For Quick Alerts
ALLOW NOTIFICATIONS  
For Daily Alerts
 

ವಿರಾಟ್‌, ರೋಹಿತ್‌ ಆರ್ಭಟ: ಫ್ಲೈಟ್‌ ಹತ್ತುವ ಮುನ್ನವೇ ಕಿವೀಸ್‌ಗೆ ಭಯ

ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ಅಬ್ಬರಿಸಿದ್ದಾರೆ. ಸ್ಟಾರ್ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೇಶೀಯ ಟೂರ್ನಿಯಲ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ತಾವಿಬ್ಬರೂ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. ಇಬ್ಬರೂ ತಮ್ಮ ತಮ್ಮ ರಾಜ್ಯದ ಪರ ಅಮೋಘ ಶತಕ ಬಾರಿಸಿ ಮಿಂಚಿದ್ದಾರೆ.

ಜೈಪೂರದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಮೊದಲ ಬ್ಯಾಟ್ ಮಾಡಿದ ಸಿಕ್ಕಿಂ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 236 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿತು. ಮುಂಬೈ 30.3 ಓವರ್‌ಗಳಲ್ಲಿ 2 ವಿಕೆಟ್‌ಗೆ 237 ರನ್‌ ಸೇರಿಸಿತು. ಈ ವೇಳೆ ಟೀಮ್ ಇಂಡಿಯಾದ ಭರವಸೆಯ ಆಟಗಾರ ರೋಹಿತ್ ಶರ್ಮಾ ಶತಕ ಬಾರಿಸಿ ಅಬ್ಬರಿಸಿದರು.

Kohli and Rohit Smash Centuries in Vijay Hazare Trophy Ahead of New Zealand Series

ಮುಂಬೈ ತಂಡದ ಆರಂಭಿಕರಾದ ಅಂಗ್‌ಕ್ರಿಶ್ ರಘುವಂಶಿ ಹಾಗೂ ರೋಹಿತ್‌ ಶರ್ಮಾ ಅಬ್ಬರಿಸಿತು. ಈ ಜೊಡಿ 19.4 ಓವರ್‌ಗಳಲ್ಲಿ 1 ವಿಕೆಟ್‌ಗೆ 141 ರನ್‌ ಸೇರಿಸಿತು. ಭರವಸೆಯ ಆಟಗಾರ ರೋಹಿತ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌ ನಡೆಸಿದರು. ಇವರು 94 ಎಸೆತಗಳಲ್ಲಿ 18 ಬೌಂಡರಿ, 9 ಸಿಕ್ಸರ್‌ ಸಹಾಯದಿಂದ 155 ರನ್‌ ಬಾರಿಸಿ ಸ್ಫೋಟಿಸಿದರು. ಸಹೋದರರಾದ ಮುಶೀರ್ ಖಾನ್ ಹಾಗೂ ಸರ್ಫಾರಜ್‌ ಖಾನ್‌ ಜೊಡಿ ಮುಂಬೈ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. 155 ರನ್‌ ಬಾರಿಸಿ ಆರ್ಭಟಿಸಿದ ರೋಹಿತ್‌ ಶರ್ಮಾ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿರಾಟ್‌ ಕೊಹ್ಲಿ ವೀರಾವೇಶ

ಡಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ದೆಹಲಿ ವಿರುದ್ಧ ಮೊದಲು ಬ್ಯಾಟ್ ಮಾಡಿದ ಆಂಧ್ರ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 298 ರನ್‌ ಸೇರಿಸಿತು. ಆಂಧ್ರ ಪರ ರಿಕ್ಕಿ ಭುಯಿ 105 ಎಸೆತಗಳಲ್ಲಿ 11 ಬೌಂಡರಿ, 7 ಸಿಕ್ಸರ್ ನೆರವಿನಿಂದ 122 ರನ್‌ ಸೇರಿಸಿದ್ದರು. ದೆಹಲಿ ತಂಡದ ಪರ ಸಿಮರ್ಜೀತ್ ಸಿಂಗ್ 54 ರನ್‌ ನೀಡಿ 5 ವಿಕೆಟ್‌ ಪಡೆದರು.

Kohli and Rohit Smash Centuries in Vijay Hazare Trophy Ahead of New Zealand Series

ದೆಹಲಿ ತಂಡದ ಆರಂಭಿಕ ಆಟಗಾರ ಅರ್ಪಿತ್ ರಾಣಾ (0) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಪ್ರಿಯಾಂಶ್‌ ಆರ್ಯ (74) ಹಾಗೂ ವಿರಾಟ್‌ ಕೊಹ್ಲಿ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಪ್ರಿಯಾಂಶ್‌ ಆರ್ಯ 44 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ 74 ರನ್‌ ಸಿಡಿಸಿದರು. ವಿರಾಟ್‌ ಕೊಹ್ಲಿ 101 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಾಯದಿಂದ 131 ರನ್‌ ಸೇರಿಸಿ ಅಬ್ಬರಿಸಿದರು. ದೆಹಲಿ ತಂಡದ ಪರ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಸಿಮರ್ಜೀತ್ ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Wednesday, December 24, 2025, 19:08 [IST]
Other articles published on Dec 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+