For Quick Alerts
ALLOW NOTIFICATIONS  
For Daily Alerts
 

KL Rahul: ಇಂಗ್ಲೆಂಡ್‌ ತಂಡಕ್ಕೆ ಶುರುವಾಯ್ತು ಭಯ: ಕನ್ನಡಿಗ ರಾಹುಲ್‌ ಶತಕ

ಟೀಮ್ ಇಂಡಿಯಾ ಈಗ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಸರಣಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ 2025-27ರ ಅಡಿಯಲ್ಲಿ ನಡೆಯಲಿದೆ. ಈ ಸರಣಿಗೂ ಭಾರತ "ಎ" ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್‌ ಸರಣಿಯನ್ನು ಆಡುತ್ತಿದೆ. ಉಭಯ ದೇಶಗಳ ನಡುವಣ ಎರಡನೇ ಅನಧಿಕೃತ ಟೆಸ್ಟ್‌ ಶುಕ್ರವಾರದಿಂದ ಆರಂಭವಾಗಿದೆ. ಈ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಕೆಎಲ್ ರಾಹುಲ್ ಆಡುತ್ತಿದ್ದಾರೆ.

ಇಂಗ್ಲೆಂಡ್‌ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ "ಎ" ತಂಡ ಉತ್ತಮ ಆರಂಭವನ್ನು ಪಡೆಯುವಲ್ಲಿ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಯಶಸ್ವಿ ಜೈಸ್ವಾಲ್‌ (17) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅಭಿಮನ್ಯು ಈಶ್ವರನ್‌ (11) ಸಹ ಬೇಗ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.

KL Rahul s Century Powers India A Against England Lions

ಮೂರನೇ ವಿಕೆಟ್‌ಗೆ ಆರಂಭಿಕ ಕೆಎಲ್ ರಾಹುಲ್ ಹಾಗೂ ಕರುಣ್‌ ನಾಯರ್ ಅವರ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ನೆರವಾಯಿತು. ಆರಂಭದಲ್ಲಿ ಬಿದ್ದ ಎರಡು ವಿಕೆಟ್‌ಗಳಿಂದ ಚೇತರಿಕೆ ಕಾಣಲು ನೆರವಾಯಿತು. ಈ ಜೊಡಿ 139 ಎಸೆತಗಳಲ್ಲಿ 86 ರನ್‌ ಸಿಡಿಸಿತು. ಇನ್ನು ಮೊದಲ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಅಬ್ಬರಿಸಿದ್ದ ಕರುಣ್‌ ನಾಯರ್‍‌ 4 ಬೌಂಡರಿ ನೆರವಿನಿಂದ 40 ರನ್‌ ಸಿಡಿಸಿ ಔಟ್ ಆದರು.

ಜುರೇಲ್‌, ರಾಹುಲ್‌ ಅಮೋಘ ಆಟ

ನಾಲ್ಕನೇ ವಿಕೆಟ್‌ಗೆ ಆರಂಭಿಕ ಕೆಎಲ್ ರಾಹುಲ್ ಹಾಗೂ ವಿಕೆಟ್‌ ಕೀಪರ್‍‌ ಬ್ಯಾಟರ್ ಧ್ರುವ್ ಜುರೇಲ್‌ ರನ್ ಕಲೆ ಹಾಕುವಲ್ಲಿ ಸಫಲರಾದರು. ಈ ಜೋಡಿ ಅಮೋಘ ಜೊತೆಯಾಟದ ನೆರವಿನಿಂದ ತಂಡ ಉತ್ತಮ ಮೊತ್ತದತ್ತ ದಾಪುಗಾಲು ಇಡುವಂತೆ ಮಾಡಿತು. ಮೊದಲ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ವಿಕೆಟ್‌ ಕೀಪರ್‍‌ ಧ್ರುವ್ ಜುರೇಲ್‌ ಎರಡನೇ ಪಂದ್ಯದಲ್ಲೂ ಸಮಯೋಚಿತ ಪ್ರದರ್ಶನ ಮುಂದುವರೆಸಿದರು. ಜುರೇಲ್‌ 87 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 52 ರನ್‌ ಬಾರಿಸಿ ಮಿಂಚಿದರು.

KL Rahul s Century Powers India A Against England Lions

ಕೆಎಲ್‌ ಶತಕ

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್‌ ಆರಂಭಿಕರಾಗಿ ಕಣಕ್ಕೆ ಇಳಿದು ತಂಡಕ್ಕೆ ಆಧಾರವಾದರು. ಐಪಿಎಲ್‌ನಲ್ಲಿ ನೀಡಿದ್ದ ಅಬ್ಬರದ ಪ್ರದರ್ಶನವನ್ನು ಇಂಗ್ಲೆಂಡ್‌ನಲ್ಲೂ ಮುಂದುವರೆಸಿದರು. ಇಂಗ್ಲೆಂಡ್ ತಂಡದ ಬೌಲರ್‍‌ಗಳನ್ನು ಕಾಡಿದ ರಾಹುಲ್‌ ಟೀಮ್ ಇಂಡಿಯಾಕ್ಕೆ ನೆರವಾದರು. ಇವರು 168 ಎಸೆತಗಳನ್ನು ಎದುರಿಸಿ ಭರವಸೆ ಮೂಡಿಸಿದರು. ಈ ವೇಳೆ ರಾಹುಲ್ 15 ಬೌಂಡರಿ, 1 ಸಿಕ್ಸರ್ ಸಹಾಯದಿಂದ 116 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಇವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ "ಎ" ಉತ್ತಮ ಮೊತ್ತವನ್ನು ಕಲೆ ಹಾಕಿತು.

Story first published: Friday, June 6, 2025, 23:29 [IST]
Other articles published on Jun 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+