For Quick Alerts
ALLOW NOTIFICATIONS  
For Daily Alerts
 

KL Rahul: 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದ ಆರಂಭಿಕ ಆಟಗಾರ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್‌ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಎಲ್ ರಾಹುಲ್‌ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಆದರೆ ಒಟ್ಟಾರೆ ಸರಣಿಯಲ್ಲಿ ಕೆಎಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇವರಿಗೂ ಸ್ಥಾನವಿದೆ. ಈ ಅಮೋಘ ಪ್ರದರ್ಶನದ ಮೂಲಕ ರಾಹುಲ್‌ ಇಂಗ್ಲೆಂಡ್ ನೆಲದಲ್ಲಿ ವಿಶ್ವದ ಯಾವುದೇ ಆರಂಭಿಕ ಆಟಗಾರ ಮಾಡಲಾಗದ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಕೆಎಲ್ ರಾಹುಲ್‌ ಕಳೆದ 22 ವರ್ಷಗಳಲ್ಲಿ ಯಾವೊಬ್ಬ ಆರಂಭಿಕ ಬ್ಯಾಟರ್‌ ಮಾಡದ ಸಾಧನೆಯನ್ನು ಮಾಡಿದ್ದಾರೆ. ಈ ಸರಣಿಯಲ್ಲಿ ರಾಹುಲ್‌ ಆರಂಭಿಕರಾಗಿ ಕಣಕ್ಕೆ ಇಳಿದು ಆಡಿದ 5 ಟೆಸ್ಟ್ ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 53.20 ಸರಾಸರಿಯಲ್ಲಿ ಒಟ್ಟು 532 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 2 ಅರ್ಧಶತಕಗಳು ಸಹ ಸೇರಿವೆ.

KL Rahul s Historic England Feat Breaks 22-Year Record for Opening Batsmen

ಸರಣಿಯ ಎಲ್ಲ ಪಂದ್ಯಗಳಲ್ಲೂ ಕೆಎಲ್ ರಾಹುಲ್ ಅವರಿಗೆ ಒಂದು ಉತ್ತಮ ಆರಂಭ ಸಿಕ್ಕಿತ್ತು. ಇವರು ಹಲವು ಚಿಕ್ಕ ಇನ್ನಿಂಗ್ಸ್ ಕಟ್ಟಿದರೂ ಬೌಲರ್‌ಗಳನ್ನು ಕಾಡುವಲ್ಲಿ ಸಫಲವಾಗಿದ್ದಾರೆ. ಇವರು ಲೀಡ್ಸ್ ಮತ್ತು ಲಾರ್ಡ್ಸ್‌ನಲ್ಲಿ ಅವರ ಅರ್ಧಶತಕ ಮತ್ತು ಶತಕವು ಭಾರತದ ದೊಡ್ಡ ಮೊತ್ತದ ಕನಸಿಗೆ ಅಡಿಪಾಯ ಹಾಕಿದಂತಿದ್ದವು. ಆದರೆ ಈ ಪ್ರದರ್ಶನವನ್ನು ಇವರು ಓವಲ್‌ನಲ್ಲಿ ಪುನರಾವರ್ತಿಸುವಲ್ಲಿ ವಿಫಲರಾಗಿದ್ದಾರೆ. ಇವರು 5ನೇ ಟೆಸ್ಟ್‌ ಮೊದಲ ಇನಿಂಗ್ಸ್‌ನಲ್ಲಿ 14 ರನ್‌, ಎರಡನೇ ಇನ್ನಿಂಗ್ಸ್‌ನಲ್ಲಿ 7 ರನ್‌ ಸಿಡಿಸಿದರ. ಈ ಮೂಲಕ ರಾಹುಲ್ ಓವಲ್ ಟೆಸ್ಟ್‌ನಲ್ಲಿ ಕೇವಲ 21 ರನ್‌ಗಳನ್ನು ಸೇರಿಸಲು ಸಾಧ್ಯವಾಗಿದೆ.

22 ವರ್ಷದ ದಾಖಲೆ ಉಡೀಸ್‌

ಇಂಗ್ಲೆಂಡ್ ನೆಲದಲ್ಲಿ ಯಾವುದೇ ಆರಂಭಿಕ ಆಟಗಾರ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾಗಿದ್ದರು. ಆದರೆ ಈ ಸರಣಿಯಲ್ಲಿ ರಾಹುಲ್‌ ಯಶಸ್ವಿಯಾಗಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್‌ ವಿರುದ್ಧದ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 2003 ರಲ್ಲಿ 714 ರನ್‌ ಸಿಡಿಸಿದ್ದರು. ಆಗಿನಿಂದ ಯಾವೊಬ್ಬ ಆರಂಭಿಕ ಆಟಗಾರ 500 ರನ್‌ ಮಾರ್ಕ್‌ ದಾಟಿರಲಿಲ್ಲ. ಈಗ ರಾಹುಲ್‌ ದಾಟಿ ಸಾಧನೆ ಮಾಡಿದ್ದಾರೆ. ಈ ವೇಳೆಯಲ್ಲಿ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿದ್ರೂ ಸಹ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಅದರಲ್ಲಿ ವೀರೇಂದ್ರ ಸೆಹ್ವಾಗ್, ಮ್ಯಾಥ್ಯೂ ಹೇಡನ್, ರೋಹಿತ್ ಶರ್ಮಾ, ಅಲಸ್ಟೈರ್ ಕುಕ್ ಮತ್ತು ಆಂಡ್ರ್ಯೂ ಸ್ಟ್ರಾಸ್ ಅವರಂತಹ ದಂತಕಥೆಯ ಆರಂಭಿಕ ಆಟಗಾರರನ್ನು ಹಿಂದಿಕ್ಕಿದ್ದಾರೆ.

ಪಂದ್ಯದ ಚಿತ್ರಣ

ಟೀಮ್ ಇಂಡಿಯಾ 5ನೇ ಟೆಸ್ಟ್‌ ಪಂದ್ಯ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ. ಯಶಸ್ವಿ ಜೈಸ್ವಾಲ್‌ ಅರ್ಧಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರೆ, ನೈಟ್ ವಾಚ್‌ಮೆನ್‌ ಆಕಾಶ್‌ ದೀಪ್‌ ಅಜೇಯರಾಗಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸದ್ಯ ಟೀಮ್ ಇಂಡಿಯಾ 52 ರನ್‌ ಮುನ್ನಡೆ ಸಾಧಿಸಿದೆ.

Story first published: Saturday, August 2, 2025, 12:47 [IST]
Other articles published on Aug 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+