ಟೀಮ್ ಇಂಡಿಯಾದ ಆಟಗಾರರಿಗೂ ಹಾಗೂ ಬಾಲಿವುಡ್‌ಗೂ ವಿಶೇಷ ಸಂಬಂಧ ಇದೆ. ಟೀಮ್ ಇಂಡಿಯಾದ ಸ್ಟಾರ್ ವಿರಾಟ್ ಕೊಹ್ಲಿ ಮನದರಸಿ ನಟಿ ಅನುಷ್ಕಾ ಶರ್ಮಾ.. ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹೀಗೆ ಹಲವು ಕ್ರಿಕೆಟ್ ಆಟಗಾರರ ಅರ್ಧಾಂಗಿಗಳು ಬಾಲಿವುಡ್‌ನ ಬೆಳ್ಳಿ ತೆರೆಯ ಮೇಲೆ ಮಿಂಚಿ ಸೈ ಎನಿಸಿಕೊಂಡವರೆ. ಈ ಲೀಸ್ಟ್ ಲೇಟ್‌ಸ್ಟಾಗಿ ಎಂಟ್ರಿ ಆದ ಜೋಡಿ ಟೀಮ್ ಇಂಡಿಯಾ ಭವಿಷ್ಯದ ನಾಯಕ ಎಂದೇ ಕರಿಸಿಕೊಳ್ಳುವ ಕೆ.ಎಲ್.ರಾಹುಲ್ ಹಾಗೂ ಆಥಿಯಾ ಶೆಟ್ಟಿ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಂತರ ಪ್ರಸ್ತುತ ಟೀಂ ಇಂಡಿಯಾದ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್ ಎಂಬ ಸ್ಥಾನಮಾನವನ್ನು ಕೆಎಲ್ ರಾಹುಲ್ ಹೊಂದಿದ್ದಾರೆ. 2014ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಲೋಕೆಶ್ ರಾಹುಲ್ ಅವರಿಗೆ 31 ವರ್ಷ ವಯಸ್ಸಾಗಿದ್ದು, ಎಲ್ಲಾ ಮೂರು ಮಾದರಿಗಳಲ್ಲಿ ಭಾರತ ತಂಡದ ನಾಯಕತ್ವವನ್ನು ನಿಭಾಯಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ ಆಡುತ್ತಿರುವ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರನ್ನು ವಿವಾಹವಾದರು.

ಇಬ್ಬರೂ ಸ್ಟಾರ್‌ಗಳು ತಮ್ಮಿಬ್ಬರಲ್ಲಿ ಅಂತಹದ್ದೇನೂ ಇಲ್ಲ ಎಂದು ಹೇಳುತ್ತಲೇ ಪ್ರೀತಿಗೆ ಜಾರಿದರು. ರಾಹುಲ್ ಹಾಗೂ ಆಥಿಯಾ ಅವರ ಒಬ್ಬ ಸಾಮಾನ್ಯ ಸ್ನೇಹಿತ ಇಬ್ಬರನ್ನೂ ಪರಿಚಯಿಸಿದ್ದರು ಮತ್ತು ಇಬ್ಬರೂ 2019 ರಿಂದ ಸಂಬಂಧದಲ್ಲಿದ್ದರು. ಇಬ್ಬರೂ ತಮ್ಮ ಲವ್ ಸ್ಟೋರಿಯನ್ನು ಆರಂಭದಲ್ಲಿ ಗೌಪ್ಯವಾಗಿಟ್ಟಿದ್ದರು ಮತ್ತು ಸುಮಾರು ಒಂದು ವರ್ಷ ಕಳೆದ ನಂತರವೇ ಜನರಿಗೆ ಈ ವಿಷಯ ತಿಳಿಯಿತು. ಆದರೆ, ಈ ಸಮಯದಲ್ಲಿ ಪೋಸ್ಟ್ ಮಾಡಿದ ಫೋಟೋಗಳಿಂದ, ಅಭಿಮಾನಿಗಳಿಗೆ ಈ ಇಬ್ಬರ ನಡುವೆ ಏನೋ ನಡೆದಿದೆ ಎಂಬ ಕಲ್ಪನೆ ಬರಲಾರಂಭಿಸಿತು. ಡಿಸೈನರ್ ವಿಕ್ರಮ್ ಫಡ್ನಿಸ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಎಲ್ ರಾಹುಲ್‌ಗೆ ಸಂಬಂಧಿಸಿದ ಪ್ರಶ್ನೆಯನ್ನು ಅಥಿಯಾ ಕೇಳಿದ ನಂತರವೂ ಜನರಿಗೆ ಈ ವಿಷಯ ಕನ್ಫರ್ಮ್ ಆಯಿತು.
ರಾಹುಲ್ ಮತ್ತು ಅಥಿಯಾ ಎರಡು ವರ್ಷಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡಿದ ನಂತರ ಮದುವೆಯಾಗಿದ್ದಾರೆ. ಇಬ್ಬರೂ ಕರ್ನಾಟಕದವರಾಗಿದ್ದರಿಂದ ಪರಸ್ಪರ ಪರಿಚಯವಾಯಿತು ಮತ್ತು ನಂತರ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು. 2019 ರ ಕೊನೆಯಲ್ಲಿ, ಇಬ್ಬರೂ ಇತರ ಕೆಲವು ಸ್ನೇಹಿತರೊಂದಿಗೆ ಥೈಲ್ಯಾಂಡ್‌ನಲ್ಲಿ ಹೊಸ ವರ್ಷವನ್ನು ಆಚರಿಸಿದರು ಮತ್ತು ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅಥಿಯಾ ಅವರು 2020 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೋಸ್ಟ್ ಮೂಲಕ ಈ ಸಂಬಂಧವನ್ನು ದೃಢಪಡಿಸಿದರು.
ಅಥಿಯಾ ಅವರ ತಂದೆ ಸುನೀಲ್ ಶೆಟ್ಟಿ ಖ್ಯಾತ ಬಾಲಿವುಡ್ ನಟ ಹಾಗೂ ಕ್ರಿಕೆಟ್ ಪ್ರೇಮಿ. ಬಾಲಿವುಡ್ ಚಿತ್ರರಂಗದಲ್ಲಿ ಅಣ್ಣಾ ಎಂದೇ ಖ್ಯಾತಿ. ಇವರಿಗೆ ಮಾತ್ರ ವಿರಾಟ್ ಕೊಹ್ಲಿ ಎಂದ್ರೆ ಪಂಚ ಪ್ರಾಣ. ರಾಹುಲ್ ಆಟವನ್ನೂ ಇವರು ಆನಂದಿಸುತ್ತಾರೆ. ಶೆಟ್ಟಿ ಹೇಳುವ ಪ್ರಕಾರ, ನನ್ನ ನೆಚ್ಚಿನ ಕ್ರಿಕೆಟಿಗ ಮಟ್ಟಿಗೆ ವಿರಾಟ್ ಕೊಹ್ಲಿ. ಚೇಸಿಂಗ್‌ನಲ್ಲಿ ವಿರಾಟ್‌ಗೆ ಯಾರು ಸರಿ ಸಾಠಿ ಇಲ್ಲ ಎಂದು ಹೇಳುತ್ತಾರೆ.

ಅಥಿಯಾ ಮತ್ತು ರಾಹುಲ್ ಕೂಡ ಜಾಹೀರಾತು ಚಿತ್ರೀಕರಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. 2021 ರಲ್ಲಿ ಸುನೀಲ್ ಶೆಟ್ಟಿ ಅವರ ಮಗ ಅಹಾನ್ ಅವರ ಚೊಚ್ಚಲ ಚಿತ್ರ 'ತಡಪ್' ಪ್ರದರ್ಶನದ ಸಮಯದಲ್ಲಿ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡಿದ್ದಾರೆ. ಇದಾದ ನಂತರ ಅವರು ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಬೆನ್ನುನೋವಿನಿಂದ ರಾಹುಲ್ ಭಾರತ ತಂಡದಿಂದ ಹೊರಗುಳಿಯಬೇಕಾಯಿತು ಮತ್ತು ಅವರು 2022 ರಲ್ಲಿ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶಸ್ತ್ರಚಿಕಿತ್ಸೆಗಾಗಿ ಅಥಿಯಾ ಕೂಡ ರಾಹುಲ್ ಅವರೊಂದಿಗೆ ಜರ್ಮನಿಗೆ ಹೋಗಿದ್ದರು.
ಅಥಿಯಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಹುಲ್ ಅವರನ್ನು ಹೊಗಳಿ ತಮ್ಮ ಪ್ರೇಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಕಾಸ್ಮೋಪಾಲಿಟನ್ ಜೊತೆಗಿನ ಸಂಭಾಷಣೆಯಲ್ಲಿ, ಅಥಿಯಾ, 'ನಮ್ಮ ವ್ಯಕ್ತಿತ್ವಗಳು ತುಂಬಾ ವಿಭಿನ್ನವಾಗಿವೆ ಮತ್ತು ಪ್ರಾಮಾಣಿಕತೆ ಇಂದ ಕೂಡಿವೆ. ಇದು ನಮ್ಮನ್ನು ಸಮತೋಲನಗೊಳಿಸುವ ವಿಷಯವಾಗಿದೆ. ರಾಹುಲ್ ತಾಳ್ಮೆಯ ಗುಣ ನನಗೆ ಇಷ್ಟ ಎಂದು ಹೇಳಿದ್ದಾರೆ.
ಡಿಸೆಂಬರ್ 2014 ರಲ್ಲಿ ಪದಾರ್ಪಣೆ ಮಾಡಿದ್ದ ಕೆಎಲ್ ರಾಹುಲ್ ಅಬ್ಬರಿಸಿದ್ದಾರೆ. 9 ವರ್ಷಗಳಿಗೂ ಹೆಚ್ಚು ಕಾಲದ ಅವರ ಕ್ರಿಕೆಟ್ ಜೀವನದಲ್ಲಿ ಅವರು 49 ಟೆಸ್ಟ್, 75 ODI ಮತ್ತು 72 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಅವರು 33.59 ರ ಸರಾಸರಿಯಲ್ಲಿ 2755 ರನ್, ಏಕದಿನ ಕ್ರಿಕೆಟ್‌ನಲ್ಲಿ 50.35 ರ ಸರಾಸರಿಯಲ್ಲಿ 2820 ರನ್ ಮತ್ತು ಟಿ20ಯಲ್ಲಿ, 37.75 ರ ಸರಾಸರಿಯಲ್ಲಿ 2265 ರನ್‌ಗಳು ಅವರ ಹೆಸರಿನಲ್ಲಿ ದಾಖಲಾಗಿವೆ.
ರಾಹುಲ್ 2023ರ ವಿಶ್ವಕಪ್‌ನಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಭಾರತ ತಂಡದ ಭಾಗವಾಗಿದ್ದರು. ಈ ವರ್ಷ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅವರು ಪ್ರಬಲ ಸ್ಪರ್ಧಿ. ಟಿ20 ವಿಶ್ವಕಪ್‌ಗೂ ಮುನ್ನ ಅವರು ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.