Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಗಬ್ಬಾದಲ್ಲಿ ಭಾರತದ ನೆರವಿಗೆ ಕನ್ನಡಿಗ: ಧೋನಿ ದಾಖಲೆ ಸರಿಗಟ್ಟಿದ ರಾಹುಲ್‌

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಮಾನ ಉಳಿಸಿಕೊಂಡಿದೆ ಎಂದರೆ ಅದಕ್ಕೆ ಕಾರಣ ಕನ್ನಡಿಗ ಕೆಎಲ್ ರಾಹುಲ್. ಇವರು ತಂಡದಲ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಎಂಬ ಬಗ್ಗೆ ಸರಣಿಗೆ ತಂಡವನ್ನು ಆಯ್ಕೆಯನ್ನು ಆಡುವ ಮುನ್ನ ಎಲ್ಲರ ತಲೆಯಿತ್ತು. ಈ ವೇಳೆ ಅವರಲ್ಲಿರುವ ಕ್ಷಮತೆಯನ್ನು ಗುರುತಿಸಿ ಬಿಸಿಸಿಐ ಆಯ್ಕೆ ಸಮಿತಿ ಇವರಿಗೆ ಮಣೆ ಹಾಕಿತು. ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ರಾಹುಲ್‌ ಬ್ಯಾಟ್ ಮಾಡಿ ಎಲ್ಲರ ಗಮನ ಸೆಳೆದರು.

ಟೂರ್ನಿಯ ಆರಂಭಿಕ ಪಂದ್ಯ ಪರ್ತ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಮಾಡುವ ಕ್ಷಮತೆ ಇದೆ ಎಂದು ರಾಹುಲ್ ಸಾಬೀತು ಮಾಡಿದ್ದರು. ಚೆಂಡಿನ ಚಲನ ವಲನಗಳನ್ನು ಗುರುತಿಸಿ ಆಡುತ್ತಾ ಸಾಗಿದ ರಾಹುಲ್‌, ಟೀಮ್ ಇಡಿಯಾದ ಓಪನರ್ ಆಗಿ ಬ್ಯಾಟ್ ಮಾಡಿದರು. ಇವರ ಕ್ಲಾಸಿಕ್ ಇನಿಂಗ್ಸ್‌ ತಂಡಕ್ಕೆ ಆಧಾರವಾಯಿದರು. ಎರಡನೇ ಟೆಸ್ಟ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಬ್ರಿಸ್ಬೇನ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು.

KL Rahul s Heroics Keep India Alive in Third Test Against Australia

ಕ್ಲಾಸಿಕ್‌ ರಾಹುಲ್‌

ಕೆಎಲ್ ರಾಹುಲ್‌ ಒಬ್ಬ ಪಕ್ಕಾ ಟೆಸ್ಟ್‌ ಬ್ಯಾಟರ್‌ ರೀತಿ ಬ್ಯಾಟ್ ಮಾಡಿ ತಂಡಕ್ಕೆ ಆಧಾರವದರು. ಇವರು ಗಬ್ಬಾ ಟೆಸ್ಟ್‌ನಲ್ಲಿ ಶತಕ ಬಾರಿಸದೇ ಇದ್ದರೂ, ಶತಕಕ್ಕಿಂತ ದೊಡ್ಡ ಇನಿಂಗ್ಸ್‌ ಕಟ್ಟಿದರು. 139 ಎಸೆತಗಳನ್ನು ಎದುರಿಸಿದ ರಾಹುಲ್‌ 8 ಬೌಂಡರಿ ನೆರವಿನಿಂದ 84 ರನ್‌ ಬಾರಿಸಿದರು. ಈ ಇನಿಂಗ್ಸ್‌ನ ವಿಶೇಷತೆ ಎಂದರೆ ಒಂದೇ ಒಂದು ಸಿಕ್ಸರ್‌ನ್ನು ರಾಹುಲ್ ಬಾರಿಸಿಲ್ಲ. ಈ ಮೂಲಕ ಆಸೀಸ್‌ ಬೌಲರ್‌ಗಳನ್ನು ಕಾಡಿದರು. ಇವರು ಆತಿಥೇಯ ತಂಡದ ವಿರುದ್ಧ 19ನೇ ಬಾರಿ 50ಕ್ಕೂ ಹೆಚ್ಚು ರನ್‌ ಸಿಡಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಈ ಮೂಲಕ ದಾಖಲೆ ಬರೆದರು.

ರಾಹುಲ್ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ಬಾರಿ 50ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್‌ ಕಟ್ಟಿದ ದಾಖಲೆ ಬರೆದರು. ಈ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಅವರ ದಾಖಲೆಯನ್ನು ಸರಿಗಟ್ಟಿದರು.

KL Rahul s Heroics Keep India Alive in Third Test Against Australia

ಗಳನ್ನು ಆಡಿದ್ದಾರೆ. ಎಂಎಸ್ ಧೋನಿ ಅವರು ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ಬಾರಿ 50ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಎಂಎಸ್ ಧೋನಿ 96 ಇನ್ನಿಂಗ್ಸ್‌ಗಳಲ್ಲಿ ಈ ಕೆಲಸವನ್ನು ಮಾಡಿದ್ದಾರೆ. ರಾಹುಲ್‌ ಈ ಸಾಧನೆಯನ್ನು ಮಾಡಲು 50 ಇನಿಂಗ್ಸ್‌ ತೆಗೆದುಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್‌ ಮುಂಚೂಣಿಯಲ್ಲಿದ್ದಾರೆ. ಇವರು ಆಸ್ಟ್ರೇಲಿಯಾ ವಿರುದ್ಧ 144 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 51 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 118 ಇನ್ನಿಂಗ್ಸ್‌ಗಳನ್ನು ಆಡಿದ ನಂತರ 44 ಬಾರಿ ಈ ಸಾಧನೆ ಮಾಡಿದ್ದಾರೆ.

Story first published: Tuesday, December 17, 2024, 14:45 [IST]
Other articles published on Dec 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+