ವಿರಾಟ್ ಕೊಹ್ಲಿ 95: ಆತನ ಬಗ್ಗೆ ಹೇಳಲು ಏನೂ ಇಲ್ಲ ಎಂದಿದ್ಯಾಕೆ ರೋಹಿತ್ ಶರ್ಮಾ!
ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ಮತ್ತೊಂದು ಅಮೋಗ ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿಯೂ ಭಾರತದ ಪರವಾಗಿ ಬ್ಯಾಟಿಂಗ್‌ನಲ್ಲಿ ನಿರ್ಣಾಯಕ ಪಾತ್ರವಹಿಸಿದರು ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ. 95 ರನ್‌ಗಳನ್ನು ಬಾರಿಸಿದ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಈ ವಿಶ್ವಕಪ್ ಟೂರ್ನಿಯಲ್ಲಿನ ಅಜೇಯ ಓಟ ಮುಂದುವರಿಯಲು ಕಾರಣವಾದರು ಕೂಡ ತಮ್ಮ 49ನೇ ಶತಕವನ್ನು ಪೂರ್ಣಗೊಳಿಸುವಲ್ಲಿ ವಿಫಲವಾದರು. ಆದರೆ ಈ ಶ್ರೇಷ್ಠ ಇನ್ನಿಂಗ್ಸ್‌ಗೆ ಈಗ ಭಾರೀ ಮೆಚ್ಚಿಉಗೆಗಳು ವ್ಯಕ್ತವಾಗುತ್ತಿದೆ.
ಇನ್ನು ವಿರಾಟ್ ಕೊಹ್ಲಿಯ ಈ ಆಟದ ಬಗ್ಗೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕೂಡ ಪ್ರತಿಕ್ರಿಯೆ ನೀಡದ್ದು ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ. ಕೊಹ್ಲಿ ಇಂಥಾ ಇನ್ನಿಂಗ್ಸ್‌ಗಳನ್ನು ಕಳೆದ ಹಲವಾರು ವರ್ಷಗಳಿಂದ ಆಡಿಕೊಂಡು ಬರುತ್ತಿದ್ದಾರೆ. ಆತನ ಬಗ್ಗೆ ಹೆಚ್ಚಾಗಿ ಏನನ್ನೂ ಹೇಳುವ ಅಗತ್ಯವಿಲ್ಲ ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ.

ಸ್ಮರಣೀಯ ಗೆಲುವಿಗೆ ಕಾರಣವಾದ ಕೊಹ್ಲಿ
ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಜೇಯ ಶತಕ ಬಾರಿಸಿದ್ದು 48ನೇ ಒಡಿಐ ಶತಕವನ್ನು ಪೂರ್ಣಗೊಳಿಸಿದ್ದರು. ಅದಾದ ನಂತರ ಈ ಪಂದ್ಯದಲ್ಲಿ 49ನೇ ಶತಕವನ್ನು ಪೂರ್ಣಗೊಳಿಸುವ ಅತ್ಯದ್ಭುತ ಅವಕಾಶ ವಿರಾಟ್ ಕೊಹ್ಲಿ ಮುಂದಿತ್ತು. ಆದರೆ 95 ರನ್‌ಗಳಾಗಿದ್ದಾಗ ಕೊಹ್ಲಿ ಸಿಕ್ಸರ್ ಸಿಡಿಸುವ ಪ್ತಯತ್ನದಲ್ಲಿದ್ದಾಗ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು. ಹೀಗಾಗಿ ಸಚಿನ್ ದಾಖಲೆ ಸರಿಗಟ್ಟಲು ವಿಫಲವಾಗಿದ್ದಾರೆ. ಆದರೆ ಈ ಪಂದ್ಯದಲ್ಲೊ ಭಾರತಕ್ಕೆ ಮತ್ತೊಂದು ಸ್ಮರಣೀಯ ಜಯಕ್ಕೆ ಕೊಹ್ಲಿ ಕಾರಣವಾದರು.
ಕೊಹ್ಲಿ ಆಟದ ಬಗ್ಗೆ ಹೇಳಲು ಏನೂ ಇಲ್ಲ ಎಂದ ರೋಹಿತ್
ಕೊಹ್ಲಿಯ ಈ ಅದ್ಭುತ ಇನ್ನಿಂಗ್ಸ್ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದು ಹೀಗೆ: "ವಿರಾಟ್ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. ಕಳೆದ ಹಲವಾರು ವರ್ಷಗಳಿಂದ ನಾವು ಅವರ ಇಂಥಾ ಆಟವನ್ನು ನೋಡಿಕೊಂಡು ಬಂದಿದ್ದೇವೆ. ಇಂಥಾ ಸಂದರ್ಭದಲ್ಲಿ ಆತನಿಗೆ ಆತನೇ ಬೆಂಬಲವನ್ನು ನೀಡಿಕೊಂಡು ಬಂದಿದ್ದಾರೆ. ಕೊನೆಯ ಹಂತದಲ್ಲಿ ಕೆಲ ವಿಕೆಟ್‌ಗಳು ಉರುಳಿದಾಗ ನಮ್ಮ ಮೇಲೆ ಒತ್ತಡವಿತ್ತು. ಆದರೆ ಕೊಹ್ಲಿ ಹಾಗೂ ಜಡೇಜಾ ಈ ಗೆಲುವವನ್ನು ನಮ್ಮದಾಗಿಸಿದರು" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.
ಅದ್ಭುತ ಜೊತೆಯಾಟದಲ್ಲಿ ಭಾಗಿಯಾದ ಕೊಹ್ಲಿ
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ 274 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಮತ್ತೊಂದು ಅದ್ಭುತ ಆರಂಭ ದೊರೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಜೋಡಿ 71 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಆದರೆ 5 ರನ್‌ಗಳ ಅಂತರದಲ್ಲಿ ರೋಹಿತ್ ಹಾಗೂ ಗಿಲ್ ವಿಕೆಟ್ ಕಳೆದುಕೊಂಡ ಬಳಿಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಕಣಕ್ಕಿಳಿದರು.
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಭಾರತದ ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಐಯ್ಯರ್, ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಜೊತೆಗೆ ಅದ್ಭುತ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಈ ಮೊತ್ತದತ್ತ ಮುನ್ನಡೆಸಲು ಕಾರಣವಾದರು. ಈ ಮೂಲಕ ಟೀಮ್ ಇಂಡಿಯಾ ಈ ವಿಶ್ವಕಪ್‌ನಲ್ಲಿ 5ನೇ ಗೆಲುವು ದಾಖಲಿಸಿದೆ.
ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಅಬ್ಬರ
ಇನ್ನು ಇದಲ್ಲೂ ಮುನ್ನ ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾದ ಮೇಲುಗೈಗೆ ಕಾರಣವಾದವರು ಮೊಹಮ್ಮದ್ ಶಮಿ. ಈ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಅಮೋಘ ದಾಖಲಿ ಸಂಘಟಿಸಿದ ಶಮಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಹೀಗಾಗಿ ನ್ಯೂಜಿಲೆಂಡ್ ತಂಡ ಈ ಪಂದ್ಯದಲ್ಲಿ 273 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications