗಿ ಮಾಹಿತಿ ನೀಡಿರುವ ಬಿಸಿಸಿಐನ ಹಿರಿಯ ಅಧಿಕಾರಿ ಕೆ ಎಲ್ ರಾಹುಲ್ ಅವರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೆಲವು ದಿನಗಳು ಮಾತ್ರ ಇರಲಿದ್ದು, ಜೂನ್ 16ರಂದು ಇಂಗ್ಲೆಂಡ್‌ಗೆ ಹಾರಲಿರುವ ಮೊದಲ ಗುಂಪಿನ ಜೊತೆ ರಾಹುಲ್ ಕೂಡ ಇಂಗ್ಲೆಂಡ್ ತಲುಪಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಕೆಎಲ್ ರಾಹುಲ್ ಇಂಗ್ಲೆಂಡ್ ನೆಲದಲ್ಲಿಯೇ ಗುಣಮುಖರಾಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕೆಎಲ್ ರಾಹುಲ್ ತೀವ್ರ ಗಾಯಕ್ಕೊಳಗಾಗಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಬಿಸಿಸಿಐನ ಅಧಿಕಾರಿ ಕೆ ಎಲ್ ರಾಹುಲ್ ಅವರು ತೀವ್ರ ಗಾಯದ ಸಮಸ್ಯೆಗೇನು ಒಳಗಾಗಿಲ್ಲ, ಆದರೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಕಡ್ಡಾಯವಾಗಿ ಕಣಕ್ಕಿಳಿಯಬೇಕಾಗಿದೆ, ಹೀಗಾಗಿ ಮುಂಜಾಗ್ರತೆ ವಹಿಸಿ ರಾಹುಲ್ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.ಹೀಗೆ ಕೆಎಲ್ ರಾಹುಲ್ ತೀವ್ರ ಗಾಯಕ್ಕೊಳಗಾಗಿಲ್ಲ ಎಂಬ ಸಿಹಿಸುದ್ದಿಯನ್ನು ಬಿಸಿಸಿಐನ ಅಧಿಕಾರಿ ನೀಡಿದ್ದು, ಮುಂದಿನ ಸರಣಿಗಳಲ್ಲಿ ತಮ್ಮ ನೆಚ್ಚಿನ ಆಟಗಾರ ಕಣಕ್ಕಿಳಿಯುತ್ತಾರಾ ಎಂಬ ರಾಹುಲ್ ಅಭಿಮಾನಿಗಳ ಆತಂಕಕ್ಕೆ ಕೊನೆ ಹಾಡಿದ್ದಾರೆ. ಹಾಗೂ ಕೆಎಲ್ ರಾಹುಲ್ ಇಂಗ್ಲೆಂಡ್‌ಗೆ ಹಾರಲಿದ್ದಾರೆ ಎಂದಮೇಲೆ ಕಣಕ್ಕಿಳಿಯುವುದು ಖಚಿತ ಎಂಬುದೂ ಸಹ ನೆಮ್ಮದಿಯ ಸುದ್ದಿಯಾಗಿದೆ.

ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ
• ಐದನೇ ಟೆಸ್ಟ್ ಪಂದ್ಯ ( ಮುಂದೂಡಲ್ಪಟ್ಟ ) - ಜುಲೈ 1 - 5: ಬರ್ಮಿಂಗ್ ಹ್ಯಾಮ್
• ಪ್ರಥಮ ಟಿ ಟ್ವೆಂಟಿ ಪಂದ್ಯ - ಜುಲೈ 7 - ಸೌತಾಂಪ್ಟನ್
• ದ್ವಿತೀಯ ಟಿ ಟ್ವೆಂಟಿ ಪಂದ್ಯ - ಜುಲೈ 9 - ಬರ್ಮಿಂಗ್ ಹ್ಯಾಮ್
• ತೃತೀಯ ಟಿ ಟ್ವೆಂಟಿ ಪಂದ್ಯ - ಜುಲೈ 10 - ನಾಟಿಂಗ್ ಹ್ಯಾಮ್
• ಪ್ರಥಮ ಏಕದಿನ ಪಂದ್ಯ - ಜುಲೈ 12 - ಓವಲ್
• ದ್ವಿತೀಯ ಏಕದಿನ ಪಂದ್ಯ - ಜುಲೈ 14 - ಲಾರ್ಡ್ಸ್
• ತೃತೀಯ ಏಕದಿನ ಪಂದ್ಯ - ಜುಲೈ 17 - ಮ್ಯಾಂಚೆಸ್ಟರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications