Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಮಾಧ್ಯಮ ಕ್ರಿಕೆಟ್ ಸಮರ!

ಕ್ರೀಡೆ ಮತ್ತು ಸಾಮಾಜಿಕ ಕಳಕಳಿಯ ಮಹತ್ವದ ಹೆಜ್ಜೆಯಾಗಿ, ಹೈಪರ್ ಸ್ಪೋರ್ಟ್ಸ್ & ವೆಲ್ಫೇರ್ ಟ್ರಸ್ಟ್ ವತಿಯಿಂದ ಪ್ರತಿಷ್ಠಿತ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ (KMCL) - 2026 ಅನ್ನು ಆಯೋಜಿಸಲಾಗಿದೆ. ಈ ಅಂತರ್-ಮಾಧ್ಯಮ ಕ್ರಿಕೆಟ್ ಟೂರ್ನಿಯು ಕೇವಲ ಕ್ರೀಡಾ ಮನೋಭಾವವನ್ನು ಹೆಚ್ಚಿಸುವುದಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಯಾದ ಗರ್ಭಾಶಯ ಕ್ಯಾನ್ಸರ್ (Cervical Cancer) ಜಾಗೃತಿ ಮತ್ತು ತಡೆಗಟ್ಟುವಿಕೆಯ ಕುರಿತು ಸಂದೇಶವನ್ನು ಸಾರುವುದಾಗಿದೆ.

ಈ ಟೂರ್ನಿಯ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಪರ್ ಸ್ಪೋರ್ಟ್ಸ್ ಅಂಡ್ ವೆಲ್ಫೇರ್ ಟ್ರಸ್ಟ್‌ನ ಮುಖ್ಯಸ್ಥರಾದ ಕಿರಣ್ ಶೆಟ್ಟಿ ಅವರು, "ಮಾಧ್ಯಮ ಮಿತ್ರರಿಗಾಗಿ ಈ ವಿಶೇಷ ಟೂರ್ನಿಯನ್ನು ರೂಪಿಸಲಾಗಿದೆ. ಈ ಟೂರ್ನಿಯ ಮೂಲಕ ನಾವು ಗರ್ಭಾಶಯ ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸಲು ಆದ್ಯತೆ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

KMCL 2026 Karnataka Media Cricket for Cervical Cancer Awareness 10 Lakh Prize

ಅಂತರ್ ಮಾಧ್ಯಮ ಟೂರ್ನಿಯನ್ನು 2026ರ ಜನವರಿ ಅಥವಾ ಫೆಬ್ರವರಿ ಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ತಂಡಕ್ಕೆ 10 ಲಕ್ಷ ರೂ.ನಗದು ಬಹುಮಾನ ನೀಡಲಾಗುವುದು. ಇನ್ನು ರನ್ನರ್‌ ಅಪ್‌ ತಂಡಕ್ಕೆ 5 ಲಕ್ಷ, ಇನ್ನು ಸೆಮಿಫೈನಲ್‌ ಪ್ರವೇಶಿಸಿದ ತಂಡಗಳಿಗೆ 2.5 ಲಕ್ಷ ರೂ. ನೀಡಲಾಗುವುದು. ಈ ಟೂರ್ನಿಯಲ್ಲಿ ಆಡುವ ಮಾಧ್ಯಮ ತಂಡಗಳಿಗೆ ಪ್ರವೇಶ ಉಚಿತ ಎಂದು ಆಯೋಜಕರಾದ ಕಿರಣ್ ಶೆಟ್ಟಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿವಕುಮಾರ್ ಉಪ್ಪಳ ಉಪಸ್ಥಿತರಿದ್ದರು.

Story first published: Monday, December 1, 2025, 21:07 [IST]
Other articles published on Dec 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+