Women's ODI World Cup: ಬಾಂಗ್ಲಾ ವಿರುದ್ಧ ಇಂಗ್ಲೆಂಡ್‌ಗೆ 4 ವಿಕೆಟ್ ಜಯ
ಭರವಸೆಯ ಆಟಗಾರ್ತಿಯರಾದ ಸೋಫಿ ಎಕ್ಲೆಸ್ಟೋನ್ (24ಕ್ಕೆ 3) ಹಾಗೂ ಹೀದರ್ ನೈಟ್ (ಅಜೇಯ 79) ಇವರುಗಳ ಭರ್ಜರಿ ಆಟದ ನೆರವಿನಿಂದ ಇಂಗ್ಲೆಂಡ್ ತಂಡ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿನ 4 ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು. ಈ ಮೂಲಕ ಆಡಿದ 2 ಪಂದ್ಯಗಳನ್ನು ಗೆದ್ದ ಇಂಗ್ಲೆಂಡ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಭಾರತ ಸಹ ಇಷ್ಟೇ ಅಂಕಗಳನ್ನು ಕಲೆ ಹಾಕಿದ್ದರೂ ನಿವ್ವಳ ರನ್ ರೇಟ್‌ನಲ್ಲಿ ಇಂಗ್ಲೆಂಡ್‌ಗಿಂತ ಹಿಂದಿದ್ದರಿಂದ 2ನೇ ಸ್ಥಾನಕ್ಕೆ ಕುಸಿದಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 25 ಆಗುವಷ್ಟರಲ್ಲಿ ರುಬ್ಯಾ ಹೈದರ್ (4) ಹಾಗೂ ನಾಯಕಿ ನಿಗರ್ ಸುಲ್ತಾನ (0) ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಅವಧಿಯಲ್ಲಿ ಶರ್ಮಿನ್ ಅಖ್ತರ್, ಸೋಭಾನ ಮೊಸ್ತರಿ ಜೋಡಿ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿತು. ಆದರೆ ಶರ್ಮಿನ್ ಅಖ್ತರ್ 6 ಬೌಂಡರಿ ನೆರವಿನಿಂದ 30 ರನ್ ಬಾರಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ಸೋಭಾನ ಮೊಸ್ತರಿ ಉತ್ತಮ ಆಟವನ್ನು ಆಡಿದರು. ಆದರೆ ಇವರಿಗೆ ಯಾವೊಬ್ಬ ಬ್ಯಾಟರ್ ಉತ್ತಮ ಸಾಥ್ ನೀಡಲಿಲ್ಲ. ಇವರು 108 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 60 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೆಳ ಕ್ರಮಾಂಕದಲ್ಲಿ ರಬೇಯಾ ಖಾನ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 43 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ 3, ಲಿನ್ಸೆ ಸ್ಮಿತ್, ಚಾರ್ಲಿ ಡೀನ್, ಆಲಿಸ್ ಕ್ಯಾಪ್ಸೆ ತಲಾ 2 ವಿಕೆಟ್ ಪಡೆದರು.
ಹೀದರ್ ನೈಟ್ ಅರ್ಧಶತಕ
179 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭವೂ ಸಹ ಕಳಪೆಯಾಗಿತ್ತು. ಆರಂಭಿಕರು ಜವಾಬ್ದಾರಿ ಮರೆತರು. ನ್ಯಾಟ್ ಸ್ಕಿವರ್ ಬ್ರಂಟ್ (32) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆದರೆ ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ಧೃತಿ ಗೆಡದೆ ಬ್ಯಾಟ್ ಮಾಡಿದ ಹೀದರ್ ನೈಟ್ ಕ್ಲಾಸ್ ಆಟವನ್ನು ಆಡಿದರು. ಇವರಿಗೆ 7ನೇ ವಿಕೆಟ್‌ಗೆ ಚಾರ್ಲಿ ಡೀನ್ (ಅಜೇಯ 27) ಜೋಡಿ ತಂಡಕ್ಕೆ ಆಧಾರವಾದರು. ಈ ಜೋಡಿ 100 ಎಸೆತಗಳಲ್ಲಿ ಅಜೇಯ 79 ರನ್‌ಗಳ ಜೊತೆಯಾಟವನ್ನು ನೀಡಿ ಗೆಲುವಿನಲ್ಲಿ ಮಿಂಚಿತು. ಭರವಸೆಯ ಆಟಗಾರ್ತಿ ಹೀದರ್ ನೈಟ್ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 79 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಇಂಗ್ಲೆಂಡ್ 46.1 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್ ಕಲೆ ಹಾಕಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications