KL Rahul: ಲಾರ್ಡ್ಸ್ ಹಾನರ್ ಬೋರ್ಡ್‌ಗೆ ಕನ್ನಡಿಗ ಮತ್ತೊಮ್ಮೆ ಎಂಟ್ರಿ: ಕೆಎಲ್ ಶತಕ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಮಹತ್ವದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ತಮ್ಮ ನೈಜ್ಯ ಆಟವನ್ನು ಆಡಿದ ಕೆಎಲ್, ತಂಡಕ್ಕೆ ಆಧಾರವಾಗಿದ್ದಾರೆ. ಸರಣಿಯುದ್ದಕ್ಕೂ ಕ್ಲಾಸಿಕ್ ಬ್ಯಾಟಿಂಗ್ ನಡೆಸಿರುವ ಕೆಎಲ್ ಲಾರ್ಡ್ಸ್ ಅಂಗಳದಲ್ಲಿ ಎರಡನೇ ಟೆಸ್ಟ್ ಶತಕ ಬಾರಿಸಿ ಅಬ್ಬರಿಸಿದರು. ಈ ಶತಕದ ಮೂಲಕ ರಾಹುಲ್ ಈ ಸರಣಿಯಲ್ಲಿ ಎರಡನೇ ಶತಕ ಬಾರಿಸಿದರು.
ಶನಿವಾರ ಭಾರತ ಮೊದಲ ಇನಿಂಗ್ಸ್ ಆರಂಭಿಸಿದ್ದಾಗ ಕೆಎಲ್ ರಾಹುಲ್ ಅಜೇಯ 53 ರನ್ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಮೂರನೇ ದಿನದಾಟದ ಆರಂಭದಲ್ಲಿ ಕೆಎಲ್ ತನ್ನ ನೈಜ್ಯ ಅಂದಾಜಿನಲ್ಲಿ ಪ್ರದರ್ಶನ ನೀಡಿದರು. ಇವರು ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದರು. ಈ ಮೂಲಕ ಲಾರ್ಡ್ಸ್ ಅಂಗಳದಲ್ಲಿ ದಾಖಲೆ ಬರೆದರು. ಈ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ಪಟ್ಟಿಗೆ ಸ್ಥಾನ ಪಡೆದರು.

ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಬಾರಿಸಿದ ಐದನೇ ಶತಕವಾಗಿದೆ. ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ 4ನೇ ಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 10ನೇ ಶತಕ ಬಾರಿಸಿ ಅಬ್ಬರಿಸಿದರು. ಕೆಎಲ್ ರಾಹುಲ್ 176 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ ಮೂರಂಕಿ ಮುಟ್ಟಿ ಸಂಭ್ರಮಿಸಿದರು.
ಮತ್ತೊಂದು ದಾಖಲೆ ಬರೆದ ಕೆಎಲ್
ಲಾರ್ಡ್ಸ್ ಟೆಸ್ಟ್‌ನ ಎರಡನೇ ದಿನದಂದು, ಕೆ.ಎಲ್. ರಾಹುಲ್ ಆರಂಭಿಕನಾಗಿ ಟೆಸ್ಟ್‌ನಲ್ಲಿ ತಮ್ಮ 24 ನೇ ಅರ್ಧಶತಕ ಬಾರಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ 5 ನೇ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರಿಗೂ ಮೊದಲು ಸುನಿಲ್ ಗವಾಸ್ಕರ್ (75), ವೀರೇಂದ್ರ ಸೆಹ್ವಾಗ್ (51), ಗೌತಮ್ ಗಂಭೀರ್ (31) ಮತ್ತು ಮುರಳಿ ವಿಜಯ್ (27) ಈ ಸಾಧನೆ ಮಾಡಿದ್ದರು.

ಈ ಅಮೋಘ ಬ್ಯಾಟಿಂಗ್ ನೆರವಿನಿಂದ ಕೆಎಲ್ ರಾಹುಲ್ ಮತ್ತೊಂದು ದಾಖಲೆ ಬರೆದರು. ಸೇನಾ ದೇಶದಲ್ಲಿ ಏಷ್ಯದ ಆರಂಭಿಕರಾಗಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಮೂಲಕ ವೀರೇಂದ್ರ ಸೆಹ್ವಾಗ್ ಮತ್ತು ಸಯೀದ್ ಅನ್ವರ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಸೆನಾ ದೇಶಗಳಲ್ಲಿ ಏಷ್ಯನ್ ಓಪನರ್ ಆಗಿ ಅತಿ ಹೆಚ್ಚು 50+ ಸ್ಕೋರ್‌ಗಳನ್ನು ಗಳಿಸಿದ ದಾಖಲೆಯನ್ನು ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ.
ಸೇನಾ ದೇಶಗಳಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್ ಗಳಿಸಿದ ಏಷ್ಯಾದ ಆರಂಭಿಕರು
19 - ಸುನಿಲ್ ಗವಾಸ್ಕರ್
12 - ದಿಮುತ್ ಕರುಣರತ್ನ
11 - ಕೆಎಲ್ ರಾಹುಲ್
10- ವೀರೇಂದ್ರ ಸೆಹ್ವಾಗ್
10 - ಸಯೀದ್ ಅನ್ವರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications