ಫಿಟ್ನೆಸ್ ಕಾಪಾಡಿಕೊಳ್ಳಲು ತಮ್ಮ ಇಷ್ಟದ ಆಹಾರವನ್ನೂ ತ್ಯಜಿಸಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಅವರಂತಹವರು ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಹೆಣಗಾಡುತ್ತಿರುವಾಗ, ದಂತಕಥೆ ಬ್ಯಾಟರ್ ವಿರಾಟ್ ಕೊಹ್ಲಿ ಕಳೆದ ಎಂಟು ವರ್ಷಗಳಿಂದ ತಮ್ಮ ತೂಕ 74.5 ರಿಂದ 75 ಕೆಜಿಯಷ್ಟಿದೆ ಎಂದು ಬಹಿರಂಗಪಡಿಸಿದ್ದಾರೆ.
ಕೊಹ್ಲಿ 2014 ರಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಪ್ರಾರಂಭಿಸಿದರು. ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಲು ಪ್ರಾರಂಭಿಸಿದರು, ನಿಯಮಿತವಾಗಿ ವರ್ಕೌಟ್ ಮಾಡಿದರು ಮತ್ತು ಫಿಟ್‌ನೆಸ್ ಅನ್ನು ಸಂಪೂರ್ಣವಾಗಿ ವಿಭಿನ್ನ ಹಂತಕ್ಕೆ ಕೊಂಡೊಯ್ದಿದ್ದಾರೆ. ಕೊಹ್ಲಿ ಕೇವಲ ಭಾರತೀಯ ಆಟಗಾರರಿಗೆ ಸ್ಪೂರ್ತಿ ಮಾತ್ರವಲ್ಲ, ಜಗತ್ತಿನಾದ್ಯಂತ ಇರುವ ಎಲ್ಲಾ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ.
2014 ರಲ್ಲಿ ಕನ್ನಡಿಯಲ್ಲಿ ನೋಡಿಕೊಂಡ ಕೊಹ್ಲಿಗೆ ತಮ್ಮ ಮುಖ ದುಂಡಾಗಿದೆ ಎನ್ನಿಸಿತ್ತು. ಸ್ವಲ್ಪ ದಪ್ಪವಾಗಿದ್ದೇನೆ ಎಂದು ಅವರು ಭಾವಿಸಿದರು. ನಂತರ ತಮ್ಮ ಫಿಟ್ನೆಸ್ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಂಡರು. ಕೊಹ್ಲಿ ಎಲ್ಲಾ ಅನಗತ್ಯ ಕ್ಯಾಲೊರಿಗಳನ್ನು ಸೇವಿಸುವುದನ್ನು ತ್ಯಜಿಸಿದರು. ಹೊಸ ಫಿಟ್ನೆಸ್ ಗುರಿಗಳನ್ನು ಹೊಂದಿಸಲು 2017 ರಲ್ಲಿ ಸಸ್ಯಾಹಾರಿಯಾಗಿ ಮಾರ್ಪಟ್ಟರು. ಚಿಕನ್ ಎಂದರೆ ತುಂಬಾ ಇಷ್ಟಪಡುತ್ತಿದ್ದ ವಿರಾಟ್ ನಂತರ ಫಿಟ್ನೆಸ್ ಕಾಪಾಡಿಕೊಳ್ಳಲು ಅದನ್ನು ತ್ಯಜಿಸಿದರು.

ರಾಗಿ ಹಲ್ವಾ ತಿನ್ನುವ ವಿರಾಟ್ ಕೊಹ್ಲಿ
ಲೆಜೆಂಡರಿ ಬ್ಯಾಟರ್ ಫಿಟೆಸ್ಟ್ ಇಂಡಿಯಾ ಕ್ರಿಕೆಟಿಗರಾಗಿದ್ದಾರೆ ಮತ್ತು YO YO ಪರೀಕ್ಷೆಯಲ್ಲಿ ಸ್ಥಿರವಾಗಿ 19 ಕ್ಕಿಂತ ಹೆಚ್ಚು ಸ್ಕೋರ್ ಮಾಡುತ್ತಾರೆ. 34 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಸುಮಾರು ಆರು ಗಂಟೆಗಳ ತಾಲೀಮು ಮಾಡುತ್ತಾರೆ ಮತ್ತು ಅವರ ತೂಕ ಕಳೆದ 8 ವರ್ಷದಿಂದ 74.5 ರಿಂದ 75 ಕೆ.ಜಿಯಷ್ಟಿದೆ ಎಂದರೆ ಅವರು ಫಿಟ್ನೆಸ್ ಬಗ್ಗೆ ಇರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಕೊಹ್ಲಿ ತಾವು ತಿನ್ನುವ ಆಹಾರದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಡೈರಿ ಉತ್ಪನ್ನಗಳನ್ನು ಅವರು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಸಿಹಿತಿಂಡಿಯನ್ನು ಇಷ್ಟಪಡುತ್ತಿದ್ದ ವಿರಾಟ್ ಕೊಹ್ಲಿಗೆ ಸಿಹಿ ತಿನ್ನಬೇಕು ಎನಿಸಿದಾಗ ರಾಗಿ ಹಲ್ವಾ ತಿನ್ನುತ್ತಾರಂತೆ.
ಜಹೀರ್ ಖಾನ್ ಅವರಿಗೆ ಜೋಬರ್ಗ್‌ನಲ್ಲಿ ಪರಿಚಯಿಸಿದ ದಕ್ಷಿಣ ಆಫ್ರಿಕಾದ ಸಿಹಿತಿಂಡಿ ಮಾಲ್ವಾ ಪುಡ್ಡಿಂಗ್ ಅನ್ನು ಇಷ್ಟಪಡುವುದಾಗಿ ಅವರು ಬಹಿರಂಗಪಡಿಸಿದರು.
ವಿರಾಟ್ ಕೊಹ್ಲಿ ತನ್ನ ಅದ್ಭುತ ಫಾರ್ಮ್ ಕಂಡುಕೊಂಡಿದ್ದಾರೆ. ಸದ್ಯ ಟಿ20 ವಿಶ್ವಕಪ್‌ನಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿರುವ ಅವರು, ಈ ಬಾರಿ ಮತ್ತು ಈವರೆಗಿನ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications