KL Rahul: ಎರಡನೇ ಟೆಸ್ಟ್ ರಾಹುಲ್ ಆಡುವುದು ಡೌಟ್? ಶತಕ ವೀರನಿಗೆ ಅವಕಾಶ ಸಾಧ್ಯತೆ
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಸೋಲು ಕಂಡಿದೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರೂ, ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿತು. ಅಲ್ಲದೆ ನ್ಯೂಜಿಲೆಂಡ್ ಗೆಲುವಿಗೆ 107 ರನ್ ಗುರಿಯನ್ನು ನೀಡಿತು. ಈ ಪಂದ್ಯವನ್ನು ಕಿವೀಸ್ ಸುಲಭವಾಗಿ ಗೆದ್ದಿತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ಆಡಲಾಗುತ್ತಿರುವ ಈ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕಂಡ ಸೋಲು ಅಂಕ ಪಟ್ಟಿಯಲ್ಲಿ ವ್ಯತ್ಯಾಸ ಮಾಡಿದೆ. ಕಿವೀಸ್ ತಂಡಕ್ಕೆ ಕೊಂಚ ಲಾಭವಾಗಿದೆ. ಟೀಮ್ ಇಂಡಿಯಾ ಸೋಲಿಗೆ ಹಲವು ಕಾರಣಗಳು ಕಾಣುತ್ತವೆ. ಆದರೆ ಪುಣೆ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರನನ್ನು ಬೆಂಚ್ ಕಾಯಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ತವರಿನಲ್ಲಿ ಕಳಪೆ ಪ್ರದರ್ಶನ
ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ತವರಿನ ಹುಡುಗ ಕೆಎಲ್ ರಾಹುಲ್ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ನಿರಾಸೆ ಅನುಭವಿಸಿದ್ದ ರಾಹುಲ್‌ಗೆ, ಎರಡನೇ ಇನಿಂಗ್ಸ್‌ನಲ್ಲಿ ಬಿಗ್ ಸ್ಕೋರ್ ಮಾಡುವ ಅವಕಾಶ ಇತ್ತು. ಆದರೆ ಅದನ್ನು ಕೈ ಚೆಲ್ಲಿದ್ದಾರೆ. ಈ ಮೂಲಕ ಒತ್ತಡದಲ್ಲಿದ್ದ ತಂಡಕ್ಕೆ ಪೆಟ್ಟು ನೀಡಿದ್ದಾರೆ. ಕೆಎಲ್ ರಾಹುಲ್ ಎರಡನೇ ಇನಿಂಗ್ಸ್‌ನಲ್ಲಿ 12 ರನ್ ಬಾರಿಸಿ ಜವಾಬ್ದಾರಿ ಮರೆತರು.
ಸತತ ಟೆಸ್ಟ್‌ನಲ್ಲಿ ವೈಫಲ್ಯ
ಕೆಎಲ್ ರಾಹುಲ್ ಅವರು ಸತತ ಕೆಲವ ವರ್ಷಗಳಿಂದ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇದು ಈ ಒಂದು ಪಂದ್ಯದಿಂದ ಹೇಳಲಾಗುತ್ತಿಲ್ಲ. ಅಂಕಿ ಅಂಶಗಳೇ ಇವರ ಕಥೆಯನ್ನು ಬಿಚ್ಚಿಟ್ಟಿವೆ. 2021ರಲ್ಲಿ ರಾಹುಲ್5 ಟೆಸ್ಟ್ ಪಂದ್ಯಗಳಲ್ಲಿ ಆಡಿ 46.10ರ ಸರಾಸರಿಯಲ್ಲಿ 461 ರನ್ ಸಿಡಿಸಿ ಭರವಸೆ ಮೂಡಿಸಿದ್ದರು. ನಂತರ ಇವರು ಲಾಂಗರ್ ಫಾರ್ಮೆಟ್‌ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದಿದ್ದಾರೆ.

2022ರಲ್ಲಿ ಇವರಿಗೆ 4 ಟೆಸ್ಟ್ ಪಂದ್ಯಗಳನ್ನು ಆಡಲು ಅವಕಾಶ ನೀಡಲಾಯಿತು. ಈ ವೇಳೆ ಅವರು ಕೇವಲ 137 ರನ್ ಕಲೆ ಹಾಕಿದ್ದಾರೆ. ಇನ್ನು 2023ರಲ್ಲಿ 3 ಟೆಸ್ಟ್ ಪಂದ್ಯಗಳ 5 ಇನಿಂಗ್ಸ್‌ನಲ್ಲಿ 143 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ. ಇನ್ನು ಪ್ರಸಕ್ತ ವರ್ಷ ಆಡಿದ 5 ಟೆಸ್ಟ್ ಪಂದ್ಯಗಳ 8 ಇನಿಂಗ್ಸ್‌ಗಳಲ್ಲಿ 33.42ರ ಸರಾಸರಿಯಲ್ಲಿ 234 ರನ್ ಕಲೆ ಹಾಕಿದ್ದಾರೆ.
ಭಾರತ ತಂಡದಲ್ಲಿ ಸದ್ಯ ಯುವ ಪಡೆ ಅವಕಾಶಕ್ಕಾಗಿ ಕಾಯುತ್ತಿದೆ. ಸಿಕ್ಕ ಅವಕಾಶದಲ್ಲಿ ಅಮೋಘ ಪ್ರದರ್ಶನ ನೀಡಿ, ತಂಡದಲ್ಲಿ ತಮ್ಮ ಸ್ಥಾನವನ್ನು ಖಾಯಂ ಮಾಡಿಕೊಳ್ಳುವ ಇರಾದೆಯನ್ನು ಯಂಗ್ ಪ್ಲೇಯರ್ಸ್ ಹೊಂದಿದ್ದಾರೆ. ಈ ವೇಳೆ ರಾಹುಲ್ ಈ ರೀತಿಯ ಪ್ರದರ್ಶನ ನಿಜಕ್ಕೂ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.

ಮಧ್ಯಮ ಕ್ರಮಾಂಕಕ್ಕೆ ಯುವ ಪ್ಲೇಯರ್
ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸರ್ಫರಾಜ್ ಖಾನ್ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ 150 ರನ್ ಸಿಡಿಸದ್ದರು. ಈ ಮೂಲಕ ಎರಡನೇ ಟೆಸ್ಟ್‌ನಲ್ಲಿ ನನ್ನನ್ನು ಆಡುವ ತಂಡದಲ್ಲಿ ಪರಿಗಣಿಸಿ ಎಂದು ಸೂಚನೆ ನೀಡಿದ್ದಾರೆ.
ಪ್ರಸಕ್ತ ತಂಡದಲ್ಲಿ ಸ್ಥಿರ ಪ್ರದರ್ಶನವನ್ನು ನಿಡುವಲ್ಲಿ ವಿಫಲರಾಗುತ್ತಿರುವ ಆಟಗಾರರ ಪಟ್ಟಿಯಲ್ಲಿ ರಾಹುಲ್ ಕಾಣಿಸಿಕೊಳ್ಳುತ್ತಿದ್ದು, ಎರಡನೇ ಟೆಸ್ಟ್‌ನಲ್ಲಿ ಇವರ ಸ್ಥಾನವನ್ನು ಸರ್ಫರಾಜ್ ಖಾನ್ ತುಂಬುವ ಸಾಧ್ಯತೆ ಎದ್ದು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications