Duleep Trophy: ದುಲೀಪ್ ಟ್ರೋಫಿಯಲ್ಲಿ ಆಟಗಾರರಿಗೆ ಸಿಗುವ ಸಂಭವಾನೆ ಎಷ್ಟು?
ದುಲೀಪ್ ಟ್ರೋಫಿಯ ಪಂದ್ಯಗಳು ನಡೆಯುತ್ತಿವೆ. ಈಗ ಒಂದನೇ ಪಂದ್ಯ ಮುಗಿದಿದ್ದು, ಎಲ್ಲ ಅಭಿಮಾನಿಗಳ ಕಣ್ಣು ಈ ಟ್ರೋಫಿಯ ಮೇಲೆ ನೆಟ್ಟಿತ್ತು. ಕಾರಣ ಈ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೆ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಸಿಗುತ್ತದೆ ಎಂಬ ದೃಷ್ಟಿಯಿಂದ ಎಲ್ಲರೂ, ಈ ಪಂದ್ಯವನ್ನು ಕುತೂಹಲದಿಂದ ನೋಡುತ್ತಾ ಇದ್ದರು.
ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಹಾಗೂ ಅನುಭಬಿ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದರು. ಎಲ್ಲರೂ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿ ಭಾರತ ತಡದಲ್ಲಿ ಸ್ಥಾನ ಪಡೆಯುವ ಕನಸು ಆಟಗಾರರದ್ದಾಗಿತ್ತು. ಈ ನಿಟ್ಟಿನಲ್ಲಿ ಹಲವು ಆಟಗಾರರು ಯಶ ಕಂಡಿದ್ದಾರೆ. ಹಾಗಿದ್ದರೆ, ಈ ಟೂರ್ನಿಯಲ್ಲಿ ಆಡಿದ ಆಟಗರಾರರಿಗೆ ಎಷ್ಟು ಸಂಭಾವನೆ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ದುಲೀಪ್ ಟ್ರೋಫಿಯಲ್ಲಿ ಈ ಬಾರಿ ಶುಭಮನ್ ಗಿಲ್, ಕೆಎಲ್ ರಾಹುಲ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮಯಾಂಕ್ ಅಗರ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಭರವಸೆಯ ಆಟಗಾರರು ಕಾಣಿಸಿಕೊಂಡು ಆಯ್ಕೆದಾರರ ಮನ ಗೆದ್ದಿದ್ದಾರೆ. ಇನ್ನು ಹಲವು ಯುವ ಆಟಗಾರರು ತಮ್ಮಲ್ಲಿನ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಈ ಟೂರ್ನಿಯಲ್ಲಿ ನೀಡಿದ ಆಟಗಾರರ ಕ್ಷಮತೆಯ ಮೇಲೆ ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಲಾಗಿದೆ.
ಆಟಗಾರರ ಸಂಭವಾನೆ ಎಷ್ಟು?
ದುಲೀಪ್ ಟ್ರೋಫಿಯಲ್ಲಿ ಭಾಗವಹಿಸುವ ಆಟಗಾರರು ತಮ್ಮ ರಣಜಿ ಪಂದ್ಯಗಳಿಗೆ ಅನುಗುಣವಾಗಿ ಸಂಬಳ ಪಡೆಯುತ್ತಾರೆ. ಕ್ರಿಕ್‌ಬಜ್ ವರದಿಯ ಪ್ರಕಾರ, 41 ಅಥವಾ ಅದಕ್ಕಿಂತ ಹೆಚ್ಚು ರಣಜಿ ಪಂದ್ಯಗಳನ್ನು ಆಡಿರುವ ಆಟಗಾರರಿಗೆ ದಿನಕ್ಕೆ 60,000 ರೂ. ಸಿಗಲಿದೆ. 21 ರಿಂದ 40 ರ ನಡುವಿನ ರಣಜಿ ಪಂದ್ಯಗಳನ್ನು ಆಡಿರುವ ಆಟಗಾರರು ದಿನಕ್ಕೆ 50000 ಸಾವಿರ, ಇನ್ನು, 20 ಕ್ಕಿಂತ ಕಡಿಮೆ ರಣಜಿ ಪಂದ್ಯಗಳನ್ನು ಆಡಿರುವ ಆಟಗಾರರು ದಿನಕ್ಕೆ 40 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಚಾಂಪಿಯನ್ ಪಟ್ಟಕ್ಕೆ ಲಭಿಸುವ ಹಣವೆಷ್ಟು?
ದುಲೀಪ್ ಟ್ರೋಫಿ ಗೆದ್ದ ತಂಡಕ್ಕೆ ಈ ಮೊದಲು 50 ಲಕ್ಷ ರೂ. ನೀಡಲಾಗುತ್ತಿತ್ತು. ಆದರೆ ಬಿಸಿಸಿಐ ಈ ಬಹುಮಾನ ಮೊತ್ತವನ್ನು ಹೆಚ್ಚಿಸಿದೆ. ಈ ದುಲೀಪ್ ಟ್ರೋಫಿಯ ಚಾಂಪಿಯನ್ ತಂಡ 1 ಕೋಟಿ ರೂ. ನೀಡುವುದಾಗಿ ಘೋಷಿಸಿದೆ. ಅಲ್ಲದೆ ಫೈನಲ್‌ನಲ್ಲಿ ಸೋತ ತಂಡಕ್ಕೆ 50 ಲಕ್ಷ ರೂಪಾಯಿ ನೀಡಲಾಗುವುದು.
ಭರವಸೆಯ ಆಟಗಾರರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ?
ದುಲೀಪ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ವೇಗಿಗಳಾದ ಆಕಾಶ್ ದೀಪ್, ಯಶ್ ದಯಾಳ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಭರವಸೆಯ ಆಟಗಾರ ಕೆಎಲ್ ರಾಹುಲ್, ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್, ಯುವ ಆಟಗಾರ ಸರ್ಫರಾಜ್ ಖಾನ್ ಹಾಗೂ ಎರಡನೇ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications