For Quick Alerts
ALLOW NOTIFICATIONS  
For Daily Alerts
 

ಪಂದ್ಯ ಗೆದ್ದಾಗ ಧೋನಿ ಸ್ಟಂಪ್ ಕೊಂಡೊಯ್ಯುವುದೇಕೆ?

By ರಮೇಶ್ ಬಿ

ನವದೆಹಲಿ. ಮಾರ್ಚ್ 13: ಭಾರತ ಕ್ರಿಕೆಟ್ ತಂಡ ಪಂದ್ಯ ಗೆದ್ದ ನಂತರ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಿಂದ ಬರಿಗೈಯಲ್ಲಿ ವಾಪಸ್ ಬರೋ ಜಾಯಮಾನವನ್ನೇ ಇಟ್ಟುಕೊಂಡಿಲ್ಲ. ಕೈಯಲ್ಲಿ ಸ್ಟಂಪ್ ಗಳನ್ನು ಹಿಡಿದುಕೊಂಡೆ ಬರುತ್ತಾರೆ. ಹೌದು ... ಎಂಎಸ್ ಯಾಕೆ ಹೀಗೆ ಮಾಡುತ್ತಾರೆ? ಉತ್ತರ ಇಲ್ಲಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಈ ಬಗ್ಗೆ ಒಮ್ಮೆ ಹೇಳಿದ್ದ ಮಹೇಂದ್ರ ಸಿಂಗ್ ಧೋನಿ ಅಲ್ಲಿರುವ ಸ್ಟಂಪ್ ಗಳನ್ನು ಮ್ಯೂಸಿಯಂ ನಲ್ಲಿ ಇಡುತ್ತೇನೆ. ನಿವೃತ್ತಿ ಬಳಿಕ ವಸ್ತು ಸಂಗ್ರಹಾಲಯ ಮಾಡಲಿದ್ದೇನೆ ಎಂದು ಹೇಳಿದ್ದರು. ಆದರೆ ಅಸಲಿ ಕಾರಣ ಬೇರೆಯೇ ಇದೆ.[ನಾಯಕ ಧೋನಿ ಶರ್ಟ್ ಕಾಲರ್ ಹಿಡಿದವರು ಯಾರು?]

ms dhoni


ವಿಕೆಟ್ ಗಳನ್ನು ಧೋನಿ ತಮ್ಮ ಬಾಲ್ಯದ ಗೆಳೆಯನಿಗೆ ನೀಡುತ್ತಿದ್ದಾರಂತೆ. ಧೋನಿ ಗೆಳೆಯ ಈ ಸ್ಟಂಪ್ ಗಳನ್ನು ತೆಗೆದುಕೊಂಡು ಏನಪ್ಪಾ ಮಾಡುತ್ತಾನೆ ಅಂತ ಯೋಚಿಸುತ್ತಿದ್ದರೀರಾ?

ಕುಲ್ವಿಂದರ್ ಎಂಬ ಸ್ನೇಹಿತನಿಗಾಗಿ ಧೋನಿ ಸ್ಟಂಪ್ ಒಯ್ಯುತ್ತಿದ್ದಾರೆ. ನೇಪಾಳದ ವಾಚ್ ಮೆನ್ ಒಬ್ಬರ ಮಗನಾಗಿರುವ ಈ ಕುಲ್ವಿಂದರ್ ಶಾಲಾ ದಿನಗಳಿಂದಲೂ ಧೋನಿಗೆ ಅಚ್ಚುಮೆಚ್ಚಿನ ಸ್ನೇಹಿತ. ಧೋನಿಗಿದ್ದ ಕ್ರಿಕೆಟ್ ಉತ್ಸಾಹವನ್ನು ಗಮನಿಸಿ ಕ್ರಿಕೆಟ್ ಗೆ ಹೆಚ್ಚಿನ ಆಸಕ್ತಿ ತೋರಿಸುವಂತೆ ಪ್ರೇರಣೆ ನೀಡಿದ್ದವ.[ಧೋನಿ ರುಂಡ ಹಿಡಿದು ಹುಚ್ಚಾಟವಾಡಿದ್ದವರಿಗೆ ಮಂಗಳಾರತಿ]

ಈಗ ಕ್ರಿಕೆಟ್ ನಲ್ಲಿ ಇಡೀ ವಿಶ್ವವೇ ನಿಂತು ನೋಡುವ ಹಾಗೆ ಬೆಳೆದು ನಿಂತಿರುವ ಧೋನಿ ಅವರಿಂದ ಬಾಲ್ಯದ ಸ್ನೇಹಿತ ಕುಲ್ವಿಂದರ್ ಒಂದು ಕೊಡುಗೆಯನ್ನು ಬಯಸಿದ್ದರು. ಅದೆ ಕತೆ ಸ್ಟಂಪ್ ಕೀಳಲು ಕಾರಣವಾಗಿದೆ.

ಕುಲ್ವಿಂದರ್‌ ತನಗಾಗಿ ಸಣ್ಣದೊಂದು ಮನೆಯನ್ನು ಕಟ್ಟಿಸಿಕೊಳ್ಳುವಾಗ ಧೋನಿಯಿಂದ ಬಿಡಿಗಾಸಿನ ನೆರವನ್ನು ಕೂಡ ಯಾಚಿಸಲಿಲ್ಲ. ಆದರೆ ಆತ ಧೋನಿಯಲ್ಲಿ ಕೇಳಿಕೊಂಡದ್ದು ಒಂದೇ ಒಂದು ಭಾರತ ಗೆಲ್ಲುವ ಪಂದ್ಯದ ವಿಕೆಟ್‌ ಕಿತ್ತು ನನಗೆ ತಂದು ಕೊಡಬೇಕು. ಅದನ್ನು ಬಳಸಿಕೊಂಡು ನಾನು ನನ್ನ ಮನೆಯ ಸುತ್ತ ಅಂದದ ಬೇಲಿಯನ್ನು ಮಾಡಿಕೊಳ್ಳುವೆ.[ಅಜರುದ್ದೀನ್ ದಾಖಲೆ ಸಮಗಟ್ಟಿದ ಎಂಎಸ್ ಧೋನಿ]

ಹೌದು ಇಲ್ಲಿಯವರೆಗೆ ಧೋನಿ ಸ್ನೇಹಿತನಿಗೆ 320 ವಿಕೆಟ್‌ಗಳನ್ನು ನೀಡಿದ್ದಾರೆ. ಇಂದಿಗೂ ಧೋನಿ, ಭಾರತ ತಂಡ ಪಂದ್ಯ ಗೆದ್ದಾಕ್ಷಣ ತಪ್ಪದೇ ಮಾಡುವ ಕೆಲಸವೆಂದರೆ ತನ್ನ ಬಾಲ್ಯ ಸ್ನೇಹಿತನಿಗಾಗಿ ವಿಕೆಟ್‌ ಕಿತ್ತು ತರುವುದು.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+