IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಕೆಎಲ್ ರಾಹುಲ್ ಶತಕಕ್ಕೆ ಬಹುಪರಾಕ್ ಹೇಳಿದ ಮಾಜಿ ದಿಗ್ಗಜ
ಬುಧವಾರ, ಡಿಸೆಂಬರ್ 27ರಂದು ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿದರು.
ಕೆಎಲ್ ರಾಹುಲ್ ತಮ್ಮ ಆಕ್ರಮಣಕಾರಿ ಇನ್ನಿಂಗ್ಸ್‌ನಲ್ಲಿ 137 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಮೇತ 101 ರನ್ ಗಳಿಸಿ ಕೊನೆಯವರಾಗಿ ಔಟಾದರು. ಈ ಮೂಲಕ ಭಾರತ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ 67.4 ಓವರ್‌ಗಳಲ್ಲಿ 245 ರನ್ ಕಲೆಹಾಕಲು ನೆರವಾದರು.

ಇದೇ ವೇಳೆ ಭಾರತದ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಅವರ ವೀರಾವೇಶದ ಶತಕಕ್ಕಾಗಿ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಮನತುಂಬಿ ಹೊಗಳಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ತಮ್ಮ ಭಾರತ ತಂಡಕ್ಕೆ ಧೈರ್ಯ ತುಂಬುವ ಬೆಳಕಾಗಿ ಹೊರಹೊಮ್ಮಿದರು. ಆರಂಭದಲ್ಲಿ ಬ್ಯಾಟಿಂಗ್‌ಗೆ ಕಠಿಣ ವಿಕೆಟ್‌ನಂತೆ ತೋರುತ್ತಿದ್ದ ಪಿಚ್‌ನಲ್ಲಿ ಕೆಎಲ್ ರಾಹುಲ್ ಅಮೋಘ ಶತಕದೊಂದಿಗೆ ಭಾರತವನ್ನು 245 ರನ್ನುಗಳ ಗೌರವದ ಮೊತ್ತಕ್ಕೆ ಮುನ್ನಡೆಸಿದರು. ಅಂತಿಮವಾಗಿ ಪ್ರೇಕ್ಷಕರಿಂದ ಅರ್ಹವಾದ ಪ್ರಶಂಸೆಯೊಂದಿಗೆ ಮೈದಾನದಿಂದ ಹೊರನಡೆದರು.

ಕೆಎಲ್ ರಾಹುಲ್ ತಮ್ಮ 8ನೇ ಟೆಸ್ಟ್ ಶತಕವನ್ನು ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ಗಳಿಸಿದ್ದಕ್ಕಾಗಿ ಸ್ಟಾರ್ ಬ್ಯಾಟರ್‌ನನ್ನು ಸುನಿಲ್ ಗವಾಸ್ಕರ್ ಶ್ಲಾಘಿಸಿದರು. ಅಲ್ಲದೆ, ಈ ಶತಕವನ್ನು ಭಾರತೀಯ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆಯುತ್ತದೆ ಎಂದರು.
50 ವರ್ಷಗಳಿಂದ ಕ್ರಿಕೆಟ್ ನೋಡುತ್ತಿರುವ ನಾನು, ಕೆಎಲ್ ರಾಹುಲ್ ಅವರ ಈ ಶತಕ ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಟಾಪ್ 10ರಲ್ಲಿದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.
ಭಾರತವು ಟೆಸ್ಟ್ ಪಂದ್ಯದ 1ನೇ ದಿನದಂದು ಅಗ್ರ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಳ್ಳುವ ಮೂಲಕ ಆರಂಭಿಕ ಹಿನ್ನಡೆ ಅನಿಭವಿಸಿತು. ಆದರೆ ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಜೋಡಿಯ ಪ್ರಯತ್ನದಿಂದ ಪುನರಾಗಮನ ಮಾಡಿದರು.
ದುರದೃಷ್ಟವಶಾತ್, ಭಾರತೀಯ ತಂಡವು 121 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕಗಿಸೊ ರಬಾಡ ಅವರು ತಮ್ಮ ಐದು ವಿಕೆಟ್‌ಗಳ ಸಾಧನೆಯೊಂದಿಗೆ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. ಆದರೆ ಕೆಎಲ್ ರಾಹುಲ್ ಕ್ರೀಸ್‌ನಲ್ಲಿ ಬೇರೂರಿ ಭಾರತದ ಇನ್ನಿಂಗ್ಸ್‌ಗೆ ದೊಡ್ಡ ಕಾಣಿಕೆ ನೀಡಿದರು.
ತಮ್ಮ ಅಮೋಘ ಇನ್ನಿಂಗ್ಸ್‌ನೊಂದಿಗೆ 31 ವರ್ಷದ ಬ್ಯಾಟರ್ ಕೆಎಲ್ ರಾಹುಲ್ ಕೆಳ ಕ್ರಮಾಂಕದ ಬ್ಯಾಟರ್‌ಗಳ ಜೊತೆ ಸೇರಿ ಉತ್ತಮ ಜೊತೆಯಾಟಗಳನ್ನು ನೀಡಿದರು.
ಶಾರ್ದೂಲ್ ಠಾಕೂರ್ ಅವರೊಂದಿಗೆ ಗಮನಾರ್ಹ 42 ರನ್‌ಗಳ ಜೊತೆಯಾಟ ಪ್ರಮುಖವಾಗಿತ್ತು. ನಂತರ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಜೊತೆಗಿನ ಜೊತೆಯಾಟವು ಭಾರತದ ಸ್ಕೋರ್ ಬೋರ್ಡ್ ಹೆಚ್ಚಿಸಿತು.
ಕೆಎಲ್ ರಾಹುಲ್ ಕಠಿಣ ಬ್ಯಾಟಿಂಗ್ ಪರಿಸ್ಥಿತಿಯಲ್ಲಿಯೂ ಅಗ್ರ ಪ್ರದರ್ಶನ ನೀಡಿದರು. ಇದು ಸೆಂಚುರಿಯನ್‌ನಲ್ಲಿ ಕೆಎಲ್ ರಾಹುಲ್ ಅವರ ಸತತ ಎರಡನೇ ಶತಕವಾಗಿದ್ದು, ಆ ಸ್ಥಳದಲ್ಲಿ ಬಹು ಶತಕಗಳನ್ನು ಗಳಿಸಿದ ಮೊದಲ ವಿದೇಶ ಬ್ಯಾಟರ್ ಎನಿಸಿದರು.
ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಸೆಂಚುರಿಯನ್ ಜೊತೆಗಿನ ವಿಶೇಷ ಸಂಬಂಧವನ್ನು ಕೆಎಲ್ ರಾಹುಲ್ ಮುಂದುವರಿಸಿದರು, ರೇನ್‌ಬೋ ನಾಡಿಗೆ ಭಾರತದ ಕೊನೆಯ ಪ್ರವಾಸದ ಸಮಯದಲ್ಲಿ 123 ರನ್ ಗಳಿಸಿ 2021/22ರ ಸರಣಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲಲು ಭಾರತ ತಂಡಕ್ಕೆ ಮಾರ್ಗದರ್ಶನ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications