Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಅವಕಾಶ ಕೈ ಚೆಲ್ಲಿದ ಕನ್ನಡಿಗ ರಾಹುಲ್‌: ಟೀಮ್ ಇಂಡಿಯಾಕ್ಕೆ ಡಬಲ್ ಟೆಂನ್ಷನ್

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಸರಣಿ ನಡೆಯಲಿದೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರಿಗೆ ಒಂದು ಟೆನ್ಷನ್ ಆರಂಭವಾಗಿದೆ. ಈ ಸರಣಿಯ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ. ಹೀಗಾಗಿ ಈ ಸ್ಥಾನವನ್ನು ತುಂಬುವುದು ಯಾರು ಎಂಬ ಲೆಕ್ಕಾಚಾರವನ್ನು ಆರಂಭಿಸಿತ್ತು. ಈ ವೇಳೆ ಥಟ್ಟನೆ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಭಾರತ ಎ ತಂಡದಲ್ಲಿ ಸ್ಥಾನ ನೀಡಿತು. ಈ ಮೂಲಕ ಭರವಸೆಯ ಆಟಗಾರನ ಬ್ಯಾಕ್‌ ಅಪ್‌ ಮಾಡಿತು.

ಆದರೆ ರಾಹುಲ್‌ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಇವರ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡುತ್ತಿಲ್ಲ. ಭಾರತ ಎ ತಂಡ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಭಾರತ ಎ ತಂಡ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಎರಡು ಅನಧಿಕೃತ ಟೆಸ್ಟ್ ಆಡಬೇಕಿದೆ. ಈ ವೇಳೆ ರಾಹುಲ್ ಹಾಗೂ ಧ್ರುವ್ ಜುರೇಲ್‌ ಅವರಿಗೆ ಭಾರತ ಎ ತಂಡ ಸೇರಲು ತಿಳಿಸಲಾಯಿತು. ಈ ಇಬ್ಬರೂ ಆಟಗಾರರು ನ್ಯೂಜಿಲೆಂಡ್ ವಿರುದ್ಧ ಸರಣಿ ಮುಗಿದ ಬಳಿಕ ಆಸ್ಟ್ರೇಲಿಯಾ ಫ್ಲೈಟ್ ಏರಿದರು.

KL Rahul s Australia A Struggles Add Pressure on Team India

ಕನ್ನಡಿಗನಿಗೆ ನಿರಾಸೆ

ರಾಹುಲ್‌ ಆಸ್ಟ್ರೇಲಿಯಾ ಫ್ಲೈಟ್ ಏರುತ್ತಿದ್ದಂತೆ ಬಿಸಿಸಿಐ ಯುದ್ಧ ಗೆದ್ದ ಸಂಭ್ರಮ ಮುಖದಲ್ಲಿ ಮನೆ ಮಾಡಿತ್ತು. ಆದರೆ ನಾಲ್ಕೇ ದಿನದಲ್ಲಿ ಬಿಸಿಸಿಐ ಮುಖದಲ್ಲಿ ಮತ್ತೆ ಚಿಂತೆಯ ಗೆರೆಗಳು ಮೂಡಲು ಆರಂಭಿಸಿದೆ. ಗುರುವಾರದಿಂದ ಆಸ್ಟ್ರೇಲಿಯಾ ಎ ವಿರುದ್ಧ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ಎ ತಂಡದಲ್ಲಿ ರಾಹುಲ್‌, ಧ್ರುವ ಜುರೇಲ್‌ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದರು. ಆದರೆ ಕನ್ನಡಿಗ ಕೆಎಲ್ ರಾಹುಲ್ ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲ ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.

ಆಡಿದ ಮೊದಲ ಇನಿಂಗ್ಸ್‌ನಲ್ಲಿ ರಾಹುಲ ಕೇವಲ ನಾಲ್ಕು ರನ್‌ಗಳಿಗೆ ಆಟ ಮುಗಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟುವ ಸೂಚನೆಯನ್ನು ನೀಡಿದ್ದರು. ಆದರೆ ಈ ಆಸೆ ಸಹ ಫಲಿಸಲಿಲ್ಲ. 44 ಎಎಸೆತಗಳನ್ನು ಎದುರಿಸಿ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಇ ಪಂದ್ಯದಲ್ಲೂ ರೋಹಿತ್‌ 10 ರನ್‌ಗಳಿಗೆ ಆಟ ಮುಗಿಸಿದರು. ಮೆಲ್ಬೋರ್ನ್ ಅಂಗಳದಿಂದ ಬರುತ್ತಿರುವ ಸುದ್ದಿ ನಿಜಕ್ಕೂ ಬಿಸಿಸಿಐ ಟೆನ್ಷನ್‌ ಹೆಚ್ಚಿಸಿದೆ.

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಎರಡನೇ ಮಗವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಿಂದ ದೂರ ಸರಿಯುವ ಸಾಧ್ಯತೆ ಇದೆ. ಈ ವೇಳೆ ಟೀಮ್ ಇಂಡಿಯಾದ ಓಪನರ್‌ ಯಾರು ಎಂಬ ಚಿಂತೆ ನಿಜಕ್ಕೂ ಬಿಸಿಸಿಐ ನೆದ್ದೆ ಗೆಡಿಸಿದೆ. ಇದಕ್ಕೆ ಉತ್ತರ ಹುಡಕಲೇ ಬಿಸಿಸಿಐ ಕೆ.ಎಲ್ ರಾಹುಲ್ ಅವರಿಗೆ ಭಾರತ ಎ ತಂಡ ಸೇರಿಕೊಳ್ಳುವಂತೆ ಸೂಚನೆ ನೀಡಿತ್ತ. ಆದರೆ ಇವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದು, ನಿರಾಸೆ ಅನುಭವಿಸಿದ್ದಾರೆ.

Story first published: Friday, November 8, 2024, 13:53 [IST]
Other articles published on Nov 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+