For Quick Alerts
ALLOW NOTIFICATIONS  
For Daily Alerts
 

KL Rahul: 3211 ದಿನಗಳ ಬಳಿಕ ತವರಿನಲ್ಲಿ ಶತಕ ಬಾರಿಸಿದ ರಾಹುಲ್

ಕರ್ನಾಟಕದ ಸ್ಟಾರ್‌ ಆಟಗಾರ ಕೆಎಲ್ ರಾಹುಲ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಫಾರ್ಮ್‌ ಮುಂದುವರೆಸಿದ್ದಾರೆ. ಅಹದಮಾಬಾದ್‌ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ರಾಹುಲ್‌ ಕ್ಲಾಸಿಕ್‌ ಬ್ಯಾಟಿಂಗ್ ನಡೆಸಿದರು. ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 53 ರನ್ ಬಾರಿಸಿ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರಾಹುಲ್‌, ಎರಡನೇ ದಿನದಾಟದಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದರು. ಈ ಮೂಲಕ ರಾಹುಲ್‌ ತವರಿನಲ್ಲಿ ಮತ್ತೊಮ್ಮೆ ಮೂರಂಕಿಯ ಮೊತ್ತವನ್ನು ಮುಟ್ಟಿ ಸಂಭ್ರಮಿಸಿದರು.

ಟೀಮ್ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಅವರಿಂದ ತೆರವಾದ ಆರಂಭಿಕನ ಸ್ಥಾನಕ್ಕೆ ನ್ಯಾಯ ತುಂಬಿದ ಕನ್ನಡಿಗ ರಾಹುಲ್‌, ಇಂಗ್ಲೆಂಡ್‌ ಸರಣಿಯಲ್ಲಿ ಅಬ್ಬರಿಸಿದ್ದರು. ಇವರು ಆಂಡರ್ಸನ್‌ ಹಾಗೂ ತೆಂಡೂಲ್ಕರ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಲ್ಲದೆ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ 500ಕ್ಕೂ ಹೆಚ್ಚು ರನ್‌ಗಳನ್ನು ಒಂದೇ ಸರಣಿಯಲ್ಲಿ ಬಾರಿಸಿ ಅಬ್ಬರಿಸಿದ್ದರು. ಇದೇ ಫಾರ್ಮ್‌ನ್ನು ರಾಹುಲ್‌ ಮುಂದುವರೆಸಿದ್ದಾರೆ.

KL Rahul s Dominance Continues Century Against West Indies at Home

ಅಹಮದಾಬಾದ್‌ ಪಿಚ್‌ ಮರ್ಮ ಅರಿತು ಬ್ಯಾಟ್ ಮಾಡಿದ ಕೆಎಲ್ ರಾಹುಲ್ ಅಬ್ಬರಿಸಿದರು. ಆರಂಭದಿಂದಲೂ ತಮ್ಮ ನೈಜ್ಯ ಆಟವನ್ನು ಆಡಿದ ರಾಹುಲ್ ಕಲಾತ್ಮಕ ಹೊಡೆತಗಳ ಮೂಲಕ ಗಮನ ಸೆಳೆದರು. ಬೌನ್ಸಿ ಟ್ರ್ಯಾಕ್‌ನಲ್ಲಿ ಅಬ್ಬರಿಸುತ್ತಿದ್ದ ರಾಹುಲ್‌, ಈಗ ತವರಿನಲ್ಲೂ ಕ್ಲಾಸಿ ಪ್ರದರ್ಶನ ನೀಡಿದ್ದಾರೆ. ಇವರು ಸುಮಾರು 8 ವರ್ಷಗಳ ಬಳಿಕ ತವರಿನಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್‌ ಅವರ ಬ್ಯಾಟ್‌ನಿಂದ ಬಂದ ಎರಡೇ ಶತಕವಾಗಿದೆ. ಈ ಮೂಲಕ ರಾಹುಲ್‌ ತಮ್ಮ ಟೆಸ್ಟ್ ಕ್ರಿಕೆಟ್‌ ವೃತ್ತಿ ಜೀವನದ 11ನೇ ಶತಕವಾಗಿದೆ.

11ನೇ ಶತಕ

ಟೀಮ್ ಇಂಡಿಯಾದ ಆರಂಭೀಕ ಆಟಗಾರ ಕೆಎಲ್ ರಾಹುಲ್‌ 192 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 100 ರನ್‌ ಬಾರಿಸಿದ ಅಜೇಯರಾಗಯಳಿದರು. ಟೀಮ್ ಇಂಡಿಯಾ ಭೋಜನ ವಿರಾಮದ ವೇಳೆಗೆ 3 ವಿಕೆಟ್‌ ಕಳೆದುಕೊಂಡು 218 ರನ್‌ ಕಲೆ ಹಾಕಿದೆ. ಈ ಮೂಲಕ ಭಾರತ ಮೊದಲ ಇನಿಂಗ್ಸ್‌ನಲ್ಲಿ 56 ರನ್‌ ಮುನ್ನಡೆ ಸಾಧಿಸಿದೆ.

ಸೆಲೆಬ್ರೇಷನ್‌ ಹಿಂದಿನ ಗುಟ್ಟು ಏನು?

ಕರ್ನಾಟಕದ ಸ್ಟಾರ್ ಬ್ಯಾಟರ್‌ ಕೆಎಲ್ ರಾಹುಲ್ ಶತಕ ಬಾರಿಸುತ್ತಿದ್ದಂತೆ ತಮ್ಮ ಗ್ಲೌಸ್ ತೆಗೆದು ಎರಡ ಬಟ್ಟುಗಳನ್ನು ಬಾಯಲ್ಲಿ ಇಟ್ಟುಕೊಂಡರು. ಈ ಸೆಲೆಬ್ರೇಷನ್‌ ಹಿಂದಿನ ಗುಟ್ಟು ಏನು ಎಂಬದನ್ನು ಅವರೇ ಬಹಿರಂಗ ಪಡಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರಿಗೆ ದಿನೇಶ್ ಕಾರ್ತಿಕ್ ನಿಮ್ಮ ಸೆಲೆಬ್ರೇಷನ್‌ ಹಿಂದಿನ ರಹಸ್ಯ ಏನು ಎಂಬುದನ್ನು ಕೇಳಿದರು. ಆಗ ರಾಹುಲ್ ನನ್ನ ಮಗಳು ಎಂದು ಉತ್ತರಿಸಿದರು.

ಟೀಮ್ ಇಂಡಿಯಾದ ಮೊದಲ ಇನಿಂಗ್ಸ್‌ನಲ್ಲಿ ವಿಂಡೀಸ್ ವಿರುದ್ಧ 286 ರನ್‌ಗಳ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಎರಡನೇ ದಿನದಾಟಕ್ಕೆ 5 ವಿಕೆಟ್‌ ನಷ್ಟಕ್ಕೆ 448 ರನ್‌ ಕಲೆ ಹಾಕಿದೆ.

Story first published: Friday, October 3, 2025, 11:32 [IST]
Other articles published on Oct 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+