ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್‌ನ 4ನೇ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಲಿದ್ದು, ಕುತೂಹಲ ಮನೆ ಮಾಡಿದೆ. ಇನ್ನು ಈ ಪಂದ್ಯದಲ್ಲಿ ಆ ಒಬ್ಬ ಪ್ಲೇಯರ್ ಆಡುತ್ತಾನಾ ಎಂಬ ಪ್ರಶ್ನೆಗಳು ಮುಡಿದ್ದು ಇನ್ನು ಇದಕ್ಕೆ ಯಾವುದೇ ನಿಖರ ಉತ್ತರ ಲಭಿಸಲಿಲ್ಲ.
ಕಳೆದ ಬಾರಿಯ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿ ಸೈ ಎನಿಸಿಕೊಂಡಿದ್ದ ಕೆಎಲ್ ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲಿದ್ದಾರೆ. ಇನ್ನು ಇವರನ್ನು ಉಳಿಸಿಕೊಳ್ಳುವಲ್ಲಿ ಎಲ್‌ಎಸ್‌ಜಿ ವಿಫಲವಾಗಿತ್ತು. ಅಲ್ಲದೆ ಇವರನ್ನು ಹರಾಜಿನ ಅಂಗಳಕ್ಕೆ ಬಿಟ್ಟಿತ್ತು. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿ ರೂಪಾಯಿ ನೀಡಿ ಖರೀದಿಸಿತು. ಈಗ ಇವರು ಡೆಲ್ಲಿ ಜೆರ್ಸಿಯಲ್ಲಿ ಕಂಗೊಳಿಸಲಿದ್ದಾರೆ. ರಾಹುಲ್ ಈ ಬಾರಿಯ ಮೊದಲ ಪಂದ್ಯದಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗಳು ಈಗಲೂ ಹಾಗೆ ಇವೆ.

ಕೆಎಲ್ ರಾಹುಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವ ಪ್ಲೇಯರ್. ಇವರು ಮಹತ್ವದ ಪಂದ್ಯಗಳಾದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದ ಪ್ಲೇಯರ್. ಇವರು ಐಪಿಎಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಆದರೆ ಕೌಟುಂಬಿಕ ಕಾರಣಗಳಿಂದ ಇವರು ಐಪಿಎಲ್‌ನ ಮೊದಲೆರೆಡು ಪಂದ್ಯಗಳಲ್ಲಿ ಆಡುವುದು ಡೌಟ್ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ನಿಖರ್ ಮಾಹಿತಿ ಇಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಇವರಿಗೆ ನೀಡಲಾಗುತ್ತದೆ ಎಂಬ ಮಾತುಗಳು ಇದ್ದವು. ಆದರೆ ಇವರನ್ನು ಬಿಟ್ಟು ಡೆಲ್ಲಿ ಮ್ಯಾನೇಜ್ಮೆಂಟ್ ಅಕ್ಷರ್ ಪಟೇಲ್ ಅವರಿಗೆ ಪಟ್ಟವನ್ನು ಕಟ್ಟಿದೆ. ದೆಹಲಿಯ ಮುಖ್ಯ ಕೋಚ್ ಹೇಮಾಂಗ್ ಬದಾನಿ ರಾಹುಲ್ ಅವರ ಸ್ಥಿತಿಯನ್ನು ಸಸ್ಪೆನ್ಸ್‌ನಲ್ಲಿ ಇರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ ತಮ್ಮ ಕಮಾಲ್ ಪ್ರದರ್ಶನ ನೀಡಿದ್ದಾರೆ. ಕೆಎಲ್ 132 ಐಪಿಎಲ್ ಪಂದ್ಯಗಳಲ್ಲಿ ಒಟ್ಟು 4686 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು 37 ಅರ್ಧಶತಕಗಳು ಸೇರಿವೆ.
ಡೆಲ್ಲಿ ಕ್ಯಾಪಿಟಲ್ಸ್ ಈ ವರೆಗೆ ಸ್ಥಿರ ಪ್ರದರ್ಶನ ನೀಡಿದ್ದು ಆದರೆ ಈ ಫ್ರಾಂಚೈಸಿ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. 2008 ರಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಡೆಲ್ಲಿ ಸ್ಟಾರ್ ಆಟಗಾರರನ್ನು ಒಳಗೊಂಡಿದ್ದರೂ ಇನ್ನು ಒಮ್ಮೆಯೂ ಕಪ್ ಗೆಲ್ಲದೆ ಇರುವುದು ಬೇಸರದ ಸಂಗತಿ. ಈ ಹಿಂದಿನ ಆವೃತ್ತಿಗಳಲ್ಲಿ ಮಾಡಲು ಆಗದ ಸಾಧನೆಯನ್ನು ಮಾಡಲು ಡೆಲ್ಲಿ ಮ್ಯಾನೇಜ್ಮೆಂಟ್ ಉತ್ತಮವಾದ ತಂಡವನ್ನು ಕಟ್ಟಿದೆ. ಈ ಬಾರಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರ ದಂಡೇ ಇದೆ. ಅಲ್ಲದೆ ದೇಶೀಯ ಆಟಗಾರರು ವಿದೇಶಿ ಆಟಗಾರರ ದಂಡೂ ಈ ತಂಡದಲ್ಲಿದ್ದೂ ಕಪ್ ಗೆಲುವಿನ ಆಸೆಯನ್ನು ಚಿಗುರಿಸಿದೆ.