Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಚಿರತೆಗಿಂತ ವೇಗವಾಗಿ ನುಗ್ಗಿದ ಕೆಎಲ್ ರಾಹುಲ್‌: ಚೆನ್ನೈನಲ್ಲಿ ಕಮಾಲ್‌ ಕ್ಯಾಚ್‌

ಟೀಮ್ ಇಂಡಿಯಾದ ಭರವಸೆಯ ಆಟಗಾರ ಕೆಎಲ್ ರಾಹುಲ್ ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಮನಮೋಹಕ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದರು. ಇದೇ ವೇಳೆಗೆ ಪಂದ್ಯವನ್ನು ಡಿಕ್ಲೇರ್ ಮಾಡಿಕೊಳ್ಳಲಾಯಿತು. ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ರಾಹುಲ್‌ ಮನಮೋಹಕ ಕ್ಯಾಚ್ ಪಡೆದರು.

ಮೊದಲ ಪಂದ್ಯದ ಮೂರನೇ ದಿನದಾಟದಲ್ಲಿ, ಭಾರತ ತಂಡವು 4 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ತನ್ನ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬಾಂಗ್ಲಾ ಗೆಲುವಿಗೆ 515 ರನ್‌ಗಳ ದೊಡ್ಡ ಗುರಿ ನೀಡಲಾಯಿತು. ಗೆಲುವಿಗೆ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಮೂರು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. ಇದೇ ವೇಳೆ ರಾಹುಲ್‌ ಚಿರತೆಗಿಂತ ವೇಗವಾಗಿ ನುಗ್ಗಿ ಕ್ಯಾಚ್ ಪಡೆದರು.

kl-rahuls-spectacular-diving-catch-dismisses-mushfiqur-rahim-in-style

ಆಗಿದ್ದೇನು?

ಪಂದ್ಯದ 34 ನೇ ಓವರ್‌ ಬೌಲ್ ಮಾಡಲು ಸ್ಪಿನ್ ಮಾಂತ್ರಿಕ ಆರ್‌.ಅಶ್ವಿನ್‌ ಮುಂದಾದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಮುಷ್ಫೀಕರ್ ರಹೀಮ್‌ ಎದುರಿಸಿದರು. ಈ ಎಸೆತವನ್ನು ಮುಷ್ಫೀಕರ್ ಮಿಡ್‌ ಆಫ್‌ ನತ್ತ ಬೀಸಿದರು. ಅಲ್ಲಿಯೇ ಫೀಲ್ಡ್‌ ಮಾಡುತ್ತಿದ್ದ ರಾಹುಲ್‌ ತಮ್ಮ ಬಲಗಡೆಗೆ ಬಿದ್ದು ಉತ್ತಮ ಕ್ಯಾಚ್‌ ಪಡೆದರು. ಚೆಂಡು ನೆಲವನ್ನು ಸ್ಪರ್ಷಿಸುವ ಮುನ್ನವೇ, ರಾಹುಲ್‌ ಕೈ ಬೆರಳುಗಳಲ್ಲಿ ಚೆಂಡು ಬಂಧಿ ಆಗಿತ್ತು.

ಈ ವಿಕೆಟ್‌ ಔಟ್‌ ನೀಡಲು ಮೂರನೇ ಅಂಪೈರ್ ಮೊರೆ ಹೋಗಲಾಯಿತು. ಪದೆ ಪದೇ ವೀಕ್ಷಿಸಿ ಟಿವಿ ಅಂಪೈರ್‌ ಕ್ಯಾಚ್‌ನ್ನು ಪರಿಶೀಲಿಸಿ ಔಟ್ ಎಂದು ತೀರ್ಪು ನೀಡಿದರು. ಕೆಎಲ್ ರಾಹುಲ್ ಚಿರತೆಯಂತೆ ಚಾಣಾಕ್ಷತನ ಪ್ರದರ್ಶಿಸಿ ಅತ್ಯುತ್ತಮ ಕ್ಯಾಚ್ ಹಿಡಿದು ರಹೀಮ್ ಗೆ ಪೆವಿಲಿಯನ್ ಹಾದಿ ತೋರಿಸಿದರು. ಮೈದಾನದಲ್ಲಿದ್ದ ಆಟಗಾರರು ರಾಹುಲ್‌ ಅವರನ್ನು ಅಭಿನಂದಿಸಿದರೆ, ಅಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಎರಡನೇ ಇನಿಂಗ್ಸ್‌ನಲ್ಲಿ 22 ರನ್

ಬಾಂಗ್ಲಾದೇಶ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ಉತ್ತಮ ಬ್ಯಾಟಿಂಗ್ ಪ್ರದರ್ಶನವಾಯಿತು. ಈ ವೇಳೆ ಟೀಮ್ ಇಂಡಿಯಾ ಪರ ಭರವಸೆಯ ಆಟಗಾರರಾದ ಶುಭಮನ್ ಗಿಲ್ ಮತ್ತು ರಿಷಬ್ ಪಂತ್ ಶತಕ ಬಾರಿಸಿ ಅಬ್ಬರಿಸಿದರು. ಇದೇ ವೇಳೆ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲು ಬಂದ ರಾಹುಲ್‌ ಉತ್ತಮ ಲಯದಲ್ಲಿ ಕಂಡು ಬಂದರು. ಕೆಎಲ್ ರಾಹುಲ್ ಈ ಇನ್ನಿಂಗ್ಸ್‌ನಲ್ಲಿ 19 ಎಸೆತಗಳಲ್ಲಿ ಅಜೇಯ 22 ರನ್ ಗಳಿಸುವಲ್ಲಿ ಯಶಸ್ವಿಯಾದರು. ರಾಹುಲ್‌ ಅವರ ಇನಿಂಗ್ಸ್‌ನಲ್ಲಿ 4 ಬೌಂಡರಿ ಸೇರಿವೆ.

Story first published: Saturday, September 21, 2024, 18:24 [IST]
Other articles published on Sep 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+