KL Rahul Diet Plan: 150 ಗ್ರಾಂ ಅನ್ನ..4 ಮೊಟ್ಟೆ..6 ದಿನವೂ ಬೇಕು ದೋಸೆ; ರಾಹುಲ್ ಡಯಟ್‌ನಲ್ಲಿ ಕರ್ನಾಟಕ ಟಚ್
ಕೆಎಲ್ ರಾಹುಲ್ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯೂಸಿ ಇದ್ದಾರೆ. ಸದ್ಯ ಇವರು ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯ. ಪ್ರಸಕ್ತ ವರ್ಷವಂತೂ ರನ್‌ಗಳ ತೋರಣ ಕಟ್ಟಿರುವ ರಾಹುಲ್, ಹಲವು ಬಾರಿ ತಂಡಕ್ಕೆ ಆಧಾರವಾಗಿದ್ದಾರೆ. ರಾಹುಲ್ ತಮ್ಮ ಆಟದಷ್ಟೇ ತಮ್ಮ ಫಿಟ್ನೆಸ್ ಬಗ್ಗೆಯೂ ಹೆಚ್ಚಿನ ಗಮನ ಹರಿಸುತ್ತಾರೆ. ಜತಿನ್ ಸಪುರ್ ನಡೆಸುವ ಲೈಕ್ ಆನ್ ಅಥ್ಲೀಟ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಈ ವೇಳೆ ರಾಹುಲ್ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಹುಲ್ ಹಲವು ಆಸಕ್ತಿ ದಾಯಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಲ್ಲದೆ ಪೂರ್ತಿ ದಿನ ಅವರ ಆಹಾರ ಪದ್ಧತಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಇವರು ತಮ್ಮ ಆಟದಷ್ಟೇ ತಮ್ಮ ಡಯಟ್‌ಗೂ ಹೆಚ್ಚಿನ ಒತ್ತು ನೀಡುವ ಆಟಗಾರ. ಇವರ ಡಯಟ್‌ನಲ್ಲಿ ಕರ್ನಾಟಕದ ಕರವಾಳಿ ಅಡುಗೆಯ ಟಚ್ ಕಾಣುತ್ತದೆ. ಹಾಗಿದ್ದರೆ ರಾಹುಲ್ ಡಯಟ್ ಪ್ಲ್ಯಾನ್ ಏನು ಎಂಬ ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ರಾಹುಲ್ ಈ ಕಾರ್ಯಕ್ರಮದಲ್ಲಿ ತಾವು ಎದ್ದಾಗಿನಿಂದ ಏನೆಲ್ಲಾ ವರ್ಕ್ ಔಟ್ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಜಿಮ್ ಆದ ಬಳಿಕ ತಿಂಡಿ ಮಾಡುವ ವೇಳೆ ಯಾವೆಲ್ಲಾ ಪದರ್ಥಗಳು ಇದ್ದರೆ ಇಷ್ಟ ಎಂದು ತಿಳಿಸಿದ್ದಾರೆ. ಇದೇ ವೇಳೆ ರಾಹುಲ್ ತಮ್ಮ ಬೆಳಗಿನ ತಿಂಡಿ ಒಂದೇ ರೀತಿಯಾಗಿರುತ್ತದೆ. ಮನೆಯಲ್ಲಿದ್ದರೆ ವಾರದ ಆರು ದಿನ ದೋಸೆ ತಿನ್ನುವೆ. ಅದರೊಂದಿಗೆ ಎಗ್ ಬುರ್ಜಿ, ಎಗ್ ತಿನ್ನುವೆ ಎಂದಿದ್ದಾರೆ. ಇವರು ಉಪಹಾರದಲ್ಲಿ ಯಾವದಾದರೂ ರೂಪದಲ್ಲಿ ನಾಲ್ಕು ಮೊಟ್ಟೆ ಸೇವಿಸುವುದಾಗಿ ತಿಳಿಸಿದ್ದಾರೆ. ಕಾರ್ಬೋಹೈಡ್ರೇಟ್, ಪ್ರೋಟೀನ್ ಗಾಗಿ ಬಾಳೆಹಣ್ಣು, ದಾಳಿಂಬೆ ಸೇವಿಸುವುದಾಗಿ ಬಹಿರಂಗ ಪಡಿಸಿದ್ದಾರೆ.
ಮಧ್ಯಾಹ್ನದ ಊಟದಲ್ಲಿ ಏನು ಇಷ್ಟ?
ರಾಹುಲ್ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಜಗತ್ತೀನ ಯಾವುದೇ ಭಾಗದಲ್ಲಿದ್ದರೂ ಮಧ್ಯಾಹ್ನದಲ್ಲಿ ಭಾರತೀಯ ಆಹಾರವನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ಈ ವೇಳೆ ಊಟದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವತ್ತ ಕನ್ನಡಿಗ ಎಚ್ಚರಿಕೆ ವಹಿಸುತ್ತಾರೆ. ಪಂದ್ಯಗಳು ಇಲ್ಲದೇ ಇದ್ದಾಗ 150 ಗ್ರಾಂ ಅನ್ನ, 200-250 ಗ್ರಾಂ ಪ್ರೋಟೀನ್ ಸೇವಿಸುತ್ತಾರೆ. ಊಟದಲ್ಲಿ ಹಸಿರು ತರಕಾರಿಗಳು 150-200 ಗ್ರಾಂ ಸೇವಿಸುತ್ತಾರೆ. ಇವರ ಹೆಚ್ಚಾಗಿ ಕರಾವಳಿ ಊಟವನ್ನೇ ಇಷ್ಟ ಪಡುತ್ತಾರೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಇನ್ನು ಪಂದ್ಯದ ದಿನದಂದು 200 ಗ್ರಾಂ ಅನ್ನ ಸೇವಿಸುತ್ತಾರೆ.
ರಾತ್ರಿ ಭೋಜನದಲ್ಲಿ ರಾಹುಲ್ ಲಘು ಆಹಾರವನ್ನು ಸೇವಿಸುತ್ತಾರೆ. ಇದರಿಂದ ಮರುದಿನದ ತರಬೇತಿಗೆ ತನ್ನ ದೇಹವನ್ನು ಸಿದ್ಧಪಡಿಸಲು ನೆರವಾಗುತ್ತದೆ. ಈ ವೇಳೆಯೂ ಇವರು ಪ್ರೋಟೀನ್, ತರಕಾರಿ ಸೇವನೆಗೆ ಒತ್ತು ನೀಡುತ್ತಾರೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications