ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿಗೆ ಸಿಗುವ ಹಣ ಎಷ್ಟು ಕೋಟಿ ಗೊತ್ತಾ?
ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಇಡೀ ವಿಶ್ವದಲ್ಲೇ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹುಷ ಪ್ರಸ್ತುತ ಇರುವ ಕ್ರಿಕೆಟ್ ಆಟಗಾರರಲ್ಲಿ ಕೊಹ್ಲಿ ಎತಿ ಹೆಚ್ಚು ಜನಪ್ರಿಯತೆ ಹೊಂದಿದ ಆಟಗಾರ. ಕೊಹ್ಲಿ ಇನ್‌ಸ್ಟಾಗ್ರಾಂನಲ್ಲೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದು ಅದರಿಂದ ಕೋಟಿ ಕೋಟಿ ರುಪಾಯಿ ಗಳಿಸುತ್ತಿದ್ದಾರೆ.
ಇತ್ತೀಚೆಗೆ ತಾನೆ ಕೊಹ್ಲಿ ಟ್ವಿಟರ್‍ನಲ್ಲಿ 50 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ಮಾಡಿದ್ದರು. ಜಾಗತಿಕವಾಗಿ ಅರಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ ಕ್ರೀಡಾಪಟುಗಳನ್ನು ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ ವಿರಾಟ್ ಕೊಹ್ಲಿ.
ಇನ್‌ಸ್ಟಾಗ್ರಾಮ್‌ನಲ್ಲಿ 211 ಮಿಲಿಯನ್‌ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಕೊಹ್ಲಿ, ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮುಂತಾದವರು ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ವಿಶ್ವದ ಅತಿ ಹೆಚ್ಚು ಹಿಂಬಾಲಕರಲ್ಲಿ 14 ನೇ ಸೆಲೆಬ್ರಿಟಿಯಾಗಿದ್ದಾರೆ. ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ 1425 ಪೋಸ್ಟ್‌ಗಳನ್ನು ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಒಂದು ಪ್ರಾಯೋಜಿತ ಪೋಸ್ಟ್ ಹಾಕಲು ವಿರಾಟ್ ಕೊಹ್ಲಿ ಪಡೆಯುವ ಹಣ ಕೇಳಿದರೆ ಶಾಕ್ ಆಗುವುದು ಖಂಡಿತ. ಒಂದು ವರದಿಯ ಪ್ರಕಾರ ಒಂದು ಪ್ರಾಯೋಜಿತ ಪೋಸ್ಟ್‌ಗೆ ಕೊಹ್ಲಿ ಪಡೆಯುವ ಸಂಭಾವನೆ, 1.1 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 8.69 ಕೋಟಿ ರುಪಾಯಿ.
ಟ್ವಿಟರ್ ಪೋಸ್ಟ್‌ನಿಂದಲೂ ಸಿಗುತ್ತೆ ಕೋಟಿ ಕೋಟಿ ಹಣ
ವಿರಾಟ್ ಕೊಹ್ಲಿ 2020ರಲ್ಲಿ ಟ್ವಿಟರ್ ಖಾತೆಯಲ್ಲಿ 34 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾಗಲೇ ಪ್ರತಿ ಪ್ರಾಯೋಜಿತ ಟ್ವೀಟ್ ಗೆ 2.5 ಕೋಟಿ ರುಪಾಯಿಗಳನ್ನು ಪಡೆಯುತ್ತಿದ್ದರು. ಈಗ ಅವರ ಫಾಲೋವರ್ಸ್ ಸಂಖ್ಯೆ 50 ಮಿಲಿಯನ್ ದಾಟಿದ್ದು, ಮೂಲಗಳ ಪ್ರಕಾರ ಈಗ ಪ್ರತಿ ಟ್ವಿಟರ್ ಪೋಸ್ಟ್‌ಗೆ 5 ಕೋಟಿ ರುಪಾಯಿವರೆಗೂ ಪಡೆಯುತ್ತಿದ್ದಾರೆ.
ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ಒಟ್ಟಾರೆ 31 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಟ್ವಿಟರ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳಲ್ಲಿ ವಿರಾಟ್ ಕೊಹ್ಲಿ ಸಕ್ರಿಯರಾಗಿದ್ದಾರೆ ಮಾತ್ರವಲ್ಲದೆ ಇವುಗಳಿಂದಲೂ ಕೋಟಿ ಕೋಟಿ ರುಪಾಯಿ ಸಂಪಾದನೆ ಮಾಡುತ್ತಿದ್ದಾರೆ.
ಯುಎಇಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ 2022 ರಲ್ಲಿ ಕೊಹ್ಲಿ ಹೆಚ್ಚು ಉತ್ತಮ ಪ್ರದರ್ಶನ ನೀಡಿದರು, ಬಹುನಿರೀಕ್ಷಿತ 71 ನೇ ಶತಕ ಮತ್ತು ಎರಡು ಅರ್ಧ ಶತಕಗಳನ್ನು ಹೊಡೆದು ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತದ ಈ ಆಟಗಾರನಿಗೆ ಆಡುವ ಅವಕಾಶ ನೀಡಬೇಕು ಎಂದ ವೆಟ್ಟೋರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications